ಕಾಳಗಿ ಪ.ಪಂ. ಚುನಾವಣೆ: 1 ಮತದ ಅಂತರದಿಂದ ಕಾಂಗ್ರೆಸ್ ಗೆಲುವು

ಕಾಳಗಿ: ಪಟ್ಟಣ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 1 ಮತದ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಸಾಲಿಯಾ ಬೇಗಂ ಮೆಹಬೂಬ್ ಬೇಗ್ ಹಾಗೂ ಬಿಜೆಪಿಯ ರಮೇಶ್ ಕಿಟ್ಟದ್ ನಡುವೆ ಪೈಪೋಟಿ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಸಾಲಿಯಾ ಬೇಗಂ 7 ಮತ ಪಡೆದು ಜಯಗಳಿಸಿದರೆ, ಬಿಜೆಪಿ ಅಭ್ಯರ್ಥಿ ರಮೇಶ್ 6 ಮತ ಪಡೆದು ಸೋಲು ಅನುಭವಿಸಿದರು.

ಉಪಾಧ್ಯಕ್ಷರಾಗಿ ಶರಣು ಬೇಲೂರು ಆಯ್ಕೆಯಾಗಿದ್ದಾರೆ.

ನಂತರ ಸಂಸದ ಸಾಗರ್ ಖಂಡ್ರೆ, ಎಂಎಲ್‌ಸಿ ಜಗದೇವ್ ಗುತ್ತೇದಾರ್, ಜಿಲ್ಲಾಧ್ಯಕ್ಷ ಕಿರಣ್ ದೇಶಪಾಂಡೆ, ರಾಜ್ಯ ಉಪಾಧ್ಯಕ್ಷ ಸುಭಾಷ್ ರಾಥೋಡ್ ಅವರು ಮಾತನಾಡಿದರು. ಈ ವೇಳೆ ಮುಖಂಡರಾದ ಭೀಮರಾವ್ ಟಿ.ಟಿ, ಅನಿಲ್‌ಕುಮಾರ್ ಜಮಾದಾರ್, ರಾಜೇಶ್ ಗುತ್ತೇದಾರ್, ಪ್ರವೀಣ್ ಟಿ.ಟಿ, ರಾಘವೇಂದ್ರ ಗುತ್ತೇದಾರ್, ದೇವೇಂದ್ರಪ್ಪ ಹೆಬ್ಬಾಳ್ ಪ್ರದೀಪ್ ಡೊಣ್ಣುರ್, ಹಾಗೂ ಅನೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪ ಸ್ಥಿತರಿದ್ದರು

ವರದಿ: ರಮೇಶ್ ಎಸ್ ಕುಡಹಳ್ಳಿ

error: Content is protected !!