ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿಯ ವಾಟಾದಹೊಸಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆ ಯಾಗಿದೆ
ವಾಟಾದಹೊಸಹಳ್ಳಿ ಕೆರೆಯ ದಡದಲ್ಲಿ ಸುಮಾರು 40ವರ್ಷದ ಮಹಿಳೆಯ ಶವವೊಂದು ನೀರಿನ ಮೇಲೆ ತೇಲಿದೆ ಸ್ಥಳೀಯರು ಶವವನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಶವವನ್ನು ಮೇಲೆತ್ತಿದ್ದಾರೆ ಮೃತ ಮಹಿಳೆ ಯಾರು ಎಂದು ಗುರುತು ಹಿಡಿಯಲಾಗದೆ ಮೀನುಗಳು ಮಹಿಳೆಯ ಮುಖವನ್ನು ತಿಂದಿವೆ
ಇನ್ನು ಗೌರಿಬಿದನೂರು ಗ್ರಾಮಾಂತರ ಠಾಣೆಯ ಆರಕ್ಷಕ ರವರಾದ ಹರೀಶ್ ಕುಮಾರ್ ರವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ನವೀನ್ ಕುಮಾರ್
