ಬದುಕು! ನೂಕು ನುಗ್ಗಲಾಗಿವೇ ತಂತಿಗಳೆಂಬ ತೊಡರು.ತೋಡರುಗಳ
ನಡುವೆಯೂ ಬೆಳಕ ನೀಡುವ ಜೀವಿಯಂತಿರುವ ದೀಪ ಒಂದು ಕಡೆ,ಅದರ ಕಾಂತಿಯಲ್ಲಿಯೇ ಜೀವ ಪಡೆವ
ಪಕ್ಕದುಳು ಇನ್ನೊಂದು ಕಡೆ.
ಹುಳುವಿನ ಕಾಟಕ್ಕೆ ದೀಪಕ್ಕೆ ಬೈದವರೆಷ್ಟೋ..? ಗುಯ್ ಎನ್ನುವ ಅದರ ಶಬ್ದ ಮುಳ್ಳಾಗಿದ್ದು ಎಷ್ಟು ಜನಕ್ಕೊ..?
ಅವರಿಗೇನು ಗೊತ್ತು.? ದೀಪವಿಲ್ಲದೇ ಅರೆಗಾಲ ಜೀವಿಸದ ಆ ಜೀವಿಯ ತೊಳಲಾಟ…..! ಜೀವ- ಜೀವನವೂ
ಹಾಗೇ.,ಕೋಟಿ ಹುಳುಗಳ ಜೀವಕ್ಕೆ ಆಸರೆ ಆಗಲು ನಿಂತಾಗ ಹುಳುವಿನ ಕಾಟಕ್ಕೆ ದೀಪಕ್ಕೆ ಅಸಡ್ಡೆ ಮಾಡಿದ ರೀತಿ,
ನಿನ್ನ ತನಕ್ಕೂ ಕೇಡ ಬಯಸುವವರು ಕೋಟಿ ಜನ. ಕಾಯ ಕಾಣದ ಕನಸಿನೆಡೇಗೆ ಸಾಗಿದಾಗ., ದಾರಿಯುದ್ದಕ್ಕೂ
ಜ್ವಾಲೆ ಆಗಿ ಪ್ರಕಾಶಿಸುವವರಿಗಿಂತ ಮುಳ್ಳಾಗಿ ಚುಚ್ಚುವವರೇ ಹೆಚ್ಚು!ಅಗಮ್ಯದೇಡೆಗೆ ನಿನ್ನ ಗಮ್ಯ ಸಾಗಿದಾಗ.
ಹುಳುವಾಗದಿರು ಇನ್ನೊಬ್ಬರ ಬದುಕಿನಲ್ಲಿ, ಅವರ ಬಾಳ ಬೆಳಗುವ ದೀಪವಾಗು. ನಿನ್ನದೇ ಕಂಬವೆಂಬ
ಸ್ವಿಚ್ಚನಲ್ಲಿ ಶಕ್ತಿ ಇರುವ ತನಕ ಪ್ರಕಾಶಿಸುತ್ತಲೆ ಇರು.! ಇನ್ನೊಬ್ಬರ ಬಾಳಲ್ಲಿ! ಅವರಿಗೆನೆ ನಾಚಿಕೆ ಆಗುವ ರೀತಿ.
ಸಂಘ ಜೀವಿ ನೀ, ಒಂದು ಕಂಬದ ತಂತಿ ಇನ್ನೊಂದು ಕಂಬಕ್ಕೆ ತಾಗಲೇ ಬೇಕು…., ಕಾಂತಿಯೂ ಹೊಮ್ಮೆಲೇ
ಬೇಕು.. ಇನ್ನೊಬ್ಬರ ಬದುಕ ಬೆಳಗಲೇ ಬೇಕು. ದೀಪ ಹುಳುವಿನ ಆಟದಲ್ಲಿ, ದೀಪ ಹಾಳಾಯಿತೋ..? ಹುಳು
ಮುಳ್ಳಾಗಿತೋ..? ನಮ್ಮ ಬದುಕು ಹಾಗೆ ಒಬ್ಬರ ಜೀವಕ್ಕೆ ದೀಪವಾದರೆ, ಇನ್ನೊಬ್ಬರ ಜೀವಕ್ಕೆ ಹುಳುವೆ…! ಆ
ಚಂದ್ರಾರ್ಕರಿರುವ ತನಕ ಇದು ಆಚಲವಾದರು.,ಬದುಕಿನ ಅಚಲತೆಯ ಸ್ಪಷ್ಟತೆಯನ್ನು ಒಪ್ಪಲೋಲ್ಲರು.
ರಚನೆ:- ಪ್ರಿಯಾಂಕಾ ಚಂ ಬಿಳ್ಳೂರ
ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ ವಿಧ್ಯಾರ್ಥಿನಿ
