ಹುಕ್ಕೇರಿ ನಗರದಲ್ಲಿ ಇಂದಿನಿಂದ ಪ್ರಾರಂಭವಾದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆಯು ಐದು ದಿನಗಳ ಕಾಲ ಅತಿ ವಿಬ್ರಂಜನೆಯಿಂದ ಜರುಗಲಿವೆಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು
ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ಹುಕ್ಕೇರಿ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆ ಇಂದು ಮುಂಜಾನೆ ಅರ್ಚಕರಾದ ಬಡಿಗೇರ ಬಂಧುಗಳು ಮತ್ತು ಹಕ್ಕುದಾರರು ಮುಖಂಡರು ಹಾಗೂ ನಗರದ ಗಣ್ಯರು ಸ್ಥಳೀಯ ಜನರು ವಿಧಿ ವಿಧಾನ ಗಳೊಂದಿಗೆ ಪೂಜೆ ಸಲ್ಲಿಸಿ ಉಯ್ಯಾಲೆ ಆಡುವ ಮೂಲಕ ದೇವಿ ಮೂರ್ತಿಗೆ ಶ್ರೀ ದ್ಯಾಮವ್ವಾ ಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪಣೆ ಮಾಡಿದರು.
ನಂತರ ಚಂದ್ರಶೇಖರ ಮಹಾಸ್ವಾಮಿಗಳು ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಿ ಮಾತನಾಡಿ ಇಂದಿನಿಂದ ಐದು ದಿನಗಳ ಕಾಲ ಜರಗಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರೆಯು ಶಾಂತ ರೀತಿಯಿಂದ ಎಲ್ಲ ಸಮೂದಾಯದ ಜನರು ಅತಿ ವಿಬ್ರಂಜನೆಯಿಂದ ಈ ಜಾತ್ರೆಯ ಯಶಸ್ವಿಗೆ ನಡೆಸಿಕೊಡಬೇಕು ಎಂದರು ನಂತರ ನಗರದ ಶ್ರೀ ಮಹಾಲಕ್ಷ್ಮಿ ಮಂದಿರಕ್ಕೆ ತೇರಳಿ ಪೂಜೆ ಸಲ್ಲಿಸಿ ಜಾತ್ರೆ ಪ್ರಾರಂಭಕ್ಕೆ ನಾಂದಿ ಹಾಡಲಾಯಿತು.
ಇಂದು ರಾತ್ರಿ ಶ್ರೀ ದೇವಿಯ ಮೂರ್ತಿಯನ್ನು ಉಯ್ಯಾಲೆ ಮೂಲಕ ಭಂಡಾರದ ಓಕಳಿಯೊಂದಿಗೆ ಹಕ್ಕುದಾರರ ಮನೆಗೆ ತೇರಳಿ ಉಡಿ ತುಂಬಿಸುವ ಕಾರ್ಯ ನಡೆಯುತ್ತದೆ ಕಾರಣ ಯಾವದೇ ಅಹಿತಕರಣ ಘಟನೆ ಜರುಗದಂತೆ ಗೋಕಾಕ ಡಿ ಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ನೇತೃತ್ವದಲ್ಲಿ ಸ್ವೀಕ್ ಆಕ್ಸನ್ ಫೋರ್ಸ, ಕೆ ಎಸ್ ಆರ್ ಪಿ ಮತ್ತು ಡಿ ಆರ್ ತುಕಡಿಗಳ ಸುಮಾರು ಮೂರ ನೂರು ಪೋಲಿಸರು ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಮುಖ ಬೀದಿ ಬೀದಿಗಳಲ್ಲಿ ಸಂಚರಿಸುವ ಮೂಲಕ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ದ್ಯಾಮವ್ವ ದೇವಿ ಜಾತ್ರಾ ಕಮಿಟಿ ಹಕ್ಕದಾರರು ಹಾಗೂ ಪಂಚರು ಹಾಗೂ ಶ್ರೀ ಮಹಾವೀರ್ ನಿಲಜಗಿ ಶ್ರೀ ಸುಭಾಷ್ ನಾಯಕ್ ಶ್ರೀ ರವಿ ಗಜಬರ್ ಮನೋಜ್ ದೇಸಾಯಿ ಪ್ರವೀಣ್ ಹಂದಿಗುಂದ್ ಜಯಾನಂದ್ ಹಿರೇಮಠ ರಾಜು ಮಹೇಶ್ ಸುನೀಲ್ ಪ್ರಕಾಶ್ ಮಾರುತಿ. ಸ್ಥಳೀಯರು ಜನರು ಗಣ್ಯಮಾನ್ಯರು ಮುಖಂಡರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.
ವರದಿ : ಸದಾನಂದ ಎಮ್
