ಚಿಂಚೋಳಿ ಪಟ್ಟಣದ
ಪರಮ ಪೂಜ್ಯ ಲಿಂಗೈಕ್ಯ ಸದ್ಗುರು ಶ್ರೀ ಹಾರಕೂಡ ಚನ್ನಬಸವ ಶೀವಯೋಗಿಗಳವರ 75ನೇ ಜಾತ್ರಾ ಮಹೋತ್ಸವ ಅಂಗವಾಗಿ ದಿ. ಶ್ರೀಮತಿ ಜ್ಞಾನೇಶ್ವರಿ ಗಂಡ ದಿ.ವೈಜನಾಥ ಪಾಟೀಲ ರವರ ಸ್ಮರಣಾರ್ಥ”ಮಹಿಳಾ ಭಜನಾ ಸ್ಪರ್ಧೆ” ಸತತ ಏಳು ದಿನಗಳ ನಿರಂತರ ಭಜನಾ ಸ್ಪರ್ಧೆ ಜರುಗಿತು, ಸ್ಪರ್ಧೆಯ ಬಹುಮಾನವನ್ನು
ದಿ. ವೈಜಿನಾಥ ಪಾಟೀಲ ಪರಿವಾರದವರು ವಿತರಿಸಿದರು,
ಪ್ರಥಮ ಬಹುಮಾನ 25000/- ಭೇಮಳಖೇಡಾ ಮಹಿಳಾ ತಂಡ, ದ್ವಿತೀಯ ಬಹುಮಾನ 15000/- ತಾಳಮಡಗಿ ಮಹಿಳಾ ತಂಡ ಹಾಗೂ ತೃತೀಯ ಬಹುಮಾನ 11,000/- ಗಾರಂಪಳ್ಳಿ ಹಾಗೂ ಚಿಂಚೋಳಿಯ ಮಹಿಳಾ ತಂಡದವರನ್ನು ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗೌತಮ ಪಾಟೀಲ,
ಡಾ ಬಸವೇಶ ಪಾಟೀಲ, ಹಾಗೂ ಕುಟುಂಬ ಸದಸ್ಯರು ಇದ್ದರು, ನಿರ್ಣಾಯಕರಾಗಿ ಸೋಮಯ್ಯ ಸ್ವಾಮಿ ಮಠಪತಿ, ನಾಗಣ್ಣ ಐನೋಳಿ, ಶಂಕರಗೌಡ ಅಲ್ಲಾಪೂರ, ನಿರ್ಣಾಯಿಸಿದರು, ಸುಭಾಷ ಸೀಳಿನ, ರಾಜಶೇಖರ ಮಜ್ಜಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಶರಣಪ್ಪ ಹಲಚೇರಿ, ಸಂತೋಷ ಗಡಂತಿ, ಮಧುಕರ ಕೊಳ್ಳುರಕರ್, ನಾಗರಾಜ ಮಲಕೂಡ, ಮುಂತಾದವರು ಉಪಸ್ಥಿತರಿದ್ದರು”
