ರೆಡ್ ಡೈಮಂಡ್ ಪೇರಲ: ಸಚಿವ ಎಂಬಿ ಪಾಟೀಲ್ ಮತಕ್ಷೇತ್ರ ಬಾಬಾನಗರದ ನೆಲದಲ್ಲಿ ಅರಳುತ್ತಿದೆ ಹಸಿರು ವಜ್ರ!

ವಿಜಯಪುರ : ಬಾಬಾನಗರದ ಪ್ರಗತಿಪರ ರೈತರಾದ ಶ್ರೀ ಸಿದ್ರಾಮಪ್ಪ ಬಿರಾದಾರ್ ಅವರು ಸಚಿವ ಎಂ ಬಿ ಪಾಟೀಲ್ ಭೇಟಿಮಾಡಿದರು. ತಮ್ಮ 1 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮೂಲಕ ರೆಡ್ ಡೈಮಂಡ್ ತಳಿಯ ಪೇರಲ ಹಣ್ಣು ಬೆಳೆಯುತ್ತಿರುವುದಾಗಿ ತಿಳಿಸಿ ತಾವು ಬೆಳೆದ ಪೇರಲ ಹಣ್ಣಿನ ಉಡುಗೊರೆ ನೀಡಿದರು.

ದೂರದ ಗುಜರಾತ್ ನಿಂದ ಈ ವಿಶೇಷ ತಳಿಯ ಬೀಜ ತರಿಸಿ ಹಣ್ಣು ಬೆಳೆದಿರುವುದಾಗಿ ತಿಳಿಸಿದ ಅವರು ಹೆಚ್ಚಿನ ನೀರಾವರಿ ಬೇಡುವ ಈ ತಳಿಗೆ ನಮ್ಮ ನೀರಾವರಿ ಯೋಜನೆಗಳು ನೆರವಾದವೆಂದು ಅಭಿಮಾನದಿಂದ ನುಡಿದರು.

ವರ್ಷಕ್ಕೆ 2 ಬಾರಿ ಬೆಳೆಯಬಹುದಾದ ಹಣ್ಣು ಇದಾಗಿದ್ದು ವಾರ್ಷಿಕ ರೂ. 7-8 ಲಕ್ಷ ಗಳಿಸಬಹುದು ಎಂದು ಹರ್ಷ ವ್ಯಕ್ತಪಡಿಸಿದರು. ಅವರ ಸಾರ್ಥಕ ಯಶೋಗಾಥೆ ಕೇಳಿ ಸಂತಸವಾಯಿತು. ತೋಟಗಾರಿಕೆ ಮತ್ತಷ್ಟು ಯಶಸ್ವಿಯಾಗಲೆಂದು ಹಾರೈಸಿದೆ.

ಇಂತಹ ನೂತನ ಪ್ರಯತ್ನಗಳು ನಮ್ಮ ಜಿಲ್ಲೆಯ ಕೃಷಿ, ತೋಟಗಾರಿಕೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲಿದೆ‌ ಹಾರೈಸಿದರು.

ವರದಿ : ಅಜೀಜ್ ಪಠಾಣ.

error: Content is protected !!