ವಿಜಯಪುರ : ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಭಂಧಿಸಿರುವ ಕ್ರಮ ಖಂಡನೀಯ

ವಿಜಯಪುರ : ಸಂತರನ್ನು ಮುಟ್ಟಿದವರು ಯಾರು ಉಳಿದಿಲ್ಲ, ಜನಕಳಕಳಿಯ ಮತ್ತು ಸಮಾಜಮುಖಿ ಸಂತರನ್ನು ಅಡ್ಡಿಪಡಿಸಿ, ಕಾಂಗ್ರೆಸ್ ಸರ್ಕಾರ ತನ್ನ ಸಂಕುಚಿತ ಮನಸ್ಸನ್ನು ಮತ್ತೊಮ್ಮೆ ಸಾಬೀತುಮಾಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೂ ಧರ್ಮದ ಪರವಾಗಿ ಮಾತನಾಡುವೇ ಅಪರಾಧವೇ? ಹಿಂದೂ ದೇವರ ಬಗ್ಗೆ ಅವಹೇಳನದ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಳಜಿಯಿಂದ ಕನೇರಿ ಗುರುಗಳು ಕೆಲವೊಂದು ವಿಚಾರಗಳನ್ನು ಪ್ರತಿಪಾದಿಸಿದ್ದರು, ರಾಜ್ಯ ಸರ್ಕಾರದ ಕೆಲವು ನೀತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯ ಹಂಚಿಕೊAಡ ಮಾತ್ರಕ್ಕೆ ಶ್ರೀಗಳಿಗೆ ಜಿಲ್ಲೆಗೆ ಪ್ರವೇಶಸಿದಂತೆ ನಿರ್ಬಂಧ ಹೇರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀಗಳಿಗೆ ದೊಡ್ಡ ಅಪಮಾನ ಮಾಡಿ ಪ್ರಜಾಪ್ರಭುತ್ವ ತತ್ವಗಳಿಗೆ ವಿರೋಧವಾಗಿ ನಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಜೀವನೋಪಾಯ, ಸ್ವಾವಲಂಬಿ ಯೋಜನೆಗಳು, ಕೌಶಲ್ಯ ತರಬೇತಿ ಮುಂತಾದ ಕ್ಷೇತ್ರಗಳಲ್ಲಿ ಅನನ್ಯ ಸೇವೆ ನೀಡಿರುವ ಶ್ರೀ ಕನೇರಿ ಮಠದ ಸ್ವಾಮೀಜಿಯವರನ್ನು ಎಲ್ಲಾ ಸಮುದಾಯದ ಜನರು ಗೌರವದಿಂದ ನೋಡಿಕೊಳ್ಳುತ್ತಾರೆ. ಹಿಂದೂ ಸಂಸ್ಕೃತಿ ಮತ್ತು ಸನಾತನ ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ, ಇಂತಹ ಮಹಾನ್ ಸಂತರನ್ನು ಈ ರೀತಿ
ಬಯಲುಪಡಿಸಿದೆ. ಹಿಂದೂ ಧರ್ಮೀಯ ಗುರುಗಳು ಮತ್ತು ಸರ್ಕಾರಿ ನೀತಿಗಳ ವಿರುದ್ಧ ಧ್ವನಿ ಎತ್ತುವವರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡುವುದು ಈ ಪಕ್ಷದ ಹಳೆಯ ರಣತಂತ್ರವಾಗಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.
ಸಿದ್ದರಾಮಯ್ಯನವರು ಮಾತೆತ್ತಿದರೆ ವಾಕ್ ಸ್ವಾತಂತ್ರ‍್ಯ ಕಾಂಗ್ರೆಸ್ ಆಡಳಿತ ಹಿಟ್ಲರ್ ರೀತಿ ದಬ್ಬಾಳಿಕೆಯ ಆಡಳಿತವಾಗಿದೆ. ಜನತೆಯ ಮಾತುಗಳನ್ನು, ನಿಜದ ಸಂದೇಶಗಳನ್ನು ಹಾಗೂ ಸಂತರ ಆಶಯಗಳನ್ನು ನಿಗ್ರಹಿಸುವ ಈ ಕಾಂಗ್ರೆಸ್ ಆಡಳಿತದ ವಿರುದ್ಧ ಎಲ್ಲಾ ವರ್ಗಗಳ ಜನರು ಒಟ್ಟಾಗಿ ಪ್ರತಿಭಟಿಸಬೇಕಾದ ಅವಶ್ಯಕತೆ ಇದೆ ಎಂದು ಜಿಗಜಿಣಗಿ ಹೇಳಿದ್ದಾರೆ.

ವರದಿ : ಅಜೀಜ ಪಠಾಣ.

error: Content is protected !!