ವಿಜಯಪುರದಲ್ಲಿ ಗಜಾನನ ಮಹಾಮಂಡಳ ಗಣೇಶನ ಉತ್ಸವ ಮೂರ್ತಿಯ ವಿಸರ್ಜನೆ

ವಿಜಯಪುರ : ಗಣೇಶೋತ್ಸವ ವಿಸರ್ಜನೆ ವೇಳೆ ವಿದ್ಯುತ್ ಅವಘಡದಿಂದ ಯುವಕ ಅಸುನೀಗಿ, ಕೆಲವು ಯುವಕರು ಗಾಯಗೊಂಡಿರುವ ಘಟನೆ ನಡೆದ ಹಿನ್ನೆಲೆಯಲ್ಲಿ ಈ ಬಾರಿ ಗಜಾನನ ಮಹಾಮಂಡಳ ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆ ಸಾಂಕೇತಿಕವಾಗಿ ನಡೆಯಿತು.
ಪ್ರತಿ ವರ್ಷ ಹತ್ತಾರು ರೀತಿಯ ಕಲಾ ತಂಡಗಳೊAದಿಗೆ ವಿಜೃಂಭಣೆಯಿAದ ನಡೆಯುವ ಮೆರವಣಿಗೆಗೆ ಈ ಬಾರಿ ಸಾಂಪ್ರದಾಯಿಕತೆ ಮಾತ್ರ ಸೀಮಿತವಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಿಗೂ ಸಹ ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಿಲ್ಲ.
ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಾಂಕೇತಿಕ ಮೆರವಣಿಗೆ ಸಂಚರಿಸಿ ತಾಜ್ ಬಾವಡಿ ಬಳಿ ಇರುವ ಕೃತಕ ಹೊಂಡದಲ್ಲಿ ಗಣೇಶನ ಮೂರ್ತಿ ವಿಸರ್ಜಿಸಲಾಯಿತು.
ವಿಸರ್ಜನೆಗೂ ಮುನ್ನ ಪೂಜೆ ನೆರವೇರಿಸಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಗಣೇಶ ಹಬ್ಬದ ಸಂದರ್ಭದಲ್ಲಿ ವಿದ್ಯುತ್ ಅವಘಢ ಸಂಭವಿಸಿರುವುದು ನೋವು ತರಿಸಿದೆ, ಭಗವಂತ ಆ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲ ಎಂದು ಗಣೇಶನಲ್ಲಿ ಪ್ರಾರ್ಥಿಸುವೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮೊನ್ನೆ ನಡೆದ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ, ಈ ರೀತಿಯ ಘಟನೆಗಳು ಯಾವತ್ತೂ ನಡೆಯಬಾರದು, ಎಲ್ಲರಿಗೂ ಒಳಿತಾಗಲಿ ಎಂದು ವಿಘ್ನನಿವಾರಕನಲ್ಲಿ ಪ್ರಾರ್ಥಿಸುವೆ ಎಂದರು. ಸರ್ಕಾರ ಕೂಡಲೇ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಘಟನೆಯಲ್ಲಿ ಗಾಯಗೊಂಡವರಿಗೂ ಸಹ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದರು.
ಗಜಾನನ ಮಹಾ ಮಂಡಳ ವತಿಯಿಂದಲೂ ಕುಟುಂಬಕ್ಕೆ ನೆರವಾಗುವ ಕಾರ್ಯ ಮಾಡಲಾಗುವುದು ಎಂದರು.
ವಿದ್ಯುತ್ ಅವಘಢದಲ್ಲಿ ಅಸುನೀಗಿದ
ಶುಭಂ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಣೆ ಮಾಡಲಾಯಿತು‌.
ಗಜಾನನ ಮಹಾಮಂಡಳ ಅಧ್ಯಕ್ಷ ರಾಜು ಹುನ್ನೂರ, ಪ್ರಮುಖರಾದ ಸಂಜೀವ ಐಹೊಳಿ, ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ಸಿದ್ಧು ಮಲ್ಲಿಕಾರ್ಜುನಮಠ, ಅಪ್ಪು ಸಜ್ಜನ, ರಾಜು ಬಿರಾದಾರ್ ಬಸವರಾಜ್ ಹಳ್ಳಿ ರಾಜೇಂದ್ರ ವಾಲಿ, ಸಂಪತ್ ಕೋವಳ್ಳಿ, ಸತೀಶ್ ಪಾಟೀಲ್ ಆರ್ ಕೆ ಸುರ್ಪುರ್ ಸಂತೋಷ ಜಾಧವ, ಮಳುಗೌಡ ಪಾಟೀಲ, ವಿವೇಕ್ ತಾವರಗೇರಿ ಅನಿಲ್ ಉಪ್ಪಾರ್ ಸಂಗಮೇಶ್ ಹೌದೆ ಮಹೇಶ್ ಜಾದವ್ ಸಂತೋಷ್ ಜಾದವ್ ಸತೀಶ್ ಪಾಟೀಲ್ ಚಿನ್ನು ಚಿನಗುಂಡಿ ಆನಂದ ಮುಚ್ಚಂಡಿ ವಿಜಯಕುಮಾರ್ ಕುವಳ್ಳಿ ಸಾಗರ್ ಅಡಿಕೆ ವಿಜಯ ಜೋಶಿ, ಸಚಿನ್ ಅಡಕಿ, ರಾಜು ಸೂರ್ಯವಂಶಿ, ಪ್ರಭಾಕರ ಭೋಸ್ಲೆ, ರಾಮು ಹೊಸಪೇಟಿ ಸಂತೋಷ್ ಕವಲ್ದಾರ್ ರಾಜೇಶ್ ತೌಸೆ ವಿನಾಯಕ್ ದಹಿಂಡಿ ಮೊದಲಾದವರು ಪಾಲ್ಗೊಂಡಿದ್ದರು.

ವರದಿ : ಅಜೀಜ್ ಪಠಾಣ.

error: Content is protected !!