ಹಿರೇಕೆರೂರ ತಾಲೂಕಿನ ಕುಸ್ತಿ ಪಟ್ಟು ಶೇಕಪ್ಪ ಸಾಧನೆ

ಶೇಕಪ್ಪ ಮಾರತಂಡಪ್ಪ ಸತ್ಯಪ್ಪನವರ
ತಂದೆ : ದಿ.ಮಾರತಂಡಪ್ಪ KSRTC ಚಾಲಕರು ಸೇವೆ ಸಲ್ಲಿದಿದ್ದು
26/06/198 ಹಿರೇಕೆರೂರ ಪಟ್ಟಣದಲಿ ಜನನ
MA B.Ed
CES ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಪ್ರೌಢ ಪಿಯು ಶಿಕ್ಷಣ ಹಿರೇಕೆರೂರ
D.Ed : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡ ಕಾಡನೂರು ಜೆ ಎಸ್ ಎಸ್
BA : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರೇಕೆರೂರ
B.Ed, MA : ದೆಹಲಿಯ IGNOU ವಿಶ್ವ ವಿದ್ಯಾಲಯ

ಅತಿಥಿ ಶಿಕ್ಷಕರಾಗಿ ಸೆಂಟ್ ಮೇರಿ ಪ್ರಾಥಮಿಕ ಶಾಲೆ ಬುರುಡಿಕಟ್ಟಿ
2008 : ತಮಿಳುನಾಡಿನ ಚೆನ್ನೈ ಫಸ್ಟ್ ಸೋರ್ಸ್ ಕಾಲ್ ಸೆಂಟರ್ ಕಂಪನಿಯಲ್ಲಿ ಸೇವೆ
2008 : ಶಿವಮೊಗ್ಗ ಪೋಲೀಸ್ ಆರಕ್ಷಕ ಹುದ್ದೆ ( ಮಂಗಳೂರು ಪಿಟಿಎಸ್ ತರಬೇತಿ)
ತಾಯಿಯ ಕನಸು: ಮೊದಲ ಸರ್ಕಾರಿ ಕೆಲಸ ಪೋಲೀಸ್ ಆರಕ್ಷಕ ಹುದ್ದೆಯಲ್ಲಿ ಇದ್ದರು ಸಹ ತಾಯಿಯವರ ಮಾತಿಗೆ ಗೌರವ ನೀಡಿ ಶಿಕ್ಷಕ ಹುದ್ದೆಗೆ ಹಾಜರಾದರು.

2009: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೂರ‌.8 ವರ್ಷಗಳ ಕಾಲ ವಿಜ್ಞಾನ ಶಿಕ್ಷಕರಾಗಿ ಸೇವೆ
ಸವದತ್ತಿ ತಾಲೂಕಿನ ಬೆನಕಟ್ಟಿ ಪ್ರೌಢಶಾಲೆಯಲ್ಲಿ ನಿಯೋಜಿತ ಇಂಗ್ಲಿಷ್ ಶಿಕ್ಷಕರಾಗಿ ಸೇವೆ.
ಸವದತ್ತಿ ತಾಲೂಕಿನಲ್ಲಿ ಬ್ರಿಟಿಷ್ ಕೌನ್ಸಿಲ್ ಇಂಗ್ಲಿಷ್ ರಾಜ್ಯ ಸಂಪನ್ಮೂಲ ಶಿಕ್ಷಕರಾಗಿ ಐದು ವರ್ಷಗಳ ಕಾಲ ಶಿಕ್ಷಕರಿಗೆ ತರಬೇತಿ ನೀಡಿರುತ್ತಾರೆ.
2019 : ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಿರಗೋಡ ಉರ್ದು ಶಾಲೆಯಲ್ಲಿ ಇಂಗ್ಲೀಷ್ ಜಿಪಿಟಿ ಶಿಕ್ಷಕರಾಗಿ ಸೇವೆ.‌ ಮೂರು ವರ್ಷಗಳ ಕಾಲ ಪ್ರಭಾರಿ ಪ್ರಧಾನ ಗುರುಗಳಾಗಿ ಸೇವೆ ಶಿರಗೋಡು ಶಾಲೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಪ್ರವೃತ್ತಿ: 2 ವರ್ಷಗಳ ಕಾಲ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ವೇಟ್ ಲಿಫ್ಟರರಾಗಿ ಅಪ್ಪಟ ದೇಸಿ ಗ್ರಾಮೀಣ ಕ್ರೀಡೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಈಜುಪಟು ಹಿರೇಕೆರೂರು ದುರ್ಗಾದೇವಿ ಕೆರೆಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಹೋಗಿ ವಾಪಸ್ ಈಜಿರುತ್ತಾರೆ. 2011 ರ ಜನವರಿ ಯ ಸಂಕ್ರಮಣದಂದು ನವಿಲು ತೀರ್ಥ ಡ್ಯಾಂ ನಲ್ಲಿ 13 ಕಿಮೀ ಸತತವಾಗಿ ಈಜುವುದರ ಮೂಲಕ ದಾಖಲೆ. ಈ ದಾಖಲೆಗಾಗಿ ದಿ.ಸಂಸದರಾದ ಸನ್ಮಾನ್ಯ ಶ್ರೀ ಸುರೇಶ ಅಂಗಡಿಯವರು ಶ್ರೀ ಸಂಗನಬಸವ ಸ್ವಾಮಿಜಿಯವರು, ಹಿರೇಕೆರೂರಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಾಗೂ ಜೈ ಕರ್ನಾಟಕ ಸಂಘದ ವತಿಯಿಂದ ಹಾಗೂ ಬೆಳಗಾವಿಯ ಸದ್ಗುರು ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಬಸವರಾಜ ಸುಣಗಾರ ರವರಿಂದ ಸನ್ಮಾನಿಸಿರುತ್ತಾರೆ.

*ಕುಸ್ತಿಪಟು*
ಜಾತ್ರಾ ಕುಸ್ತಿ ಪಂದ್ಯಾವಳಿಗಳಲ್ಲಿ ಹಿರೇಕೆರೂರ,ಅಣಜಿ, ಹೊನ್ನಾಳಿ, ಮಡ್ಲೂರ, ಶಿಗ್ಗಾಂವಿ, ಬಂಕಾಪುರ, ಹರಗಿ, ಗುಂಡು ಶೆಟ್ಟಿಕೊಪ್ಪ ಕುಸ್ತಿ ಪಂದ್ಯಾವಳಿಯಲ್ಲಿ ಬಂಗಾರದ ಬಳೆ ಹಾಗೂ ಹರಗಿ ಮತ್ತು ಸಿದ್ದಾಪುರ ತಾಲೂಕಿನ ಹೊಸೂರು ಗ್ರಾಮದ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಗದ್ದೆಯನ್ನು ಗೆದ್ದಿರುತ್ತಾರೆ. ಈ ಪಂದ್ಯಾವಳಿಯಲ್ಲಿ ಸನ್ಮಾನ್ಯ ಶಾಸಕರಾದ ಬೀಮಣ್ಣ ನಾಯಕ್ ರವರು ಸಹ ಪಾಲ್ಗೊಂಡಿರುವುದು ವಿಶೇಷ. ಇದಲ್ಲದೆ ದಸರಾ ಕುಸ್ತಿ ಪಂದ್ಯಾವಳಿಯದಲ್ಲಿ ಜಿಲ್ಲಾ ಮಟ್ಟದ ವಿಭಾಗ ಮಟ್ಟದ ಹಾಗೂ ಮೈಸೂರು ದಸರಾ ಕಂಠೀರವ ಕುಸ್ತಿ ಪ್ರಶಸ್ತಿ ಪಂದ್ಯಾವಳಿಯಲ್ಲಿ ಸಹ ಸ್ಪರ್ಧೆ ಮಾಡಿರುತ್ತಾರೆ.
ಇದಲ್ಲದೆ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆದ ಶಿರಾ, ಚಿಕ್ಕನಾಯಕನಹಳ್ಳಿ, ಹೊಸಪೇಟೆ, ಬೆಳಗೆರೆ, ಕೋಡಂಬಿ, ಕಲ್ಲೇ ದೇವರು, ಗುತ್ತೂರು, ಕುಂದೂರು, ಹೋತನಹಳ್ಳಿ, ಚನ್ನಗಿರಿ ದೇವರಹಳ್ಳಿ, ಮುಂತಾದ ಗ್ರಾಮಗಳಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾಗುತ್ತಾರೆ.
ಇದಲ್ಲದೆ ಇದರ ಜೊತೆಯಲ್ಲಿ ತಮ್ಮದೇ ಆದ ಕುಸ್ತಿ ಗೋಸ್ಕರ ಅಂತ ಯೂಟ್ಯೂಬ್ ಚಾನೆಲ್ ಆರಂಭಿಸಿರುತ್ತಾರೆ.

