ರಾಮದುರ್ಗ| ಕಾರ್ಮಿಕ ಕಾರ್ಡ್ ಹಾಗೂ ಐಡಿ ಕಾರ್ಡ್ ವಿತರಣಾ ಸಮಾರಂಭ

ರಾಮದುರ್ಗ : ತಾಲೂಕ ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ (ರಿ) ವತಿಯಿಂದ ಎಲ್ಲಾ ಪದಾಧಿಕಾರಿಗಳಿಗೆ ಸದಸ್ಯರುಗಳಿಗೆ ಕಾರ್ಮಿಕ ಕಾರ್ಡ್ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ರಾಮದುರ್ಗ ಪಟ್ಟಣದ ತಾಲೂಕ ಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶ್ರೀ ರಮೇಶ ಮ ರಾಯಬಾಗ ವಹಿಸಿಕೊಂಡಿದ್ದರು ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಬಸಪ್ಪ ಬಾರ್ಕಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಉದಯವಾಣಿ ಪತ್ರಿಕೆಯ ಹಿರಿಯ ಪ್ರಸರಣ ಅಧಿಕಾರಿ ಶ್ರೀ ಮಾರುತಿ ಕೊಳೆಕರ ಹಾಗೂ ಸೌದತ್ತಿ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯನ ಅಧ್ಯಕ್ಷರಾದ ಶ್ರೀ ಈರಣ್ಣ ಕರಲಿಂಗಣ್ಣವರ ಉಪನ್ಯಾಸಕರಾಗಿ ಆಗಮಿಸಿದ್ದರು .
ಮುಖ್ಯ ಅತಿಥಿಗಳಾಗಿ ಹುಕ್ಕೇರಿ ತಾಲೂಕ ಫೋಟೋಗ್ರಾಫರ್ ಅಸೋಸಿಯನ ಅಧ್ಯಕ್ಷರಾದ ಅಪ್ಪು ಹುಕ್ಕೇರಿ ಉಪಾಧ್ಯಕ್ಷರಾದ ಶಿವಾನಂದ ಪಾಟೀಲ್ ಕಾರ್ಯದರ್ಶಿ ಬಸವರಾಜ್ ದಾರೋಜಿ ಆಗಮಿಸಿದ್ದರು.

ಶ್ರೀಯುತ ಅಪ್ಪು ಹುಕ್ಕೇರಿಯವರು ಮಾತನಾಡಿ ಸಂಘಟನೆ ಮುಖಾಂತರ ನಾವೆಲ್ಲ ನಡೆದರೆ ಹೊಸ ಹೊಸ ತಂತ್ರಜ್ಞಾನಗಳನ್ನ ಕಲಿಯಬಹುದು ಎಂದು ಛಾಯಾಗ್ರಹಕರಿಗೆ ಕಿವಿಮಾತು ಹೇಳಿದರು ಉಪನ್ಯಾಸಕ ಮಾರುತಿ ಕೋಳೆಕರ್ ಮಾತನಾಡಿ ವೃತ್ತಿ ಬದುಕಿನ ಜೊತೆಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಛಾಯಾಗ್ರಹಕರು ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು.

ತಾಲೂಕ ಪಂಚಾಯತ್ ಸಭಾಭವನದಲ್ಲಿ ಜರುಗಿದ ಈ ಸಮಾರಂಭದಲ್ಲಿ ರಾಮದುರ್ಗ ತಾಲೂಕಿನ ಎಲ್ಲಾ ಛಾಯಾಗ್ರಾಹಕರಿಗೆ ಐ ಡಿ ಕಾರ್ಡ್ ಜೊತೆಗೆ ಟೀ ಶರ್ಟ್ ಅನ್ನ ವಿತರಿಸಿದರು.

ಈ ಸಂದರ್ಭದಲ್ಲಿ ಎಲ್ಲ ರಾಮದುರ್ಗ ತಾಲೂಕ ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ಎಲ್ಲಾ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

ಛಾಯಾಗ್ರಹಕ್ಕ ಮೌನೇಶ್ ಪತ್ತಾರ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ಮಾಧ್ಯಮ ಮಿತ್ರ ವೀರೇಶ್ ಬಳಗೇರ್ ಕಾರ್ಯಕ್ರಮಕ್ಕೆ ವಂದಿಸಿದರು.

ವರದಿ : Md ಸೋಹಿಲ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ

error: Content is protected !!