ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರ ಮಾತಿನಿಂದಲೇ ಅವರ ಮೂಲ ಸಂಸ್ಕೃತಿ ಗೊತ್ತಾಗುತ್ತೆ : ಆನಂದ ಟೈಗರ

ಕಲ್ಬುರ್ಗಿ ಉಸ್ತುವಾರಿ ಮಂತ್ರಿ ಹಾಗೂ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್, ಐ.ಟಿ.ಬಿ.ಟಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಆರ್ ಎಸ್ ಎಸ್ ಹಾಗೂ ಬಿಜೆಪಿ ನಾಯಕರು ತಮ್ಮ ನಾಲಿಗೆಯ ಮೇಲೆ ಹಿಡಿತವಿಟ್ಟುಕೊಳ್ಳಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕರ್ನಾಟಕ ಜನತೆ ತಮಗೆ ತೋರಿಸಬೇಕಾಗುತ್ತದೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದ ಮೇಲೆ ನಿರಂತರವಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರು ಎಲುಬಿಲ್ಲದ ನಾಲಿಗೆ ಎಂದು ಅರಿತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಖಂಡನೀಯ ಸಚಿವ ಪ್ರಿಯಾಂಕ ಖರ್ಗೆ ಅವರು ಲಕ್ಷಾಂತರ ಯುವಕರ ಕಣ್ಮಣಿ ಅಭಿವೃದ್ಧಿಯ ಹರಿಕಾರರು, ಸದಾ ಕ್ರಿಯಾಶೀಲರು, ಅಭಿವೃದ್ಧಿಯ ಮೂಲ ಮಂತ್ರ ಎಂದು ಜನಸೇವೆಗಾಗಿ ದುಡಿತ್ತಿರುವರು.
ಸಚಿವ ಪ್ರಿಯಾಂಕ ಖರ್ಗೆ ಸಂವಿಧಾನದ ಅಡಿಯಲ್ಲಿ ದಾಖಲಾತಿಗಳು ಇಟ್ಟುಕೊಂಡು ಕ್ರಿಯಾಶೀಲರಾಗಿ ಬಡಜನರ ಹಾಗೂ ಕರ್ನಾಟಕ ಜನತೆಗೆ ಒಳ್ಳೆಯದನ್ನು ಮಾಡುತ್ತಿರುವುದು ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರಿಗೆ ಸಹಿಸುವುದು ಆಗುತ್ತಿಲ್ಲ!
ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರು ಕೇವಲ ಮನಸ್ಮೃತಿಯ ಪರಿಪಾಲಕರು ಅಷ್ಟೇ ಇವರಿಗೆ ಬಡಜನರ ಒಳಿತು ಹಾಗೂ ಅವರ ಅಭಿವೃದ್ಧಿ ಬೇಕಾಗಿರದಂತಹ ವಿಷಯ
ಸಚಿವ ಪ್ರಿಯಾಂಕ ಖರ್ಗೆ ಆಸೆ ಬಡವರ ಮಕ್ಕಳು ಬೆಳೆದು ಉನ್ನತ ಹುದ್ದೆಯನ್ನು ಅಲಂಕರಿಸುವುದು ಅವರ ಕನಸು ಅವರ ತದ್ವಿರುದ್ಧ ಎಂಬಂತೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರ ಆಸೆ ಬಡಜನರ ಮಕ್ಕಳು ಕೇವಲ ದ್ವೇಷ ರಾಜಕಾರಣದಲ್ಲಿ ಮಾತ್ರ ಪಾಲ್ಗೊಂಡು ಬಿಜೆಪಿ ಆರ್ ಎಸ್ ಎಸ್ ನಾಯಕರ ಹೊಟ್ಟೆ ತುಂಬಿಸಬೇಕು ಬಡಜನರ ಏಳಿಗೆಗೆ ಅವರು ಸಹಿಸುವುದಿಲ್ಲ, ಕೇವಲ ಡಾಂಬಿಗೀತನ ಅಷ್ಟೇ.
ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರ ಯಾವ ರೀತಿ ಎಂದರೆ
“ಕೊಟ್ಟ ಕುದುರೆಯನ್ನೇ ಏರದವನು ಧೀರನು ಅಲ್ಲ ಶೂರನು ಅಲ್ಲ! ಎಂಬ ಸತ್ಯದಂತೆ ಇವರ ನಡೆ ಪ್ರತಿನಿತ್ಯ ಕಾಣುತ್ತದೆ.
ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರೇ ನಿಮಗೆ ನಿಜವಾಗಲೂ ತಾಕತ್ತು ಇದ್ದರೆ ಸಚಿವ ಪ್ರಿಯಾಂಕ ಖರ್ಗೆ ಅವರ ವಿರುದ್ಧ ದಾಖಲಾತಿ ಇಟ್ಟುಕೊಂಡು ಅಭಿವೃದ್ಧಿಯ ವಿಷಯಗಳನ್ನು ಬಗ್ಗೆ ಚರ್ಚೆ ಗೇ ಬಂದು ತಮ್ಮ ಪೌರುಷವನ್ನು ತೋರಿಸಬಹುದು ಅದು ತಮ್ಮಿಂದ ಆಗೋದಿಲ್ಲ ಎಂಬುದು ಕೂಡ ಗೊತ್ತಿದೆ.
ಇದೇ ರೀತಿ ಮುಂದಿನ ದಿನಗಳಲ್ಲಿ ತಮ್ಮ ನಿಲುವು ಸಚಿವ ಪ್ರಿಯಾಂಕ್ ಹಾಗೂ ಅವರ ಕುಟುಂಬ ಬಗ್ಗೆ ಅವಾಚ್ಯ ಶಬ್ದಗಳಾಗಲ್ಲಿ ಅಥವಾ ಹಗುರವಾಗಿ ಮಾತನಾಡಿದರೆ ಲಕ್ಷಾಂತರ ಯುವಕರ ಕಣ್ಮಣಿ ಆಗಿರುವಂತಹ ಸಚಿವ ಪ್ರಿಯಾಂಕ ಖರ್ಗೆ . ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕರ್ನಾಟಕ ಜನತೆ ತಮ್ಮದೇ ದಾಟಿಯಲ್ಲಿ ತಕ್ಕ ಉತ್ತರ ನೀಡಲು ಸಿದ್ದರಾಗುತ್ತಾರೆ ಎಂದು ಪುರಸಭೆ ಅಧ್ಯಕ್ಷ ಆನಂದ ಟೈಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!