ಚಿನ್ನದ ಸರ ಅಪಹರಣ ಮಾಡಿದ್ದ ಓರ್ವ ವ್ಯಕ್ತಿಯ ಬಂಧನ 2ಲಕ್ಷ ಮೌಲ್ಯದ 33 ಗ್ರಾಂ ಚಿನ್ನದ ಸರ ವಶ!

ಬೆಂಗಳೂರು : ಹೆಚ್.ಎಸ್.ಆರ್.ಲೇಔಟ್ ಪೊಲೀಸ್ ಸರಹದ್ದಿನ ಸೆಕ್ಟರ್-01 ಅಗರದಲ್ಲಿ ವಾಸವಿರುವ ಪಿರಾದುದಾರರು ໖:31/12/2025 ರಂದು ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ಅದೇ ದಿನ ಬೆಳಿಗ್ಗೆ ಹೆಚ್.ಎಸ್.ಆ‌ರ್.ಲೇಔಟ್‌ನ 22ನೇ ಮುಖ್ಯರಸ್ತೆಯಲ್ಲಿರುವ ಗಣೇಶ ದೇವಸ್ಥಾನಕ್ಕೆ ಹೋಗಿ, ಪೂಜೆ ಮುಗಿಸಿ 23ನೇ ಮುಖ್ಯರಸ್ತೆ 7ನೇ ಕ್ರಾಸ್‌ನ ಮೂಲಕ ಮನೆಗೆ ಹೋಗುತ್ತಿರಬೇಕಾದರೆ, ದ್ವಿ-ಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊರ್ವನು, ಪಿರ್ಯಾದುದಾರರ ಕತ್ತಿನಲ್ಲಿದ್ದ ಸುಮಾರು 33 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ತಿಳಿಸಿರುತ್ತಾರೆ. ಈ ಕುರಿತು ಹೆಚ್.ಎಸ್.ಆರ್.ಲೇಔಟ್ ಪೊಲೀಸ್ ಠಾಣೆಯಲ್ಲಿ ಸರ ಅಪಹರಣ ಪ್ರಕರಣ ದಾಖಲಾಗಿರುತ್ತದೆ.

ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀಧಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:09/01/2026 ರಂದು ವಿವೇಕನಗರದ ನೀಲಸಂದ್ರದ ಆತನ ವಾಸದ ಮನೆಯ ಬಳಿ, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಸರಪಹರಣ ಮಾಡಿರುವುದಾಗಿ ತಷ್ಟೊಪ್ಪಿಕೊಂಡಿರುತ್ತಾನೆ. ಈ ಪ್ರಕರಣದಲ್ಲಿ ಅಪಹರಣ ಮಾಡಿದ್ದ ಚಿನ್ನದ ಮಾಂಗಲ್ಯ ಸರವನ್ನು ನೀಲಸಂದ್ರದ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ ಮೇರೆಗೆ ದಿನಾಂಕ:10/01/2026 ರಂದು ಜ್ಯೂವೆಲರಿ ಅಂಗಡಿಯಿಂದ 33 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಮೌಲ್ಯ ₹ 2,00,000/-(ಎರಡು ಲಕ್ಷ ರೂಪಾಯಿ).

ದಿನಾಂಕ:10/01/2026 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮೊಹಮ್ಮದ್ ಸುಜೀತ್ ಎಂ.ಎಸ್., ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರಾದ ವಾಸುದೇವ್, ಮಡಿವಾಳ ಉಪವಿಭಾಗ ಅವರ ನೇತೃತ್ವದಲ್ಲಿ, ಹೆಚ್.ಎಸ್.ಆರ್.ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ಪಿ.ಎಂ. ಅವರ ಸಾರಥ್ಯದಲ್ಲಿ ಇತರೆ ಅಧಿಕಾರಿ ಸಿಬ್ಬಂದಿಯವರುಗಳು ಪ್ರಕರವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ವರದಿ : ಮುಬಾರಕ್ ಎಸ್

error: Content is protected !!