ಕಂಪ್ಲಿ : ಜನಪ್ರಿಯವಾಗಿ ಯಶಸ್ವಿ ಗೊಳಿಸಿದ ಮನೆಮನೆಗೆ ಪೊಲೀಸ್ ಎಂಬ ಕಾರ್ಯಕ್ರಮದ ಜೊತೆಗೆ ಪ್ರತಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ ಬಗ್ಗೆ, ಅರಿವು ಕಾರ್ಯಗಾರ ಮಾಡಲು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಂಪ್ಲಿ ರವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌಂನ್ಸಿಲ್ ಹಾಗೂ ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಯಿಂದ ಮನವಿ ಸಲ್ಲಿಸಿದರು.
ವಿವಿಧ ವೇದಿಕೆ ಹಾಗೂ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಈ ಹಿಂದೆ ಮಡಿಕೇರಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಖಿ ಒನ್ ಸ್ಮಾಪ್ ಸೆಂಟರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013 ರ ಕುರಿತು ಅರಿವು ಕಾರ್ಯಗಾರವನ್ನು ಮಾಡಿದ್ದು ಹಾಗೆಯೇ ಕರ್ನಾಟಕ ರಾಜ್ಯಾದ್ಯಂತ ಪೊಲೀಸ್ ಪ್ರಾಧಿಕಾರವು ಪ್ರತಿ ಮನೆ ಮನೆಗೆ ತೆರಳಿ ಪೋಲಿಸ್ ಇಲಾಖೆಯು ನಿಮ್ಮೊಂದಿಗೆ ಎಂಬ ಘೋಷವಾಕ್ಯವನ್ನು ಜನಪ್ರಿಯವಾಗಿ ಯಶಸ್ವಿಗೊಳಿಸಿದ ಕಂಪ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದನೆ.
ಇನ್ನೂ ಮುಂದುವರೆದು ಕಂಪ್ಲಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಪ್ರತಿ ಪ್ರೌಢ ಮತ್ತು ಪದವಿ ಪೂರ್ವ ಹಾಗೂ ತಮ್ಮ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013ರ ಕುರಿತು ಅರಿವು ಕಾರ್ಯಗಾರವನ್ನು ಪ್ರಾರಂಭಿಸ ಬೇಕು ಎಂದು ಮನವಿ ಸಲ್ಲಿಸಿದರು.
‘ಏಕೆಂದರೆ ಕಂಪ್ಲಿಯಲ್ಲಿ ಬಾಲಕಿಯರು ಪ್ರೌಢಶಾಲೆ ಮತ್ತು ಪದವಿಪೂರ್ವ ಹಾಗೂ ಪದವಿ ವಿದ್ಯಾಲಯಗಳಿಗೆ ಹೋಗುತ್ತಿರುವಾಗ ಕೆಲವು ಅಪ್ರಾಪ್ತ ವಯಸ್ಸಿನ ಹುಡುಗರು ಕಿರುಕುಳದ ಜೊತೆಗೆ ಕೆಲವು ಅಹಿತಕರ ಮತ್ತು ಅನುಚಿತ ವರ್ತನೆ ಮಾಡುತ್ತಿರುವುದು ಕಂಡು ಬರುತ್ತಿದ್ದು ನಮ್ಮ ವೇದಿಕೆಯ ಮುಂದೆ ಕೆಲವು ಅನಾಮದೇಯ ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದು ಇದರ ಬಗ್ಗೆ ದೂರನ್ನು ಸಹ ಕೊಟ್ಟಿರಬಹುದು. ಹಾಗೆಯೇ ಒಂದು ಪ್ರೌಢಶಾಲೆಯ ಮುಖ್ಯ ಗುರುಗಳು ದೂರನ್ನು ಸಹ ಕೊಟ್ಟಿರುತ್ತಾರೆ ಬೇರೆ ಬೇರೆ ಜಿಲ್ಲೆಯ ಹಾಗೂ ತಾಲೂಕಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಯಾಸಿಡ್ ದಾಳಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ನಿದರ್ಶನಗಳಿದ್ದು ಇಂತಹ ಘಟನೆಗಳು ಕಂಪ್ಲಿಯಲ್ಲಿ ನಡೆಯುವುದಕ್ಕೂ ಮುಂಚೆ ಮೊಳಕೆಯಲ್ಲಿ ಚೂಟುವ ಹಾಗೆ ತಾವುಗಳು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಪಡೆದು ಕಾರ್ಯಗಾರವನ್ನು ಮಾಡಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಬೇಕೆಂದು ಪ್ರೆಸ್ ಕ್ಲಬ್ ಕೌಂನ್ಸಿಲ್ ಹಾಗೂ ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ಮುಖಾಂತರ ಮನವಿ ಸಲ್ಲಿಸದರು.
