ಎರಡು ಬೈಕ್ ನಡುವೆ ಮುಖಾಮುಖಿ; ಬೈಕ್ ಸವಾರರಿಬ್ಬರ ದುರ್ಮರಣ

ವಿಜಯಪುರ ಜಿಲ್ಲೆಯ

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೆ ಇಬ್ಬರು ಬೈಕ್ ಸವಾರರು ದುರ್ಮರಣಕ್ಕೀಡಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ನಾಗೂರು ರಸ್ತೆ ಎಲ್ಲಿ ನಡೆದಿದೆ. ಶಾಹಿದ್ ಹುಬ್ಬಳ್ಳಿ (21), ಸಂಗಯ್ಯ ಹಿರೇಮಠ (24) ಸ್ಥಳದಲ್ಲೆ ಸಾವನ್ನಪ್ಪಿದ ದುರ್ದೈವಿಗಳು. ಇಬ್ಬರ ಬೈಕ್ ಮುಖಾಮುಖಿ ಡಿಕ್ಕಿಯಾಗಿ ವೇಗವಾಗಿ ಬೈಕ್ ಚಲಾಯಿಸಿದ್ದೆ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ.

error: Content is protected !!