ಬಸವಕಲ್ಯಾಣ : ಬಾಲ್ಯ ವಿವಾಹ ತಡೆಗಟ್ಟಲು ಬಾಲ್ಯವಿವಾಹ ನಿಷೇಧಾಧಿಕಾರಿಗಳು ಸಕ್ರಿಯವಾಗಿ ಬಾಗಿಯಾಗುವ ಕುರಿತು,
ದಿನಾಂಕ:09-04-2026 ರಂದು ಬಸವಕಲ್ಯಾಣ ತಾಲ್ಲೂಕಾ ತಹಸಿಲ್ದಾರರ ಕಛೇರಿಯಲ್ಲಿ ಕಾರ್ಯಗಾರ ಹಮ್ಮಿಕೊಂಡಿದ್ದು, ಈ ಕಾರ್ಯಗಾರದ ಕುರಿತು ಉಪ ತಹಸಿಲ್ದಾರರು ಮಾತನಾಡಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಬಾಲ್ಯ ವಿವಾಹ ನಿಷೇಧಿಸಲು ಸಕ್ರಿಯವಾಗಿ ಭಾಗವಹಿಸಲು ಮತ್ತು ಬಾಲ್ಯ ವಿವಾಹ ತಡೆಗಟ್ಟಲು ಮೂತುವರ್ಜಿವಹಿಸಿ ಬಾಲ್ಯ ವಿವಾಹ ನೆರವೆರಿಸುವ ಪಾಲಕರ ಮೇಲೆ ಹಾಗೂ ಪೂಜಾರಿಗಳು, ಸಂಬಂದಿಕರು, ಪ್ರೇರೆಪಿಸಿದವರು, ಆಹ್ವಾನ ಪತ್ರಿಕೆ ಮುದ್ರಣಕಾರರು, ಧಾರ್ಮಿಕ ಮುಖಂಡರು. ಶಾಮಿಯಾನ ಹಾಕುವವರು, ಕಲ್ಯಾಣ ಮಂಟಪದ ಮುಖ್ಯಸ್ಥರು, ಉತ್ತೇಜನ ನೀಡಿದವರು ಬಾಲ್ಯ ವಿವಾಹ ತಡೆಯಲು ವಿಫಲರಾದವರು ಮತ್ತು ಭಾಗವಹಿಸಿದವರು ಎಲ್ಲರೂ ಅಪರಾಧಿಗಳೇ ಆಗಿರುತ್ತಾರೆ.
ಅಂತಹವರ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದೂ ಹೇಳಿದರು. ನಂತರ ಮಾತನಾಡಿದ ಗೌತಮ ಶಿಂಧೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಬಸವಕಲ್ಯಾಣ, ಬಾಲ್ಯ ವಿವಾಹ ನಿಷೇಧ ಅಧಿನಿಯಮ-2016ರ ಪ್ರಕಾರ ತಪ್ಪಿತಸ್ಥರಿಗೆ ಕನಿಷ್ಟ 2 ವರ್ಷದ ವರೆಗೆ ಕಾರಾಗೃಹವಾಸ ಮತ್ತು ಒಂದು ಲಕ್ಷದವರೆಗೆ ದಂಡ ವಿಧಿಸಬಹುದು. ಕಾನೂನು ಪ್ರಕಾರ ವಧುವಿಗೆ 18 ವರ್ಷ, ಮತ್ತು ವರನಿಗೆ 21 ವರ್ಷ ಪೂರ್ಣಗೊಂಡಿರಬೇಕು. ತಪ್ಪಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಆದ್ದರಿಂದ ಪಾಲಕ, ಪೋಷಕ. ಹಾಗೂ ಸಂಬಂದಿಕರು, ಬಾಲ್ಯ ವಿವಾಹ ಮಾಡದಂತೆ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ತಿಳಿಸಿದರು. ಹಾಗೂ ತಾಲ್ಲೂಕಿನ ಎಲ್ಲಾ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.
ವರದಿ : ಆದಿತ್ಯ ಗಜರೆ
