ಘಟಪ್ರಭಾ (ದುಪಧಾಳ)ಪ್ರವಾಸಿ ಮಂದಿರದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ ಇವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಬಳ್ಳಾರಿ ಜಿಲ್ಲಾ ಅಧ್ಯಕ್ಷರನ್ನಾಗಿ ಶಿವಕುಮಾರ್, ಕೆ. ಇವರನ್ನು ಆಯ್ಕೆ ಮಾಡಲಾಯಿತು, ಮೂಡಲಗಿ ತಾಲೂಕ ಕಾರ್ಯದರ್ಶಿಯನ್ನು ಮಲ್ಲೇಶ್ ಚೌಕಶಿ ಇವರನ್ನು ಆಯ್ಕೆ ಮಾಡಲಾಯಿತು. ಕರವೇ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಮಾತನಾಡಿ ನಾಡು ನುಡಿ ಜಲ ಭಾಷೆಗಾಗಿ ಕಂಕನ ಬದ್ಧರಾಗಿ ದುಡಿಯಬೇಕು ಎಂದು ಹೇಳಿದರು, ಡಾ ಬಸವರಾಜ್ (ಅಜ್ಜು)ಪಂಜಾನಟ್ಟಿ ಮಾತನಾಡಿ ಅನ್ಯಾಯದ ವಿರುದ್ಧ ಹೋರಾಡಬೇಕು ಸಂಘಟನೆಯ ದೇಯ ಉದ್ದೇಶಗಳನ್ನು ತಿಳಿಸಿದರು. ಕರವೇ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ಬಿ ಇವರು ನೂತನ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭಾಶಯ ಹೇಳಿ ಸ್ವಾಗತಿಸಿದರು, ಈ ಸಂದರ್ಭದಲ್ಲಿ ಕರವೇ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಶಿ, ಮೂಡಲಗಿ ತಾಲೂಕ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ್ ಅರಭಾವಿ, ಕರವೇ ಮೂಡಲಗಿ, ತಾಲೂಕ ಉಪಾಧ್ಯಕ್ಷರಾದ ಸುರೇಶ್ ಚಿಗಡೂಳ್ಳಿ, ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ ಚೌಕಶಿ, ಕರವೇ ಗೋಕಾಕ್ ತಾಲೂಕ ಸಂಚಾಲಕರಾದ ಸಿದ್ದಪ್ಪ ತಳಗೇರಿ, ಕರವೇ ಘಟಪ್ರಭಾ ಘಟಕದ ಅಧ್ಯಕ್ಷರಾದ ಯಲ್ಲಪ್ಪ ಅಟ್ಟಿಮಿಟ್ಟಿ, ಶಂಕರ್ ಮೆಲವಂಕಿ, ಮಂಜುನಾಥ ಪಾಟೀಲ್, ಉದ್ದಪ್ಪ ಬಟ್ಟಿ, ಸುನಿಲ್ ಪಂಜಾನಟ್ಟಿ, ಪ್ರೇಮ್ ಪೂಜಾರಿ ,ಬಸವರಾಜ್ ನೇಸರಗಿ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ
