ಕುಡಹಳ್ಳಿ ಗ್ರಾಮದಲ್ಲಿ ಸುಮಾರು 4-5 ವರ್ಷದಿಂದ ಪಾಳು ಬಿದ್ದ ಅಂಗನವಾಡಿ ಶಾಲೆ ಕಟ್ಟಡ, ಜೀವ ಕೈಲಿ ಹಿಡಿದು ಬದುಕುತ್ತಿರುವ ಸುತ್ತ ಮುತ್ತ ಮನೆಯ ವಾಸಸ್ಥರು

ಕಾಳಗಿ : ತಾಲೂಕಿನ ಹೇಲಚೆರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಡಹಳ್ಳಿ ಗ್ರಾಮದ ಹರಿಜನ ಓಣಿಯಲ್ಲಿ ಅಂಗನವಾಡಿ ಕೇಂದ್ರ ವಿದ್ದು ಸುಮಾರು 4-5ವರ್ಷಗಳ ಹಿಂದೆ ಸ್ವಲ್ಪ ಕಟ್ಟಡ ಬೀಳುವ ಪರಿಸ್ಥಿತಿ ಇದ್ದ ಕಾರಣ ಬೇರೆ ಕಡೆ ಬಾಡಿಗೆ ಮನೆ ಯಲ್ಲಿ ಅಂಗನವಾಡಿ ಕೇಂದ್ರ ನೆಡಸುತ್ತಿದ್ದಾರೆ 4-5ವರ್ಷ ಗಳಿಂದ ನಮ್ಮ ಗ್ರಾಮಕ್ಕೆ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿ ಕೊಡಿ ಅಂತ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳುದರೆ ಅಪ್ರೂಲ್ ಆಗಿದೆ ಅಂತ 4ವರ್ಷ ಗಳಿಂದ ಕುಂಟು ನೆಪ ಹೇಳುತ್ತಿದ್ದಾರೆ ಹಾಗೂ ತಹಸೀಲ್ದಾರ್ ಅವರಿಗೆ ಕೂಡ ಅನೇಕ ಬಾರಿ ಮನವಿ ಮಾಡಿದರು ಕೂಡ ಗಮನ ಹರಿಸೀತಿಲ್ಲ ಅಂಗನವಾಡಿ ಶಾಲೆ ಪೂರ್ತಿ ಹಾಳಾಗಿ ಹೋಗಿರುವದರಿದ ಸುತ್ತ ಮುತ್ತಲಿನ ಜನರಿಗೆ ಪ್ರಾಣ ಭಯ ಉಂಟು ಮಾಡುತ್ತಿದ್ದು ಈ ಕೂಡಲೆ ಅಂಗನವಾಡಿ ಕಟ್ಟಡವನ್ನು ಡೆಮೋಲಿಸ್ಟ್ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಿ ಕೊಡಬೇಕೆಂದು jk ಕನ್ನಡ ವತಿಯಿಂದ ಜನರು ಮನವಿ ಮಾಡಿಕೊಂಡಿದ್ದಾರೆ.

ವರದಿ : ರಮೇಶ್ ಎಸ್ ಕುಡಹಳ್ಳಿ
Jk ಕನ್ನಡ ನ್ಯೂಸ್ ಕಾಳಗಿ

error: Content is protected !!