ಕಸದಲ್ಲಿ ನಾಡ ಪಿಸ್ತೂಲ್, ಮೂರು ಗುಂಡುಗಳು ಪತ್ತೆ

ಕಾಳಗಿ : ತಾಲೂಕಿನ ಚಿಂಚೋಳಿ (ಎಚ್ )ಗ್ರಾಮದಲ್ಲಿ ಕಸದಲ್ಲಿ ನಾಡಪಿಸ್ತೂಲ್ 3 ಗುಂಡುಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಅಂತಕ ಸೃಷ್ಟಿಸಿದೆ ಗ್ರಾಮದಲ್ಲಿ ಮಾಳಪ್ಪ ಅಂಬಣ್ಣ ಹೋಗೊಂಡ ಟೈಲರ್ ಕೆಲಸ ಮಾಡುತ್ತಿದ್ದರು ಇವರು ಟೈಲರ್ ಅಂಗಡಿಯಲ್ಲಿ ಬಿದ್ದ ಬಟ್ಟೆ ಚಿಂದಿ, ಕಸ ದಿನಾಲೂ ಅಂಗಡಿ ಮುಂದಿರುವ ಸಿ ಸಿ ರಸ್ತೆ ಪಕ್ಕದಲ್ಲಿ ಜಮಾ ಮಾಡಿ ಮೂರು ನಾಲ್ಕು ದಿನಗಳಿಗೊಮ್ಮೆ ಬೆಂಕಿ ಹಚ್ಚಿ ಸುಡುತ್ತಿದ್ದರು ಹಾಗೆ ಕಸ ಸುಡುವಾಗ ಮಂಗಳವಾರ ಬೆಂಕಿಯಿಂದ ಜೋರಾದ ಶಬ್ದ ಕೇಳಿ ಬಂತು.ಏನಿದೆ ಎಂದು ನೀರು ಹಾಕಿ ಬೆಂಕಿ ನೆಂದಿಸಿ.ಕಸದಲ್ಲಿ ನೋಡಿದಾಗ ನಾಡ ಪಿಸ್ತೂಲ ಮೂರು ಗುಂಡುಗಳು ಪತ್ತೆಯಾಗಿವೆ.ತಕ್ಷಣವೇ ಮಾಳಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಇದರ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕಟನೆ ದಾಖಲಾಗಿದೆ

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!