ಮಲ್ಲಿಕಾರ್ಜುನ್ ಇಟಗೇನೋರ್ ರವರ ಸಮಾಜ ಸೇವೆಯನ್ನು ಕಂಡು ಮತ್ತು Right to live ಸಂಸ್ಥೆಯ ಮೂಲಕ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಇಲ್ಲಿವರೆಗೆ ಸುಮಾರು 70ಕ್ಕೂ ಹೆಚ್ಚು ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಮತ್ತು ಅನುದಾನಿತ ಶಾಲೆಗಳ ಮೂಲ ಸೌಕರ್ಯಗಳನ್ನು ರೈಟು ಲೈವ್ ಸಂಸ್ಥೆ ಮೂಲಕ, ಸ್ಮಾರ್ಟ್ ಟಿವಿ, ಗ್ರೀನ್ ಬೋರ್ಡ್, ಬ್ಯಾಗ್ಸ್, ಶೌಚಾಲಯಗಳು, ವಾಟರ್ ಫಿಲ್ಟರ್, ಆನ್ಲೈನ್ ಕ್ಲಾಸೆಸ್, ಇತ್ಯಾದಿ ಗಳನ್ನು ನೀಡಲಾಗಿದೆ. ಮತ್ತು ಇಲ್ಲಿವರೆಗೆ ಸುಮಾರು 400 ಕ್ಕೆ ಹೆಚ್ಚು ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಟ್ಟಿದ್ದಾರೆ, 2000 ಹೆಚ್ಚು ಕಣ್ಣಿನ ಕನ್ನಡಕವನ್ನು ಉಚಿತವಾಗಿ ಬಡ ಜನರಿಗೆ ವಯಸ್ಸಾದವರಿಗೆ ಉಚಿತವಾಗಿ ಕೊಟ್ಟಿದ್ದಾರೆ, ಮತ್ತು ಗೌರ್ಮೆಂಟ್ ಪಿಯು ಕಾಲೇಜ್ ಗಳಿಗೆ ಸಂಬಂಧಪಟ್ಟಂತೆ ಕಂಪ್ಯೂಟರ್ ಲ್ಯಾಬ್ ಸೈನ್ಸ್ ಲ್ಯಾಬ್ ಮೆಟೀರಿಯಲ್ಸ್ ಅಂದರೆ ಬಯಾಲಜಿ, ಕೆಮೆಸ್ಟ್ರಿ ಫಿಸಿಕ್ಸ್. ಸಂಬಂಧಪಟ್ಟಂತೆ ಉಪಕರಣಗಳನ್ನು ಒದಗಿಸಲಾಗಿದೆ ಮತ್ತು ಪರಿಸರಕ್ಕೆ ಸಂಬಂಧಪಟ್ಟಂತೆ ಸುಮಾರು ಗಿಡಮರಗಳನ್ನು ನೀಡಲಾಗಿದೆ. ಇದನ್ನೆಲ್ಲಾ ಮನಗಂಡು ಬೀದರ್ ನ ರಂಗಮಂದಿರದಲ್ಲಿ ಹನುಮು ಪಾಜ್ಜಿ ಗೆಳೆಯರ ಬಳಗ ವತಿಯಿಂದ ನಡೆದ 70 ನೇ ಕನ್ನಡ ರಾಜ್ಯೋತ್ಸವದಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಮಹಿಳಾ ಆಯೋಗದ , ಅಧ್ಯಕ್ಷರಾದ ಡಾ :ನಾಗಲಕ್ಷಮಿ ಚೌದ್ರಿ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ರಾಜ್ಯ ಮಟ್ಟದ ಕನ್ನಡ ಸೇವೆ ರತ್ನ ಪ್ರಶಸ್ತಿಯನ್ನು, ನೀಡಲಾಯಿತು.
