ಸಿಸಿಬಿ ತಂಡದಿಂದ “0% ಬಡ್ಡಿ ಚಿನ್ನದ ಸಾಲ” ವಂಚನೆ ರಚಿಸಿದ ಇಬ್ಬರು ಆರೋಪಿಗಳ ಬಂಧನ. 1ಕೋಟಿ 80ಲಕ್ಷ ಮೌಲ್ಯದ 1KG 478Gm ಚಿನ್ನಾಭರಣ, 5KG ಬೆಳ್ಳಿ ವಶ

ಬೆಂಗಳೂರು : ನಗರ ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ಆರ್ಥಿಕ ಅಪರಾಧ ವಿಭಾಗವು ವಂಚನೆ ಪ್ರಕರಣ ದಾಖಲಿಸಿ, “0% ಬಡ್ಡಿ ಚಿನ್ನದ ಸಾಲ” ಯೋಜನೆ ಹೆಸರಿನಲ್ಲಿ ವಂಚನೆ ನಡೆಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ವಿದ್ಯಾರಣ್ಯಪುರದಲ್ಲಿರುವ ಚಿನ್ನದ ಅಂಗಡಿಯೊಂದನ್ನು ತೆರೆದಿದ್ದು, “0% ಬಡ್ಡಿ ಚಿನ್ನದ ಸಾಲ” ಎಂಬ ಸುಳ್ಳು ಜಾಹೀರಾತು ನೀಡಿ ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದನು.

ಈ ಪ್ರಚಾರವನ್ನು ನಂಬಿದ ಅನೇಕರು ತಮ್ಮ ಚಿನ್ನವನ್ನು ಅಡಮಾನವಿಡಲು, ಮುಂದೆ ಬಂದು ಸಾಲ ಪಡೆದರು. ಆದರೆ ಅವರಿಗೆ ಚಿನ್ನದ ನಿಜವಾದ ಮೌಲ್ಯದ ಕೇವಲ 50-60% ಮೊತ್ತ ಮಾತ್ರ ಸಾಲವಾಗಿ ನೀಡಲಾಗುತ್ತಿತ್ತು ಮತ್ತು ಕನಿಷ್ಠ 11 ತಿಂಗಳುಗಳ ಅವಧಿಯ ವರೆಗೆ ಚಿನ್ನವನ್ನು ಬಿಡಿಸಿಕೊಳ್ಳಬಾರದೆಂದು ಷರತ್‌ನ್ನು ವಿಧಿಸಲಾಗಿತ್ತು.

ನಂತರ ಆರೋಪಿ ಅಡಮಾನವಿಟ್ಟಿದ್ದ ಚಿನ್ನವನ್ನು ಆಕ್ರಮವಾಗಿ ಎಚ್.ಆರ್.ಬಿ.ಆರ್ ಲೇಔಟ್‌ನ ಜ್ಯೂವೆಲರಿ ಅಂಗಡಿಯೊಂದಕ್ಕೆ ಮಾರಾಟ ಮಾಡಿ, ಸುಮಾರು 40-50% ಲಾಭ ಗಳಿಸುತ್ತಿದ್ದನು. ಒಟ್ಟಾರೆಯಾಗಿ ಈ ಯೋಜನೆಯಡಿ ಸುಮಾರು 4 ಕೆ.ಜಿ. ಚಿನ್ನ ವಂಚಿಸಲ್ಪಟ್ಟಿದೆ. 11 ತಿಂಗಳ ಬಳಿಕ ಆರೋಪಿಯು ಅಂಗಡಿಯನ್ನು ಮುಚ್ಚಿ ಪರಾರಿಯಾಗಿದ್ದು, ಜನರನ್ನು ವಂಚಿಸಿರುವುದು ದೃಢಪಟ್ಟಿದೆ.

ಈ ಆರೋಪಿಯನ್ನು ಎರಡು ವಾರಗಳ ಹಿಂದೆ ಪೀಣ್ಯಾದಲ್ಲಿ ವಾಸವಿರುವ ಆತನ ಮನೆಯಿಂದ ವಶಕ್ಕೆ ಪಡೆಯಲಾಯಿತು. ಆತನು ಎಚ್.ಆರ್.ಬಿ.ಆರ್ ಲೇಔಟ್‌ನ ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿದ್ದ | ಕೆ.ಜಿ 478 ಗ್ರಾಂ ಚಿನ್ನಾಭರಣ ಮತ್ತು 5 ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಇದರ ಒಟ್ಟು ಮೌಲ್ಯವು ಸುಮಾರು *1,80,00,000/- (20 ).

ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಮಂಗಳೂರು ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿಯೂ ಇದೇ ರೀತಿಯ ವಂಚನೆ ನಡೆಸಿರುವ ಬಗ್ಗೆ ಮಾಹಿತಿ ದೊರೆತ್ತಿರುತ್ತದೆ. ತನಿಖೆ ಮುಂದುವರಿದಿದೆ.

ಬೆಂಗಳೂರು ನಗರ ಪೊಲೀಸ್ ಇಲಾಖೆಯ ಸಾರ್ವಜನಿಕ ಮನವಿ:

ಚಿನ್ನವನ್ನು ಅಡಮಾನವಿಡುವ ಮೊದಲು ಸಂಸ್ಥೆಯ ಪರವಾನಗಿ ಮತ್ತು ನೈಜತೆಯನ್ನು ಪರಿಶೀಲಿಸಿ, “0% ಬಡ್ಡಿ” ಎಂಬಂತಹ ಅಸಾಧ್ಯ ಯೋಜನೆಗಳಿಗೆ ಬಲಿಯಾಗಬೇಡಿ. ಅನುಮಾನಾಸ್ಪದ ಯೋಜನೆಗಳು ಕಂಡುಬಂದರೆ ಸಮೀಪದ ಪೊಲೀಸ್ ಠಾಣೆ ಅಥವಾ ಸಿಸಿಬಿ ವಿಭಾಗಕ್ಕೆ ತಕ್ಷಣ ಮಾಹಿತಿ ನೀಡಿ.

ಈ ಕಾರ್ಯಾಚರಣೆಯನ್ನು ಸಿಸಿಬಿ (ಆರ್ಥಿಕ ಅಪರಾಧ ವಿಭಾಗ) ತಂಡವು ಅಜಯ್ ಹಿಲೋರಿ, ಅಪರಾಧ ವಿಭಾಗದ ಸಂಯುಕ್ತ ಪೊಲೀಸ್ ಆಯುಕ್ತರು, ಮತ್ತು ರಾಜಾ ಇಮಾಮ್ ಕಾಸಿಂ, ಅಪರಾಧ-1 ಉಪ ಪೊಲೀಸ್ ಆಯುಕ್ತರು ಅವರ ಮಾರ್ಗದರ್ಶನದಲ್ಲಿ, ಎಸಿಪಿ ನಾಗರಾಜ್, ಸಿಸಿಬಿ, ಬೆಂಗಳೂರು ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿದೆ.

ವರದಿ : ಮುಬಾರಕ್ ಬೆಂಗಳೂರು

error: Content is protected !!