ಚಿಕ್ಕೋಡಿ : ತಾಲೂಕಿನ ಕರಗಾಂವ ಗ್ರಾಮ ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ ಸುವರ್ಣ ಗ್ರಾಮ ಎಂದು ಘೋಷಣೆ ಆಗಿದ್ದು ವಿಪರ್ಯಾಸ ಆದರೆ ಇಲ್ಲಿ ನಡಿಯುವುದೆ ಬೇರೆ ,
ಬಯಲು ಮುಕ್ತ ಶೌಚಾಲಯ ಮಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪನ ತೋಟರೆ ಹಳ್ಳಿಯ ಭಾಗಗಳಲ್ಲಿ ಬಯಲು ರಹಿತ ಶೌಚಾಲಯಗಳು ಎದ್ದು ಕಾಣುತ್ತೇವೆ ಅದರಲ್ಲಿ ನಮ್ಮ ಚಿಕ್ಕೋಡಿ ಬಾಗದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಕರಗಾಂವ ಗ್ರಾಮದಲ್ಲಿ ಇರುವ ಬಸ್ ತಗುದ್ದಾನ ಹತ್ತಿರ ಮತ್ತು ಗ್ರಾಮ ಪಂಚಾಯತ್ ಹಿಂಬದಿಗೆ ಇರುವ ಸ್ಥಳದಲ್ಲಿ ಸಾರ್ವಜನಿಕರು (ಶೆರೆ) ಮದ್ಯಪಾನ ಸೇವನೆ ಮಾಡಿ ಎಲ್ಲೆಂದರಲ್ಲಿ ಬಿಸಾಕಿರುವ ಘಟನೆ ನಡದಿದೇ ಅಷ್ಟೇ ಅಲ್ಲದೆ ಗುಟ್ಕಾ ಸಿಗರೆಟ ಹೀಗೆ ಹಲವಾರು ವ್ಯಸನ ಮಾಡಿ ತೀರ ಗಲಿಜ ಮಾಡಿರುವುದು ಹೆಚ್ಚಾಗಿದೆ.
ನಿತ್ಯವೂ ಶಾಲಾಮಕ್ಕಳು ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಕುಳಿತು ಕೊಳ್ಳಲು ಸಾಧ್ಯವಾಗದೆ ಅನಾರೋಗ್ಯ ಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾಗುತ್ತಿದೆ.
ಇಷ್ಟೇಲ್ಲ ತಿಳಿದರು
ಕಂಡು ಕಾಣದಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಅಧ್ಯಕ್ಷರು ಮತ್ತು ಸಿಬ್ಬಂದಿ ವರ್ಗದವರು ಕಣ್ಣು ಮುಚ್ಚಿಕುಳಿತ್ತು ಬೇಜವಾಬ್ದಾರಿಯುತ ಅಧಿಕಾರ ನಡೆಸುತ್ತಿದ್ದಾರೆ.
ಇನ್ನಾದರೂ ಎಚ್ಚತುಕೊಂಡು ಮೇಲಾಧಿಕಾರಿಗಳು ಇಂತಹ ಬೇಜವಾಬ್ದಾರಿಯುತ ಕೆಲಸ ಮಾಡುವ ಅಧಿಕಾರಿಗಳು ವಜಾಗೋಳಿಸಿ ಇಲ್ಲ ಶಿಸ್ತಿನ ಕ್ರಮಜರುಗಿಸಿ ಅಲ್ಲಿ ಆಗಿರುವ ನೈರ್ಮಲ್ಯ ಸ್ವಚ್ಛತೆಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾ ಅಂತಾ ಕಾದು ನೋಡಬೇಕಾಗಿದೆ.
ವರದಿ : ಅಮರ್ ಮಾಳಗೆ