*ಕವಿಯಾಗಿ* ಶಿಕ್ಷಕ ಹುದ್ದೆಯ ಜೊತೆಗೆ ಪ್ರವೃತ್ತಿಯಲ್ಲಿ ಬರಹಗಾರರಾಗಿದ್ದಾರೆ ಹಾಗೂ ಪತ್ರಿಕೆಗಳಲ್ಲಿ ಹವ್ಯಾಸಿ ಲೇಖನಗಳನ್ನು ಸಹ ಬರೆಯುತ್ತಾರೆ. ಇದರ ಜೊತೆಗೆ ತಮ್ಮದೇ ಆದ ಸ್ವಂತ ಬ್ಲಾಗನಲ್ಲಿ ಸುಮಾರು 300ಕ್ಕೂ ಹೆಚ್ಚು ಕವನಗಳನ್ನು ಛಂದಸ್ಸು ಶಾಸ್ತ್ರ ರೂಪದಲ್ಲಿ ಕವನಗಳನ್ನು ರಚಿಸಿದ್ದಾರೆ .ಪತ್ರಿಕೆಗಳಲ್ಲಿ ಸಹ ಪ್ರಕಟಿಸಿರುತ್ತಾರೆ. ಇದರ ಜೊತೆಗೆ ಭಾವಗೀತೆಗಳು, ಭಕ್ತಿ ಗೀತೆಗಳು ಇಂಗ್ಲಿಷ್ ಗೀತೆಗಳು, ಮುಕ್ತಕಗಳು ತ್ರಿಪದಿಗಳು,ಷಟ್ಪದಿಗಳಲ್ಲಿ ಕನ್ನಡದ ಹಳೆಯ ಛಂದಸ್ಸಿನಲ್ಲಿ ಕವನಗಳನ್ನು ರಚಿಸಿರುತ್ತಾರೆ. ಇತ್ತೀಚಿಗೆ ತಾವೇ ಬರೆದ ಕವನಗಳನ್ನು AI ತಂತ್ರಜ್ಞಾನದಲ್ಲಿ ಗೀತೆಗಳನ್ನು ಸಂಯೋಜನೆ ಮಾಡಿದ್ದಾರೆ. ಇದರ ಜೊತೆಗೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ರವರ ಜೀವನ ಚರಿತ್ರೆ ಕಿರು ಪುಸ್ತಕವನ್ನು ಪ್ರಕಟಿಸಿರುತ್ತಾರೆ . ಇವರ ಈ ಕಿರು ಪುಸ್ತಕಕ್ಕೆ ಬೆಂಗಳೂರಿನ ಬುದ್ಧ ಬಸವ ಅಂಬೇಡ್ಕರ್ ಟ್ರಸ್ಟ್ ನ ಜೀವನ ಚರಿತ್ರೆ ವಿಭಾಗದ ಪ್ರಶಸ್ತಿ ಲಭಿಸಿದೆ.

ತರಬೇತಿದಾರರು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಿದ್ದಾರೆ.

ವರದಿ : ಪವನ್ ಕುಮಾರ್ ಆರ್

error: Content is protected !!