ರಂಜಾನ್ ಮಾಸವಿಡೀ ವೃತಾಚರಣೆ ಮಾಡಿದ ಏಳು ವರ್ಷದ ಬಾಲಕ ಮುಯೀಜ್

ರಾಮದುರ್ಗ: ಪವಿತ್ರ ರಂಜಾನ್ ಮಾಸದಲ್ಲಿ ( ರೋಜಾ) ಉಪವಾಸ ಆಚರಣೆ ಮಾಡುವುದು ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರ ಕರ್ತವ್ಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಇದೀಗ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಕೇವಲ 7 ವರ್ಷದ ಪುಟ್ಟ ಬಾಲಕನು ರಂಜಾನ್ ಮಾಸದ ಎಲ್ಲಾ 30 ರೋಜಾಗಳನ್ನು ಪೂರ್ಣಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಹೌದು… ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಮುಯಿಜ್.ಅಬ್ದುಲ್ ಗಫಾರ.ಮುದಕವಿ ಎಂಬ 7 ವರ್ಷದ ಪುಟ್ಟ ಬಾಲಕನು ಈ ವರ್ಷದ ಪವಿತ್ರ ರಂಜಾನ್ ಮಾಸದಲ್ಲಿ ಒಂದೂ ದಿನ ಬಿಡದೇ ಎಲ್ಲಾ 30 ದಿನಗಳ ಉಪವಾಸವನ್ನು ಆಚರಿಸಿದ್ದಾನೆ.

ಇಷ್ಟು ಚಿಕ್ಕ ವಯಸ್ಸಿನಲ್ಲೇ ಆತ ತೋರಿದ ಧೈರ್ಯ, ಸಹನೆ ಮತ್ತು ಧಾರ್ಮಿಕ ನಿಷ್ಠೆ ಎಲ್ಲರಲ್ಲೂ ಸಂತೋಷವನ್ನುಂಟು ಮಾಡಿದೆ. ಮುಯಿಜ್ ಅವರ ಪೋಷಕರು ಹೇಳುವಂತೆ, ಬಾಲಕನು ತನ್ನ ಸ್ವಂತ ಆಸಕ್ತಿಯಿಂದಲೇ ಪ್ರತಿದಿನ ರೋಜಾ ಇಟ್ಟು, ಸಮಯಕ್ಕೆ ಸರಿಯಾಗಿ ನಮಾಜ್ ಮತ್ತು ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಿದ್ದನು.

ಈ ರೀತಿ ಪುಟ್ಟ ಪುಟ್ಟ ಮಕ್ಕಳಲ್ಲಿ ಧಾರ್ಮಿಕ ಶಿಸ್ತು , ಭಕ್ತಿ ಮತ್ತು ನಂಬಿಕೆ ಬೆಳೆದು ಬರುತ್ತಿರುವುದು ಸಮಾಜಕ್ಕೆ ಒಳ್ಳೆಯ ಸಂದೇಶ. ಮುಯಿಜ್ ಮಾಡಿದ ಈ ಸಾಧನೆ ಇತರ ಮಕ್ಕಳಿಗೂ ಪ್ರೇರಣೆಯಾಗಲಿದೆ ಎಂದು ಕುಟುಂಬದವರು ಮತ್ತು ಬಂಧು-ಬಳಗದವರು ಮುಯೀಜ್ ನ ಈ ಸಾಧನೆಯನ್ನು ಮೆಚ್ಚಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪವಿತ್ರ ರಂಜಾನ್ ಮಾಸದ ಎಲ್ಲಾ 30 ರೋಜಾಗಳನ್ನು ಪೂರ್ಣಗೊಳಿಸಿದ 7 ವರ್ಷದ ಮುಯಿಜ್ ಗೆ ನಮ್ಮ ವಾರ್ತಾ ವಾಹಿನಿಯ ವತಿಯಿಂದಲೂ ಕೂಡ ಹಾರ್ದಿಕ ಅಭಿನಂದನೆಗಳು. ಇಂತಹ ಸಾಧನೆಗಳು ಇನ್ನಷ್ಟು ಮಕ್ಕಳು ಮಾಡಲಿ ಎಂಬುದು ನಮ್ಮೆಲ್ಲರ ಆಶಯ.

ವರದಿ : ಸೋಹೈಲ ಭೈರಕದಾರ

error: Content is protected !!