ಕಲಬುರಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷರು ವೀರೇಂದ್ರ ಪಾಟೀಲ ರಾಯಕೋಡ ಕಲಬುರಗಿ ಗ್ರಾಮಾಂತರ ಇವರ ಆದೇಶ ಮೇರೆಗೆ ಕಲಬುರ್ಗಿ ಗ್ರಾಮಾಂತರ ಜಿಲ್ಲೆಯ ಸಂಘಟನಾತ್ಮಕ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಅಭಿಷೇಕ ಮಲಕನೂರು ನೇಮಕ ಮಾಡಲಾಗಿದ್ದು ಕೂಡಲೇ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷಕ್ಕೆ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದ್ದಾರೆ.
ತಮಗೆ ನೇಮಕ ಮಾಡಿದ ಜಿಲ್ಲಾಧ್ಯಕ್ಷರಿಗೆ ಧನ್ಯವಾದಗಳು ತಿಳಿಸಿ ತಮ್ಮ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಘಟನಾತ್ಮಕ ಕೆಲಸಗಳನ್ನು ಮಾಡಿ ಬಿಜೆಪಿ ಪಕ್ಷಕ್ಕೆ ಒಳ್ಳೆಯ ಕೆಲಸವನ್ನು ಮಾಡುವುದಾಗಿ ತಿಳಿಸಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್
