ನೀರಿಗಾಗಿ ರೈತರಿಂದ ಅಹೋರಾತ್ರಿ ಧರಣಿ

ಕೊಟಬಾಗಿ ಏತ ನೀರಾವರಿ ಕಣ್ಮರೆಯಾದ ಹಿನ್ನೆಲೆಯಲ್ಲಿ ರೈತರಿಂದ ಸರ್ಕಾರಕ್ಕೆ ಛಿಮಾರಿ.
ಚಿಕ್ಕೋಡಿ ತಾಲೂಕಿನ ಹಲವಾರು ಹಳ್ಳಿಗಳಿಗೆ ನೀರು ಸರಬರಾಜಿನಲ್ಲಿ ತಾರತಮ್ಯ ಆರೋಪದ ಹಿನ್ನೆಲೆಯಲ್ಲಿ ಹುಕ್ಕೇರಿ ವ್ಯಾಪ್ತಿಯಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ
​ಕೊಟಬಾಗಿ ಏತ ನೀರಾವರಿ ಯೋಜನೆಯಿಂದ ಚಿಕ್ಕೋಡಿ ತಾಲೂಕಿನ ಗಡಿಭಾಗದ ಹಲವು ಹಳ್ಳಿಗಳಿಗೆ ನ್ಯಾಯಯುತವಾಗಿ ತಲುಪಬೇಕಾದ ನೀರನ್ನು ಸಮರ್ಪಕವಾಗಿ ಬಿಡುತ್ತಿಲ್ಲವೆಂದು ರೈತರು ಆರೋಪಿಸಿ, ಹುಕ್ಕೇರಿ ತಾಲೂಕಿನಲ್ಲಿ ರೈತರು ಆರಂಭಿಸಿರುವ ಅಹೋರಾತ್ರಿ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡಿದೆ.

​ಚಿಕ್ಕೋಡಿ ತಾಲೂಕಿನ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿಗೆ ಕೊಟಬಾಗಿ ಏತ ನೀರಾವರಿಯೇ ಪ್ರಮುಖ ಆಧಾರವಾಗಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕೆಲವು ನಿರ್ದಿಷ್ಟ ಗ್ರಾಮಗಳಿಗೆ ಮಾತ್ರ ನೀರು ತಲುಪುತ್ತಿದ್ದು, ಉಳಿದ ಗ್ರಾಮಗಳಿಗೆ ನೀರಿನ ಕೊರೆತೆ ಯಿಂದ ಜಮಿನಿಗಳಿಗೆ ಹಾಗೂ ಜನ ಜಾನುವಾರುಗಳಿಗೆ ನೀರಿನ ಅಭಾವ ಎದುರಿಸುವಂತಾಗಿದೆ ಎಂದು ಆಕ್ರೋಶಗೊಂಡ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ನೀರಿನಲ್ಲಿ ರಾಜಕೀಯ ಮಾಡುವುದು ಸರಿ ಅಲ್ಲ ಹಿಡಕಲ್ಲ್ ಜಲಾಶಯದಿಂದ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆ ಹಾಗೂ ವಿಜಯಪುರ ಬಾಗಲಕೋಟ ವರೆಗೆ ನಮ್ಮ ಭಾಗದಕ್ಕೆ ನೀರು ಹಂಚಿಕೆ ಮಾಡುತ್ತಿರುವ ಈ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಪಕ್ಕದಲ್ಲಿ ಇರುವ ಹಳ್ಳಿಯ ಜನರಿಗೆ ನೀರು ಬಿಡಲು ಕೊರತೆ ಉಂಟಾಗುತ್ತೆದೆ ಇದು ಯಾವ ನ್ಯಾಯ ಎಂದು ರೈತ ಮುಖಂಡರು ಸರ್ಕಾರದ ವಿರುದ್ಧ ಕಿಡಿ ಕಾರಿದರು.

ನಮ್ಮ ಭಾಗಕ್ಕೆ ಸಮರ್ಪಕ ವಾಗಿ ನೀರು ಬಿಡದೇ ಹೋದರೆ ಮುಂದಾಗುವ ಪರಿಣಾಮ ಎದುರಿಸಲು ಸರ್ಕಾರಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸಿದ್ದರಾಗಿ ಎಂದು ಈ ಸಂದರ್ಭದಲ್ಲಿ ಮಾಧ್ಯಮದ ಮೂಲಕ ತಿಳಿಸಿದರು.

​ರೈತ ಮುಖಂಡ ರಾಚ್ಚಪ್ಪ ಶಿವಾಪುರೆ ಮಾತನಾಡಿ
​ಕೊಟಬಾಗಿ ಏತ ನೀರಾವರಿ ಯೋಜನೆಯಡಿ ಬರುವ ಚಿಕ್ಕೋಡಿ ತಾಲೂಕಿನ ಎಲ್ಲಾ ನಿಯೋಜಿತ ಹಳ್ಳಿಗಳಿಗೆ ತಕ್ಷಣವೇ ಸಮಾನವಾಗಿ ನೀರು ಬಿಡುಗಡೆ ಮಾಡಬೇಕು.
​ನೀರಿನ ಹಂಚಿಕೆಯಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ತಾರತಮ್ಯವನ್ನು ತಡೆಗಟ್ಟಲು ಜಿಲ್ಲಾಧಿಕಾರಿ ಮತ್ತು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
​ನೀರು ಸರಬರಾಜು ಮಾಡುವ ನಾಲಾ ಹಾಗೂ ಪಂಪ್‌ಗಳ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.
​ನಾವು ಬೆಳೆದ ಬೆಳೆಗಳು ನೀರಿನ ಅಭಾವದಿಂದ ಒಣಗಿ ಹೋಗುತ್ತಿವೆ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹಕ್ಕಿನ ನೀರು ನಮಗೆ ಸಿಗುವವರೆಗೆ ಮತ್ತು ಸಂಬಂಧಪಟ್ಟ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡುವವರೆಗೆ ಈ ಅಹೋರಾತ್ರಿ ಧರಣಿ ಹಿಂಪಡೆಯುವುದಿಲ್ಲ, ಎಂದು ಧರಣಿನಿರತ ರೈತ ಮುಖಂಡರು ಎಚ್ಚರಿಸಿದ್ದಾರೆ.
​ನಾಲ್ಕು ದಿನಗಳಿಂದ ಹಗಲು-ರಾತ್ರಿ ಎನ್ನದೆ ಕೊರೆಯುವ ಚಳಿ ಹಾಗೂ ಬಿಸಿಲನ್ನು ಲೆಕ್ಕಿಸದೆ ನೂರಾರು ರೈತರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು, ಜಿಲ್ಲಾಧಿಕಾರಿ,ಸ್ಥಳೀಯ ಆಡಳಿತ ಮತ್ತು ನೀರಾವರಿ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಮಹಾದೇವ ಕಿವುಡ, ಕಲ್ಲಪ್ಪ ಕಮತೆ, ದುಂಡಪ್ಪಾ ಬೆಂಡ್ಡವಾಡೆ, ಬಸಲಿಂಗ ಹಿತ್ತಲಮನಿ, ವಿಠೋಬಾ ಕಿವುಡ, ರೇವಯ್ಯ ಜಂಗಮ, ರಮೇಶ ಬಾಗಿ, ಬಾಳಪ್ಪ ಕುರಣಿ, ಶಿವಾನಂದ ಪಾಟೀಲ, ರಾಜು ಯಾದಗುಡೆ, ಬಸು ಕಿವುಡ, ಭರಮಪ್ಪ ಹುಚ್ಚನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

error: Content is protected !!