ದಿ. ಬಸವರಾಜ ಪಾಟೀಲ್ ಫೌಂಡೇಷನ್ ಹುಮನಾಬಾದ ನೇತ್ರತ್ವದಲ್ಲಿ ಬ್ರಹತ್ ಆರೋಗ್ಯ ತಪಾಸಣೆ ಶಿಬಿರ ಡಿ 3ಕ್ಕೆ

ಹುಮ್ನಾಬಾದ್ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆ ಕಲಬುರಗಿ.
ಎನ್.ಜಿ.ಎನ್. ಫೌಂಡೇಷನ್, ಕಲಬುರಗಿ. ರೋಟರಿ ಕ್ಲಬ್ ಹುಮನಾಬಾದ ಎಲೈಟ್. ಸಂಯುಕ್ತಾಶ್ರಯದಲ್ಲಿ
ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹುಮ್ನಾಬಾದ್ ಪಟ್ಟಣದ HKDET’S ದಂತ ಮತ್ತು ಫಾರ್ಮಸಿ ಕಾಲೇಜು, ಕಲ್ಲೂರು ರಸ್ತೆ, ಹುಮನಾಬಾದ್ ನಲ್ಲಿ ನಡೆಯಲಿದೆ,

ಇಲ್ಲಿ ನೂರಿತ ವೈದ್ಯಕೀಯ ವಿಭಾಗ ಸಕ್ಕರೆ, ರಕ್ತದೋತ್ತಡ, ಥೈರಾಡ್ ಸಾಮಾನ್ಯ ವೈದಕಿಯ ರೋಗ, ನರ ರೋಗ, ಕೀಲು ಮತ್ತು ಮೂಳೆ, ಮಕ್ಕಳ, ಚರ್ಮ ಕೂದಲು ಹಾಗೂ ಲೈಂಗಿಕ, ಕಣ್ಣು (ನೇತ್ರಾ), ಕಿವಿ, ಮೂಗು, ಗಂಟಲು, ಕೆಮ್ಮು, ದಮ್ಮು, ಅಸ್ತಮಾ, ಮಾನಸಿಕ ರೋಗ, ಶಸ್ತ್ರ ಚಿಕಿತ್ಸೆ, ಹೃದಯ ರೋಗ, ಮೂತ್ರ ಪಿಂಡ ಪರೀಕ್ಷೆ ಹಾಗೂ ಅವುಗಳ ಚಿಕಿತ್ಸೆ ಈ ಶಿಬಿರದಲ್ಲಿ ನಡೆಯಲಿದೆ.

ಈ ಕುರಿತು ಮಾಜಿ ಸಚಿವ ರಾಜಶೇಖರ ಪಾಟೀಲ್ ರವರ ಗೃಹ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ ಚಂದ್ರಶೇಖರ ಪಾಟೀಲ್
ರುದ್ರಮ್ ಪಾಟೀಲ್ ಜನ್ಮದಿನದ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ ಶಿಬಿರ ಡಿಸೇಂಬರ್ 03ರಂದು ಬುಧವಾರ ಬೆಳಿಗ್ಗೆ 08ರಿಂದ ಸಂಜೆ 03ಗಂಟೆ ವರೆಗೆ ನಡೆಯಲಿದೆ ಇದರಲ್ಲಿ ಎಲ್ಲಾ ಸ್ಪೆಷಾಲಿಟಿ ವೈದ್ಯರು ಬರಲಿದ್ದಾರೆ ಅದರ ಜೊತೆ ಆಯುರ್ವೇದಿಕ್ ಆತೋಪೇತಿಕ್ ವೈದ್ಯರು ಸಹ ಭಾಗವಹಿಸಲಿದ್ದು HKDET ಡೆಂಟಲ್ ಕಾಲೇಜಿನಲ್ಲಿ ಶಿಬಿರ ನಡೆಯಲಿದ್ದು ನಮ್ಮ ಕ್ಷೇತ್ರದ ಸ್ಥಳೀಯ ಜನರಿಗೆ ಅನುಕೂಲ ವಾಗಲು ಬಸವರಾಜ್ ಫೌಂಡೇಶನ್ ವತಿಯಿಂದ ಬಸ್ ವ್ಯವಸ್ಥೆ ಇದೆ ಸುತ್ತ ಗ್ರಾಮ ಗಳಿಗೂ ವಾಹನ ವ್ಯವಸ್ಥೆ ಇದೆ ರಕ್ತ ಪರೀಕ್ಷೆ ಹೃದಯ ಸಂಬಂಧಿ ಪರೀಕ್ಷೆ ಕಣ್ಣಿನ ತಪಾಸಣೆ ಉಚಿತ ಕನ್ನಡ್ಕ ವಿತರಣೆ ಮಾಡಲಾಗುತ್ತದೆ ಎಂದರು.

ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ
ದಿ ಬಸವರಾಜ್ ಪಾಟೀಲ್ ಫೌಂಡಷನ್, NGN ಫೌಂಡೇಶನ್ ಕಲಬುರ್ಗಿ, ರೋಟರಿ ಕ್ಲಬ್ ಹುಮ್ನಾಬಾದ್, ಸಂಯುಕ್ತಾಶ್ರಯದಲ್ಲಿ ಶಿಬಿರ ವನ್ನ ಆಯೋಜನೆ ಮಾಡಲಾಗಿದೆ ಸಹೋದರ ಭೀಮರಾವ ಪಾಟೀಲ್ ರವರ ಸುಪುತ್ರ ರುದ್ರಮ್ ಪಾಟೀಲ್ ರವರ ಜನ್ಮದಿನದ ನಿಮಿತ್ಯ ಆಯೋಜನೆ ಮಾಡಲಾಗಿದ್ದು ಸುಮಾರು 30ಕ್ಕೂ ಹೆಚ್ಚು ವೈದ್ಯರು ಶಿಬಿರ ದಲ್ಲಿ ಪಾಲ್ಗೊಳ್ಳಲಿದ್ದು ಕಲಬುರ್ಗಿ ಹೈದ್ರಾಬಾದ್ ಸೋಲಾಪುರ ನಲ್ಲಿ ಸಿಗುವ ಆರೋಗ್ಯ ಸಂಬಂಧ ಸವಲತ್ತು ಈ ಶಿಬಿರ ದಲ್ಲಿ ದೊರೆಯಲಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಬರುವ ಜನರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಊಟದ ವ್ಯವಸ್ಥೆ ಯು ಇರುತ್ತದೆ ಎಂದರು,
ಹಿಂದೆ ಶಿಬಿರ ದಲ್ಲಿ ಒಬ್ಬ ಬಾಲಕನಿಗೆ ಬ್ರೇನ್ ಟ್ಯೂಮರ್ ಪತ್ತೆ ಆಯ್ತು ಮೂರನೇ ಸ್ಟೇಜ್ ಗೆ ಇದ್ದ ಆತನ ಚಿಕಿತ್ಸೆ ಆಯ್ತು ಮಾತು ಬಾರದ ಬಾಲಕ ಮಾತನಾಡುತ್ತಿದ್ದಾನೆ ಬಡ ಕುಟುಂಬ ಸಂತೋಷ ದಲ್ಲಿದೆ ಎಂದರು.

