ನೂತನ ಆಡಳಿತಸೌಧದಲ್ಲಿ ಉಗುಳಿದ್ದಕ್ಕೆ 200 ರೂಪಾಯಿ ದಂಡ ವಿಧಿಸಿದ ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ

ಚಿಂಚೋಳಿ ಚಂದಾಪುರ ಪಟ್ಟಣದ ನೂತನ ಆಡಳಿತ ಸೌಧದಲ್ಲಿ ಶೌಕತ್ ಅಲಿ ರಾಶಿದ ಮಿಯ್ಯ ಗಾರಂಪಳ್ಳಿ ಗ್ರಾಮದ ವರು ಗುಟಕಾ ತಿಂದು ದಂಡಾಧಿಕಾರಿ ಕಾರ್ಯಲಯದ ಪಕ್ಕದಲ್ಲಿ ಉಗುಳಿದನ್ನು ಕಂಡ ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ರವರು ಗರಂ ಆಗಿ ಬುದ್ದಿವಾದ ಹೇಳಿ ಇದು ಸಾರ್ವಜನಿಕ ಅನುಕೂಲ ಕ್ಕಾಗಿ ಇರುವಂತಹ ಕಾರ್ಯಲಯವಿದ್ದು ಇದನ್ನು ಸ್ವಚ್ಛ ಇಟ್ಟುಕೊಳ್ಳುವ ಕೆಲಸ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಜ್ಞಾನವಂತರು ಮಾಡುವಂತಹ ಕೆಲಸ ಇದು ಅಲ್ಲ ಪ್ರತಿನಿತ್ಯ ನೂರಾರು ಸಂಖ್ಯೆಯ ಜನ ಬರುತ್ತಾರೆ ಸ್ವಚ್ಛ ಪರಿಸರದಲ್ಲಿ ಇದ್ದರೆ ಪ್ರತಿಯೊಬ್ಬರಿಗೂ ಕೆಲಸ ಮಾಡುವ ಹುಮ್ಮಸ್ಸು ಬರುತ್ತದೆ ಅದೇ ರೀತಿ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕೆಲಸಗಳು ಸುಗಮವಾಗುತ್ತವೆ ಎಂದು ಹೇಳಿ 200 ದಂಡವನ್ನು ಹಾಕಿದರು.
ಶೌಕತ ಅಲಿ ರಾಶಿದ ಮಿಯ್ಯ ವ್ಯಕ್ತಿ ಇನ್ನೊಮ್ಮೆ ನಾನು ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಕ್ಷಮಾಪಣೆಯನ್ನು ಕೇಳಿದರು. ಈ ಸಂದರ್ಭದಲ್ಲಿ ಗ್ರೇಟ್ 2 ತಹಸೀಲ್ದಾರ್ ವೆಂಕಟೇಶ ದುಗ್ಗನ, ಸಿಬ್ಬಂದಿ ಉಮೇಶ, ಉಲ್ಲಾಸ ಕೆರೋಳ್ಳಿ
ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!