ರಾಜ್ಯಮಟ್ಟದ ಪತ್ರಕರ್ತರ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 24ಕ್ಕೆ ಬೆಂಗಳೂರಿನಲ್ಲಿ

ಬೆಂಗಳೂರು: ಹಿಂದುಳಿದ ವರ್ಗಗಳ ಸಂಪಾದಕರು ಹಾಗೂ ಪತ್ರಕರ್ತರ ಸಂಘ ಮತ್ತು ದಿ. ನಾಗರಾಜು ಪ್ರತಿಷ್ಠಾನ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 2026ರ ಆಗಸ್ಟ್ 24ರ ಸೋಮವಾರ ಬೆಂಗಳೂರಿನ ಗಾಂಧಿ ಭವನದಲ್ಲಿ “ರಾಜ್ಯಮಟ್ಟದ ಪತ್ರಕರ್ತರ ಸಮಾವೇಶ” ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ವಿ.ಪಿ. ಸಿಂಗ್ ಪ್ರಶಸ್ತಿ, ಕರ್ಪೂರಿ ಠಾಕೂರ್ ಪ್ರಶಸ್ತಿ, ದೇವಮ್ಮ ಪ್ರಶಸ್ತಿ ಪ್ರದಾನದ ಜೊತೆಗೆ ಹಿರಿಯ ಪತ್ರಕರ್ತ-ಲೇಖಕರಾದ ಡಾ. ಎಂ.ಎಸ್. ಮಣಿ ಅವರ “ತೊಡರು ಬಳ್ಳಿ” ಕೃತಿಯ ಬಿಡುಗಡೆ ಸಮಾರಂಭವೂ ಜರುಗಲಿದೆ.

ಪ್ರಮುಖ ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ರಾಜ್ಯದ ನಿಕಟ ಪೂರ್ವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಶ್ರೀ ಬಿ.ಕೆ. ಹರಿಪ್ರಸಾದ್, ತಮಿಳುನಾಡಿನ ಸಂಸದ ತಿರುಮಾವಳವನ್ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಶ್ರೀ ಕೆ.ವಿ. ಪ್ರಭಾಕರ್ ಸೇರಿದಂತೆ ರಾಜ್ಯದ ಹಲವಾರು ಗಣ್ಯರು, ಹಿರಿಯ ಪತ್ರಕರ್ತರು ಮತ್ತು ಬರಹಗಾರರು ಭಾಗವಹಿಸಲಿದ್ದಾರೆ.

2026ರ ಪ್ರಶಸ್ತಿ ಪುರಸ್ಕೃತರ ಪಟ್ಟಿ

1. ವಿ.ಪಿ. ಸಿಂಗ್ ಪ್ರಶಸ್ತಿ:
– ಡಾ. ದಿನೇಶ್, ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ, ಬೆಂಗಳೂರು
– ಡಾ. ನಾಗೇಶ ಬಸವರಾಜ, ತಜ್ಞ ವೈದ್ಯರು, ಸ್ಪರ್ಶ ಆಸ್ಪತ್ರೆ, ಬೆಂಗಳೂರು
– ಡಾ. ಶಶಿಭೂಷಣ್, ನಿರ್ದೇಶಕರು, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ
– ಶ್ರೀ ರಾಮಪ್ಪ, ಧರ್ಮದರ್ಶಿಗಳು, ಸಿಗಂಧೂರು ಕ್ಷೇತ್ರ
– ಶ್ರೀ ಲಕ್ಷ್ಮೀನಾರಾಯಣ, ಸಮಾಜಸೇವಕರು
– ಶ್ರೀ ರಾಜು ಕಂಬಾರ, ಹಿರಿಯ ಪತ್ರಕರ್ತರು
– ಶ್ರೀ ಕೆ.ಎಸ್. ಸೋಮಣ್ಣ, ಹಿರಿಯ ಪತ್ರಕರ್ತರು

2. ಕರ್ಪೂರಿ ಠಾಕೂರ್ ಪ್ರಶಸ್ತಿ:

– ಶ್ರೀ ಲಕ್ಷ್ಮಣ ಕೊಡಸೆ, ಹಿರಿಯ ಪತ್ರಕರ್ತರು
– ಶ್ರೀ ಕಾಂತರಾಜ, ಮಾಜಿ ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು
– ಶ್ರೀ ಎಂ. ಸಿದ್ಧರಾಜು, ಮಾಜಿ ಅಧ್ಯಕ್ಷರು, ಕರ್ನಾಟಕ ಮಾಧ್ಯಮ ಅಕಾಡೆಮಿ
– ಪ್ರೊ. ಬಿ.ಕೆ. ರವಿ, ಉಪಕುಲಪತಿಗಳು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ
– ಶ್ರೀ ಐ.ಎಚ್. ಸಂಗಮದೇವ, ಹಿರಿಯ ಪತ್ರಕರ್ತರು
– ಶ್ರೀ ಗಂಗಾಧರ ಮೊದಲಿಯಾರ್, ಹಿರಿಯ ಪತ್ರಕರ್ತರು
– ಶ್ರೀ ರವಿ ಬಿದನೂರು, ಹಿರಿಯ ಪತ್ರಕರ್ತರು

3. ದೇವಮ್ಮ ಪ್ರಶಸ್ತಿ:

– ಶ್ರೀಮತಿ ಮಿನಿ ತೇಜಸ್ವಿನಿ, ಪತ್ರಕರ್ತೆ

ವಿಶೇಷ ಕಾರ್ಯಕ್ರಮಗಳು

ಕೃತಜ್ಞತಾ ಸಮರ್ಪಣೆ: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಶ್ರೀ ಕೆ.ವಿ. ಪ್ರಭಾಕರ್ ಅವರಿಗೆ ಪತ್ರಕರ್ತರ ವತಿಯಿಂದ ಕೃತಜ್ಞತಾ ಸಮರ್ಪಣೆ
– ಗ್ರಂಥ ಬಿಡುಗಡೆ: ಡಾ. ಎಂ.ಎಸ್. ಮಣಿ ಅವರ “ತೊಡರು ಬಳ್ಳಿ” ಕೃತಿ ಬಿಡುಗಡೆ

ಪತ್ರಕರ್ತರಿಗೆ ಸೌಲಭ್ಯ
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪತ್ರಕರ್ತರಿಗೆ ಸಂಘದ ವತಿಯಿಂದ ವಸತಿ ವ್ಯವಸ್ಥೆ, ಬ್ಯಾಗ್ ಮತ್ತು ಕಿಟ್ ವಿತರಣೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಭಾಗವಹಿಸಲು ಇಚ್ಛಿಸುವ ಪತ್ರಕರ್ತರು ತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಸಂಘವು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ:
– ಅಮರೇಶಣ್ಣ ಕಾಮನಕೇರಿ, ಬೆಂಗಳೂರು: 9008329745
– ಶಿವಕುಮಾರ ಬೆನ್ನೂರು, ಕಾರಟಗಿ: 9164569410

ಈ ಸಮಾವೇಶವು ರಾಜ್ಯದ ಹಿಂದುಳಿದ ವರ್ಗಗಳ ಪತ್ರಕರ್ತರ ಕೊಡುಗೆಯನ್ನು ಗುರುತಿಸುವುದರ ಜೊತೆಗೆ ಮಾಧ್ಯಮ ಕ್ಷೇತ್ರದ ಅನುಭವ ಮತ್ತು ಸಾಧನೆಗಳನ್ನು ಸಂಭ್ರಮಿಸುವ ವೇದಿಕೆಯಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

error: Content is protected !!