ಸರಾಫ್ ಬಜಾರ್ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರಿಗುತ್ತಿರುವ ತೊಂದರೆ ಕುರಿತು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ದೂರು

ವಿಜಯಪುರ : ನಗರದ ಹೃದಯ ಭಾಗವಾದ ಸರಾಫ್ ಬಜಾರ್ ನಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಇದರ ಪರಿಣಾಮವಾಗಿ ಮಿಲನ್ ಬಾರ್ ರಸ್ತೆಯ ಮೂಲಕ ಕೋಟೆಗೋಡೆ (ನಾಗೂರ ಕಾಲೇಜ್) ವರೆಗೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು, ಮಿಲನ್ ಬಾರ್ ನಿಂದ ಜಿಣಗಾರಗಲ್ಲಿ ಹನುಮಾನ್ ಮಂದಿರದ ವರೆಗೆ ರಸ್ತೆಯ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ಪಾರ್ಕಿಂಗ್ ಇರುತ್ತದೆ. ಹಾಗೂ ಅಲ್ಲಿರುವ ವ್ಯಾಪಾರಸ್ಥರು ತಮ್ಮ ತಮ್ಮ ಮಳಿಗೆಗಳ ಮುಂಭಾಗದಲ್ಲಿ ರಸ್ತೆಯ ಮೇಲೆ ತಮ್ಮ ವಸ್ತುಗಳನ್ನು, ಕಬ್ಬಿಣದ ಸ್ಟಾಂಡ್ ಗಳನ್ನು ಇಡುತ್ತಿದ್ದು, ಇದರಿಂದ ಅಲ್ಲಿ ಸಂಚರಿಸುವ ವಾಹನಗಳಲ್ಲಿ ಅತೀಯಾದ ವಾಹನ ದಟ್ಟಣೆ ಎದುರಾಗುತ್ತಿದೆ. ಹಾಗಾಗಿ ತಾತ್ಕಾಲಿಕವಾಗಿ ಅಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಬಂಧಗೊಳಿಸಿ ಪಾರ್ಕಿಂಗ್ ಗೆ ಸೂಕ್ತ ಸ್ಥಳ ನಿಗದಿಪಡಿಸಬೇಕು. ಹಾಗೂ ವ್ಯಾಪಾರಸ್ಥರಿಗೆ ತಮ್ಮ ವಸ್ತುಗಳನ್ನು ರಸ್ತೆಯ ಮೇಲೆ ಇಡದಂತೆ ಕಟ್ಟು ನಿಟ್ಟಿನ ನಿರ್ದೇಶನ ನೀಡಬೇಕು.

ಅದರಂತೆಯೇ ಗಾಂಧಿ ವೃತ್ತದಿಂದ ಸಿದ್ಧೇಶ್ವರ ದೇವಸ್ಥಾನದ ಮಾರ್ಗವಾಗಿ BLDE ಆಸ್ಪತ್ರೆಗೆ ಹೋಗುವ ಏಕಮುಖ ಸಂಚಾರ ರಸ್ತೆಯ ಪಕ್ಕದಲ್ಲಿನ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆ ರಸ್ತೆಯನ್ನು ಏಕಮುಖ ಸಂಚಾರದ ಬದಲಾಗಿ ದ್ವಿಮುಖ (2 way) ಸಂಚಾರ ಪ್ರಾರಂಭಿಸಬೇಕಾಗಿ ವಿನಂತಿಸಿ ಮನವಿ ಪತ್ರ ಸಲ್ಲಿಸಿದರು.

ವರದಿ : ಅಝೀಜ್ ಪಠಾಣ

error: Content is protected !!