ಮೊದಲ ದಿನವೇ ರಾಜೀನಾಮೆ: ಖಾಸಗಿ ಆಸ್ಪತ್ರೆಯ ಸುಲಿಗೆ ವಿರುದ್ಧ ಯುವ ವೈದ್ಯೆಯ ಧೈರ್ಯ.!

ಕೆಲಸಕ್ಕೆ ಸೇರಿದ ಮೊದಲ ದಿನವೇ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಗಂಭೀರ ಆರೋಪ ಮಾಡಿ ಯುವ ವೈದ್ಯೆಯೊಬ್ಬರು ರಾಜೀನಾಮೆ ನೀಡಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ. ಚಂಡೀಗಢದ ಇಂಟರ್ನಲ್ ಮೆಡಿಸಿನ್ ತಜ್ಞೆ ಡಾ. ಪ್ರಭ್ಲೀನ್ ಕೌರ್ ಈ ನಿರ್ಧಾರ ತೆಗೆದುಕೊಂಡಿದ್ದು, ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ವೀಡಿಯೊದಲ್ಲಿ ಅವರು, ಆಸ್ಪತ್ರೆಯವರು ರೋಗಿಗಳ ಆರೋಗ್ಯಕ್ಕಿಂತ ಲಾಭಕ್ಕೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವೈದ್ಯಕೀಯವಾಗಿ ಅಗತ್ಯವಿಲ್ಲದಿದ್ದರೂ ರೋಗಿಗಳನ್ನು ಅಡ್ಮಿಟ್ ಮಾಡುವುದು, ಅನಗತ್ಯವಾಗಿ ಐಸಿಯುಗೆ ಸೇರಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿತ್ತು ಎಂದು ತಿಳಿಸಿದ್ದಾರೆ. ಇದರಿಂದ ರೋಗಿಗಳ ಮೇಲೆ ಆರ್ಥಿಕ ಭಾರ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ಮಾರ್ಗದರ್ಶನದಲ್ಲಿ ಈ ಕ್ರಮಗಳು ನಡೆಯುತ್ತಿವೆ ಎಂದು ಡಾ. ಕೌರ್ ಆರೋಪಿಸಿದ್ದಾರೆ. “ವೈದ್ಯಕೀಯ ನೈತಿಕತೆಗಿಂತ ಸಂಬಳ ದೊಡ್ಡದಲ್ಲ” ಎಂದು ಹೇಳಿ, ತಮ್ಮ ರಾಜೀನಾಮೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ. ಅನೇಕರು ವೈದ್ಯೆಯ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಂದೆಡೆ, ಖಾಸಗಿ ಆಸ್ಪತ್ರೆಗಳ ಲಾಭದಾಸೆ ಹಾಗೂ ಆರೋಗ್ಯ ಕ್ಷೇತ್ರದ ನೈತಿಕತೆ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.

error: Content is protected !!