ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಗಡಿಪಾರು ಮಾಡಿ ಸೂರ್ಯಕಾಂತ್ ಡಿ ಶರ್ಮಾ ಆಗ್ರಹ

ಚಿತ್ತಾಪುರ : ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಇದೆ ವರ್ಷ ಉದ್ಘಾಟನೆ ಯಾಗಿತ್ತು. ಕೆಲವು ಸಮಾಜ ಘಾತಕ ಕಿಡಿಗೇಡಿಗಳು ನೂತನ ಮೂರ್ತಿ ಯನ್ನು ಭಗ್ನ ಗೊಳಿಸಿದ್ದು ಅಪರಾಧ ಈ ಘಟನೆ ಅತ್ಯಂತ ಖಂಡನೆಯಾಗಿದೆ ಎಂದು ಸೂರ್ಯಕಾಂತ್ ಡಿ ಶರ್ಮಾ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಕೊಡ್ಲಿ ಕಾಳಗಿ ಬ್ಲಾಕ ಕಾಂಗ್ರೆಸ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು ಮಹಾಪುರುಷರ ಯಾವದೇ ಒಂದು ಸಮಾಜಕ್ಕೆ ಸೀಮಿತ ವಾಗಿರುವದಿಲ್ಲ ಅವರನ್ನು ಎಲ್ಲಾ ಸಮಾಜದವರು ಗೌರವಿಸುತ್ತಾರೆ. ಮುತ್ತಗಾ ಗ್ರಾಮದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿರುವದು ಭಾವನತ್ಮಕವಾಗಿ ಕೂಲಿ ಕಬ್ಬಲಿಗ ಸಮಾಜಕ್ಕೆ ದಾಳಿ ಮಾಡಿದಂತಾಗಿದೆ. ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ ಗೊಳಿಸಿರುವ ಸಮಾಜ ಘಾತಕ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವದರ ಜೊತೆಗೆ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಹಾಗು ಜಿಲ್ಲಾಡಳಿತದಿಂದ ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ನವರ ನೂತನ ಮೂರ್ತಿಯನ್ನು ನಿರ್ಮಾಣ ಮಾಡಿಕೊಡಬೇಕೆಂದು ಅಗ್ರಹಿಸಿದ್ದಾರೆ.

ವರದಿ : ರಮೇಶ್ ಕುಡಹಳ್ಳಿ

error: Content is protected !!