ಕುರಿಗಾಹಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯದಲ್ಲಿ ಕುರಿ ಮೇಯಿಸಲು ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ

ಬೀಳಗಿ : ತಾಲ್ಲೂಕಿನ ಕುರಿಗಾಹಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಅರಣ್ಯದಲ್ಲಿ ಕುರಿ ಮೇಯಿಸಲು ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಹಾಗೂ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಸಾಂಪ್ರದಾಯಿಕ ಕುರಿಗಾಹಿಗಳ ಹಿತ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಾರ್ಯಾಲಯ ವರೆಗೆ ಕುರಿಗಳೊಂದಿಗೆ ಮೆರವಣಿಗೆ ಮಾಡಿ ತಹಸೀಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬೀಳಗಿ ತಹಶೀಲ್ದಾರ್ ಅವರು ಮನವಿ ಸ್ವಿಕರಿಸಿ ಕುರಿಗಾಹಿಗಳ ಸಮಸ್ಯೆಗಳನ್ನು ಆಲಿಸಿ ಅರಣ್ಯಾಧಿಕಾರಿಯ ಜೊತೆ ಸಭೆಯನ್ನು ಮಾಡಿ ಸ್ಥಳೀಯವಾಗಿ ಕುರಿಗಾಹಿಗಳಿಗೆ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸೂಚನೆ ನೀಡಿದರು.

ಪ್ರತಿಭಟನೆಯಲ್ಲಿ ಕುರಿಗಾಹಿಗಳ ಬೆನ್ನಿಗೆ ನಿಂತಿರುವ ಕ್ರಾಂತಿಯ ಕಿಡಿ ಯಲ್ಲಪ್ಪ ಹೆಗ್ಗಡೆ ಬೀಳಗಿ ತಾಲ್ಲೂಕಿನ ಕುರಿಗಾಹಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.

ವರದಿ : ಖಾಜಾ ಮೈನುದ್ದಿನ್ ತಹಸೀಲ್ದಾರ್

error: Content is protected !!