ಮಹಿಳೆಯರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಚಿನ್ನದ ಮಾಂಗಲ್ಯ ಸರಗಳನ್ನು ಸುಲಿಗೆ ಮಾಡಿದ್ದ ಇಬ್ಬರು ವ್ಯಕ್ತಿಗಳ ಬಂಧನ

75.62 ಗ್ರಾಂ ಚಿನ್ನದ ಮಾಂಗಲ್ಯ ಸರಗಳು ಮತ್ತು 1 ದ್ವಿ-ಚಕ್ರ ವಾಹನ ವಶ. ಮೌಲ್ಯ 6.54 ಲಕ್ಷ.

ಗಿರಿನಗರ ಪೊಲೀಸ್ ಸರಹದ್ದಿನ, ಹೊಸಕೆರೆಹಳ್ಳಿಯಲ್ಲಿ ವಾಸವಾಗಿರುವ ಪಿರ್ಯಾದುದಾರರು ದಿನಾಂಕ:13/09/2025 ರಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ಮತ್ತು ಆಕೆಯ ಸ್ನೇಹಿತೆಯು ದಿನಾಂಕ:13/09/2025 ರಂದು ರಾತ್ರಿ ಗಣೇಶೋತ್ಸವಕ್ಕೆ ಹೋಗಿದ್ದ ತಮ್ಮ ಮಕ್ಕಳನ್ನು ಕರೆದುಕೊಂಡು ಬರಲು ಈಶ್ವರಿ ಸ್ಕೂಲ್‌ ರಸ್ತೆಯಲ್ಲಿ ಹೋಗುತ್ತಿರುವಾಗ, ದ್ವಿ-ಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂದಿನಿಂದ ಬಂದು, ಹಿಂಬದಿಯಲ್ಲಿ ಕುಳಿತಿದ್ದ ಓರ್ವ ವ್ಯಕ್ತಿ ಪಿರ್ಯಾದುದಾರರಿಗೆ ಮಾರಕಾಸ್ತ್ರವನ್ನು ತೋರಿಸಿ ಬೆದರಿಸಿ, ಕುತ್ತಿಗೆಯಲ್ಲಿದ್ದ 09 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು, ನಂತರ ಪಿರ್ಯಾದುದಾರರ ಸ್ನೇಹಿತೆಗೆ ಮಾರಕಾಸ್ತ್ರವನ್ನು ತೋರಿಸಿ, ಅವರಿಂದಲೂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದಾಗ, ಪಿತ್ಯಾದುದಾರರ ಸ್ನೇಹಿತೆಯು ವಿರೋಧಿಸಿದಾಗ, ಆಕೆಯ ಕೈಯಿಗೆ ಮಾರಕಾಸ್ತ್ರದಿಂದ ಹೊಡೆದು ಕೈ ಬೆರಳುಗಳಿಗೆ ರಕ್ತ ಗಾಯಗೊಳಿಸಿ, 45 ಗ್ರಾಂನ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ತಿಳಿಸಿರುತ್ತಾರೆ.
ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:18/09/2025 ರಂದು ಹೊಸಕೆರೆಹಳ್ಳಿಯ ನಂದನವನ ಪಾರ್ಕ್ ಬಳಿ ಬೈಕ್‌ನಲ್ಲಿ ಮಾರಕಾಸ್ತ್ರವನ್ನಿಟ್ಟುಕೊಂಡು ನಿಂತಿದ್ದ ಓರ್ವ ವ್ಯಕ್ತಿಯನ್ನು ದ್ವಿ-ಚಕ್ರ ವಾಹನ ಮತ್ತು ಮಾರಕಾಸ್ತ್ರ ಸಮೇತ ವಶಕ್ಕೆ ಪಡೆಯಲಾಯಿತು.

ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಆತನು ಮತ್ತೋರ್ವ ಸಹಚರನ ಜೊತೆ ಈ ಪ್ರಕರಣ ಸೇರಿದಂತೆ ಮತ್ತೆರಡು ಪ್ರಕರಣಗಳಲ್ಲಿ ಚಿನ್ನದ ಮಾಂಗಲ್ಯ ಸರಗಳನ್ನು ಅಪಹರಣ ಮಾಡಿರುವುದಾಗಿ, ಹಾಗೂ ಮತ್ತೊಂದು ಪ್ರಕರಣದಲ್ಲಿ ದ್ವಿ-ಚಕ್ರ ವಾಹನ ಕಳುವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.

ದಿನಾಂಕ:19/09/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 05 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಸುಲಿಗೆ ಮಾಡಿದ ಚಿನ್ನದ ಮಾಂಗಲ್ಯ ಸರಗಳನ್ನು ರಾಮನಗರ ಟೌನ್‌ನ ಜ್ಯೂವೆಲ್ಲರಿ ಅಂಗಡಿ, ಹಾಗೂ ನೆಲಮಂಗಲದ ಆಗ್ಲಾಂಟ್ ಗೋಲ್ಡ್‌ಟೇಕ್ ಕಂಪನಿಯಲ್ಲಿ ಅಡಮಾನವಿಟ್ಟಿರುವುದಾಗಿ ಮತ್ತು ಆರೋಪಿಯ ತಾಯಿಗೆ ನೀಡಿರುವುದಾಗಿ ತಿಳಿಸಿರುತ್ತಾನೆ.

ತನಿಖೆ ,, :20/09/2025 50 24/09/2025 ថ ម 2 75.62 ಚಿನ್ನದ ಮಾಂಗಲ್ಯ ಸರಗಳನ್ನು, 01 ದ್ವಿ-ಚಕ್ರ ವಾಹನವನ್ನು ವಶಕ್ಕೆ ಪಡೆಯಲಾಯಿತು. ಒಟ್ಟು ಮೌಲ್ಯ 6.54,000/-(ಆರು ಲಕ್ಷದ ಐವತ್ತನಾಲ್ಕು ಸಾವಿರ ರೂಪಾಯಿ).

ದಿನಾಂಕ:24/09/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

ದಿನಾಂಕ:09/10/2025 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ವ್ಯಕ್ತಿಯನ್ನು ಕೆರೆಕೊಡಿ ಬಸ್ ಸ್ಟಾಪ್ ಬಳಿ ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.

ಈ ಪ್ರಕರಣದ ಆರೋಪಿಗಳ ಬಂಧನದಿಂದ 1) ಗಿರಿನಗರ ಪೊಲೀಸ್ ಠಾಣೆಯ-01 ಸರ ಅಪಹರಣ ಪ್ರಕರಣ, 2) ಕೋಣನಕುಂಟೆ ಪೊಲೀಸ್ ಠಾಣೆಯ-01 ಸರ ಅಪಹರಣ ಪ್ರಕರಣ, 3) ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ-01 ಸರ ಅಪಹರಣ ಪ್ರಕರಣ, 4) ಕೋಣನಕುಂಟೆ ಪೊಲೀಸ್ ಠಾಣೆಯ-01 ದ್ವಿ-ಚಕ್ರ ವಾಹನ ಕಳವು ಪ್ರಕರಣ, ಸೇರಿದಂತೆ ಒಟ್ಟು 04 ಪ್ರಕರಣಗಳು ಪತ್ತೆಯಾಗಿರುತ್ತವೆ.

ವರದಿ : ಮುಬಾರಕ್ ಬೆಂಗಳೂರು

error: Content is protected !!