ಎನ್.ಜಿ.ಎನ್ ಫೌಂಡೇಶನ್ ಕಾರ್ಯದರ್ಶಿ ಡಾ ಸಂತೋಷ ಕುಮಾರ್ ಮಾತನಾಡಿ
ದಿ ಬಸವರಾಜ್ ಪಾಟೀಲ್ ಫೌಂಡೇಶನ್ ನೇತೃತ್ವದಲ್ಲಿ ರುದ್ರಮ್ ಪಾಟೀಲ್ ಹುಟ್ಟುಹಬ್ಬದ ನಿಮಿತ್ಯ ಬ್ರಹತ್ ಆರೋಗ್ಯ ಶಿಬಿರ ನಡೆಯಲಿದೆ ಕಲ್ಲೂರ್ ರಸ್ತೆ ಎದುರು ಗಡೆ ಇರುವ HKDET ಡೆಂಟಲ್ ಕಾಲೇಜಿನಲ್ಲಿ ನಡೆಯಲಿದೆ ಶಿಬಿರ ದಲ್ಲಿ ಸುಮಾರು 50ಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ ಇತ್ತೀಚಿಗೆ ಕ್ಯಾನ್ಸರ್ ಹೆಚ್ಚಾಗಿದೆ ಆದರೆ ಜನ ಚಿಕಿತ್ಸೆಗೆ ಪರಿಶೀಲನೆ ಮುಂದಾಗುತ್ತಿಲ್ಲ ರಾಜಶೇಖರ್ ಪಾಟೀಲ್ ರವರ ಕಾಳಜಿ ಇದೆ ನಮ್ಮ ಕ್ಷೇತ್ರದ ಜನರ ಆರೋಗ್ಯ ತಪಾಸಣೆ ಆಗ್ಬೇಕು ಹಾಗೂ ಚಿಕಿತ್ಸೆ ಆಗ್ಬೇಕು ಅಂತ ಹಾಗಾಗಿ ಬ್ರಹತ್ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದೇವೆ ಇದರಲ್ಲಿ ಸುಮಾರು 100ವಾಲೆಂಟರ್ ಇರಲಿದ್ದಾರೆ ಎಂದರು, ಹಿಂದಿನ ಬಸವರಾಜ್ ಪಾಟೀಲ್ ಫೌಂಡೇಶನ್ ಕ್ಯಾಂಪ್ ನಲ್ಲಿ ಸಸ್ತಾಪುರ ಗ್ರಾಮದ ಮೂಕ ಬಾಲಕನಿಗೆ ಬ್ರೇನ್ ಟ್ಯೂಮರ್ ಪತ್ತೆ ಆಯ್ತು ತಕ್ಷಣವೇ ಚಿಕಿತ್ಸೆಗೆ ಒಳಪಡಿಸಿದ್ದೇವೆ ವೈದ್ಯರು ಟೇಬಲ್ ಡೆತ್ ಆಗುತ್ತೆ ಅಂತ ಹೇಳಿದರು ಆದರೆ ಧೈರ್ಯ ದಿಂದ ಚಿಕಿತ್ಸೆಗೆ ಮುಂದಾದಾಗ ಬಾಲಕ ಬದುಕಿ ಉಳಿದ್ದಿದಲ್ಲದೆ ಆತನಿಗೆ ಮಾತು ಬರ್ತಾ ಇದೆ ಇದರ ಶ್ರೇಯಸ್ಸು ಬಸವರಾಜ್ ಪಾಟೀಲ್ ಫೌಂಡೇಶನ್ ಗೆ ಹೋಗುತ್ತದೆ ಎಂದರು.
ಈ ಕ್ಯಾಂಪ್ ಸ್ಟೇಟ್ ರೆಕಾರ್ಡ್ ಬ್ರೇಕ್ ಮಾಡಬೇಕು ಅಂತಹ ದೊಡ್ಡ ಶಿಬಿರ ಆಗಬೇಕಿದೆ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸಬೇಕೆಂದು ಮನವಿ ಮಾಡಿದರು.

ರೋಟರಿ ಕ್ಲಬ್ ನಾ ಮುಖ್ಯಸ್ಥ ನದೀಮ್ ಮಾತನಾಡಿ
ಫ್ರೀ ಮೇಘಾ ಹೆಲ್ತ್ ಕ್ಯಾಂಪ್ ಹುಮ್ನಾಬಾದ್ ನಾ ಡೆಂಟಲ್ ಕಾಲೇಜಿನಲ್ಲಿ ನಡೆಯಲಿದೆ ಮಹಿಳೆಯರು ಹಿರಿಯ ಜೀವಿಗಳು ಈ ಶಿಬಿರ ದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

error: Content is protected !!