ಶಿವಾನಂದ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಕಾಗವಾಡ : ದಿನಾಂಕ : ೧೪.೦೩.೨೦೨೬
ಶಿವಾನಂದ ಮಹಾವಿದ್ಯಾಲಯದ ಕು. ಮಯೂರೇಶ ಕುಂಬಾರ ಮತ್ತು ಕು. ದ್ರುವ ಖತ್ರೋಟಿಯಾ ಬಿಜಿನೆಸ್ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂ.೨೫೦೦/- ಬಹುಮಾನ, ಕು. ಮಹೇಕ ಅಪರಾಜ, ಕು. ಲತಾ ಸುತಾರ ಬಿ-ಪ್ಲಾö್ಯನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂ. ೨೦೦೦/- ನಗದು ಬಹುಮಾನ, ಕು. ಪ್ರತಿಕ್ಷಾ ಕೊತ್ತಲಗೆ, ಕು. ಮಹೇಕ ಅಪರಾಜ, ಕು. ಲತಾ ಸುತಾರ, ಕು. ಸಾನಿಯಾ ಬೀಳಗಿ, ಕು. ಸಾನಿಯಾ ಗಾಯಕವಾಡ, ಆ್ಯಡ್-ಮ್ಯಾಡ ಶೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನದೊಂದಿಗೆ ರೂ. ೧೦೦೦/- ನಗದು ಬಹುಮಾನ ಪಡೆದುಕೊಳ್ಳುವುದರ ಮೂಲಕ ಮಹಾವಿದ್ಯಾಲಯಕ್ಕೆ ಎಸ್‌ಡಿವಿಎಸ್ ಸಂಘ, ಅನ್ನಪೂರ್ಣಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ರಿಸರ್ಚ, ಸಂಕೇಶ್ವರ ಪ್ರಾಯೋಜಿತ ‘ಆರಂಭ ೨ಏ೨೬’ ಸ್ಪರ್ಧೆಯಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸ್ಪರ್ಧೆಯಲ್ಲಿ ಮಹಾವಿದ್ಯಾಲಯದಿಂದ ಒಟ್ಟು ೩೪ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.

error: Content is protected !!