ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ‌ಸದಾ ಸಿದ್ದ : ಶಾಸಕ ಅಶೋಕ್ ಪಟ್ಟಣ

ರಾಮದುರ್ಗ : ಗ್ರಾಮ ಪಂಚಾಯತ್ ನೌಕರರ ಯಾವುದೇ ಸಮಸ್ಯೆಗಳು ಇದ್ದರೆ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವದಾಗಿ ತಾಲೂಕ ಪಂಚಾಯತ್ ನಲ್ಲಿ ನಡೆದ ಗ್ರಾಮ ಪಂಚಾಯತ್ ನೌಕರರ ಏಳನೇ ತಾಲೂಕ ಸಮ್ಮೇಳನವನ್ನು ಉದ್ಘಾಟಿಸಿ ಶಾಸಕರಾದ ಶ್ರೀ ಅಶೋಕ್ ಅಣ್ಣ ಪಟ್ಟಣ ರವರು ಮಾತನಾಡಿದರು. ಈಗಾಗಲೇ ತಾವು ಹೋರಾಟ ನಡೆಸಿ ಕೆಲವೊಂದು ಬೇಡಿಕೆ ಪಡೆದುಕೊಂಡಿದ್ದೀರಿ. ನಿಮ್ಮ ಇನ್ನುಳಿದ ಬೇಡಿಕೆಗಳ ಬಗ್ಗೆ ನಿಮ್ಮ ಮುಖಂಡರ ಜೊತೆ ಮಾತನಾಡಿ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಪಂಚಾಯತ್ ನೌಕರರಿಗೆ ಇಡೀ ರಾಜ್ಯದಲ್ಲಿ ಸಂಘಟಿಸಿ ನಿರಂತರ ಹೋರಾಟ ಮಾಡಿದ್ದರ ಫಲವಾಗಿ ಇವತ್ತು ಪಂಚಾಯತ್ ನೌಕರರನ್ನು ಕನಿಷ್ಠ ವೇತನ ಕಾಯ್ದೆಯಲ್ಲಿ ಸೇರಿಸಿ ವೇತನ ಸಿಗುತ್ತಿರುವದು ಹೆಮ್ಮೆಯ ವಿಷಯ. ಅಷ್ಟೇ ಅಲ್ಲ! ಮೊದಲು ತೆರಿಗೆ ವಸೂಲಿ ಮಾಡಿ ವೇತನ ಪಡೆಯುತ್ತಿದ್ದೆವು. ಈಗ ಸರ್ಕಾರದ ನಿಧಿಯಿಂದ ವೇತನ ಪಡೆಯುತ್ತಿರುವದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಇನ್ನೂ ಪಿಂಚಣಿಗಾಗಿ ನಮ್ಮ ಹೋರಾಟ ನಿರಂತರ ನಡೆಯಬೇಕಾಗಿದೆ. ತಾವೆಲ್ಲರೂ ಈ ಹೋರಾಟಕ್ಕೆ ಸಿದ್ದರಾಗಬೇಕೆಂದು ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಜಿ ಎಂ ಜೈನೆಖಾನ್ ಪಂಚಾಯತ್ ನೌಕರರ ಹೋರಾಟವನ್ನು ಸ್ಮರಿಸುತ್ತಾ ಮಾತನಾಡಿದರು.

ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ತಯಾರಾದರೆ ನಮ್ಮ ಬೇಡಿಕೆಗಳು ಖಂಡಿತವಾಗಿ ಈಡೇರುತ್ತವೆ. ಎಂದು ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ  ನಾಗಪ್ಪ ಸಂಗೊಳ್ಳಿ ಮಾತನಾಡಿದರು.

ಕೇಂದ್ರ ರಾಜ್ಯ ಸರಕಾರದ ಖಾಸಗೀಕರಣದ  ನೀತಿಯಿಂದ ಪಂಚಾಯತ್ ನೌಕರರು ಮುಂದಿನ ಅವಧಿಯಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಇದೆ ಅದಕ್ಕೆ ಕೇಂದ್ರ ರಾಜ್ಯ ಸರ್ಕಾರದ ಖಾಸಗಿಕರಣದ ನೀತಿಯನ್ನು ವಿರೋಧಿಸಿ ನಾವೆಲ್ಲ ಹೋರಾಟಕ್ಕೆ ತಯಾರಾಗೋಣವೆಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದ  ನೌಕರ ಸಂಘದ ಅಧ್ಯಕ್ಷರಾದ ದಿಲೀಪ ಬೋವಿ ಹೋರಾಟಕ್ಕೆ ಕರೆಕೊಟ್ಟರು.

ಕೊನೆಯಲ್ಲಿ ತಾಲೂಕ ಸಮಿತಿ ರಚನೆ ಮಾಡಲಾಯಿತು ಗ್ರಾಮ ಪಂಚಾಯತ್ ನೌಕರ ಸಂಘದ ಅಧ್ಯಕ್ಷರಾಗಿ ದಿಲೀಪ್ ಬೋವಿ, ಕಾರ್ಯದರ್ಶಿಯಾಗಿ ಕೇಶವ ದಾಸರ, ಖಜಾಂಚಿಯಾಗಿ ರಮೇಶ್ ತಿಗಡಿ ಇವರ ಜೊತೆ 21 ಜನರ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಿ ತಾಲೂಕ ಸಮಿತಿ ರಚಿಸಲಾಯಿತು .

ಅಂಗನವಾಡಿ ನೌಕರ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಮಾಳಶೆಟ್ಟಿ, ಪಂಚಾಯತ್ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿ ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದು ಶುಭ ಕೋರಿ ಮಾತನಾಡಿದರು.

ವರದಿ – Md ಸೋಹಿಲ ಭೈರಕದಾರ ಜೆಕೆ ನ್ಯೂಸ ಕನ್ನಡ ರಾಮದುರ್ಗ

error: Content is protected !!