ಇಸ್ರೇಲ:ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ ಅಭಿಯಾನ ಮುಗಿದಿದೆ. ಪೊಲಿಯೋ ಕಾಯಿಲೆ ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಪೊಲಿಯೋ ಲಸಿಕೆ ನೀಡುವುದಕ್ಕೆ ಮುಂದಾಗಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಒಂದು ಲಕ್ಷದ 87,000 ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಎರಡನೇ ಹಂತದ ವ್ಯಾಕ್ಸಿನ್ ಹಾಕುವ ಕಾರ್ಯ ಪ್ರಾರಂಭವಾಗಿದ್ದು 3,40,000 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಮೂರನೇ ಹಂತದ ವ್ಯಾಕ್ಸಿನ್ ಹಾಕುವ ಯೋಜನೆಯು ಸೆಪ್ಟೆಂಬರ್ 9 ರಂದು ಆರಂಭವಾಗಲಿದೆ. ಪಶ್ಚಿಮ ಗಾಝಾದಲ್ಲಿ ಒಂದೂವರೆ ಲಕ್ಷ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಗುರಿಯನ್ನು ಮೂರನೇ ಹಂತದಲ್ಲಿ ಇಟ್ಟುಕೊಳ್ಳಲಾಗಿದೆ. ಗಾಝಾದಲ್ಲಿ ಕಳೆದ ತಿಂಗಳು ಹಲವು ಮಕ್ಕಳು ಪೊಲಿಯೋ ಕಾಯಿಲೆಗೆ ತುತ್ತಾದದ್ದು ವರದಿಯಾಗಿತ್ತು.