ಕಾಗವಾಡ: ಕಾಗವಾಡ ತಾಲೂಕಿನಲ್ಲಿ ಮನೆ ಕಳ್ಳತ ಪ್ರಕರಣಗಳು ಹೆಚ್ಚುತ್ತಿದ್ದು ಮನೆ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತರಿಂದ 19ಲಕ್ಷದ58 ಸಾವಿರ ಮೌಲ್ಯದ ಬಂಗಾರದ ಆಭರಣ ಹಾಗೂ ಬೆಳ್ಳಿ ಆಭರಣ ಮತ್ತು ಮೋಟಾರ ಸೈಕಲನ್ನು ವಶಕ್ಕೆ ಪಡೆದು ಇಬ್ಬರು ಮನೆ ಕಳ್ಳರನ್ನ ಬಂದಿಸಿದ್ದಾರೆ. ಉಗಾರ ಕೆ ಎಚ್ ಗ್ರಾಮದ ನಿವಾಸಿಗಳಾದ(A1) 29 ವರ್ಷದ ಯಾಸೀನ್ ನಬೀಸಾಬ್ ಸುತಾರ ಹಾಗೂ(A2) 37 ವರ್ಷದ ಜಮೀರ್ ಶೌಕತಾಲಿ ಜಮಾದಾರ ಬಂದಿತ ಆರೋಪಿಗಳಾಗಿದ್ದಾರೆ.
ಫೇಬ್ರುವರಿ 10ನೇ ತಾರೀಕಿನಂದು ನಡೆದ ಉಗಾರ ಕೆ ಎಚ್ ಗ್ರಾಮದ ಜಿನ್ನಪ್ಪ ಶ್ರೀಪಾಲ್ ಮಾಕನ್ನವರ ಎಂಬುವರ ಮನೆಯ ಭೀಗ ಒಡೆದು ಮನೆಗೆ ನುಗ್ಗಿ ಮೆನಯಲ್ಲಿದ್ದ 172 ಗ್ರಾಂ ಬಂಗಾರದ ಆಭರಣ ಹಾಗೂ 410 ಗ್ರಾಂ ಬೆಳ್ಳಿಯ ಆಭರಣ 12 ಸಾವಿರ ರುಪಾಯಿ ಮೌಲ್ಯದ ಡೈಮಂಡ್ ಉಂಗುರ ಹಾಗೂ 25 ಸಾವಿರ ನಗದು ಸೇರಿದಂತೆ 22,03,500 ಮೌಲ್ಯದ ಆಭರಣ ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಕುರಿತು ಮನೆ ಮಾಲೀಕ ಜಿನ್ನಪ್ಪ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾಗಾವಾಡ ಪೊಲೀಸರು ಎಸ್ಪಿ,ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಎಸ್ಪಿ ಆರ್ ಬಿ ಬಸರಗಿ, ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಮಾರ್ಗದರ್ಶನದಲ್ಲಿ ಅಥಣಿ ಪೊಲೀಸ್ ಠಾಣೆ ಸಿಪಿಐ ಸಂತೋಷ ಹಳ್ಳೂರ,ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾಗವಾಡ ಪೊಲೀಸರು ಮನೆ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಅರ್ ಪಿ ಕಾಟೆಕರಿ,ಎಸ್ ಪಿ ಮುಗ್ಗಣ್ಣವರ,ಎಂ ಎಂ ಜಂಬಗಿ,ಎಸ್ ಎಸ್ ನಂದಿವಾಳೆ,ಎಸ್ ಎಸ್ ಕಾಂಬಳೆ ಹಾಗೂ ತಾಂತ್ರಿಕ ವಿಭಾಗದ ವಿನೋದ್ ಠಕ್ಕಣ್ಣವರ ಇದ್ದರು.
ವರದಿ ಭರತೇಶ ನಿಡೋಣಿ
