ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ವತಿಯಿಂದ ವಿಭಾಗ ಮಟ್ಟದ ಕಾರ್ಯಾಗಾರ ಹಾಗೂ ಪದಾಧಿಕಾರಿಗಳ ನೇಮಕ

ಕಲಬುರ್ಗಿ : ನಗರದ ರಾಜರಾಜೇಶ್ವರಿ ಹೋಟೆಲ್‌ನಲ್ಲಿ ‘ಸಮಾಜ ಸೇವಾ ಕಾರ್ಯಕರ್ತರ ವೇದಿಕೆ’ಯ ಕಲಬುರ್ಗಿ ಘಟಕದ ವತಿಯಿಂದ ವಿಭಾಗ ಮಟ್ಟದ ಮಾಹಿತಿ ಹಕ್ಕು ಕಾರ್ಯಾಗಾರ ಮತ್ತು ಸಭೆಯು ಯಶಸ್ವಿಯಾಗಿ ಜರುಗಿತು.

ಈ ಕಾರ್ಯಾಗಾರದಲ್ಲಿ ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಸಂಘಟನೆಯ ಮುಂದಿನ ಹೋರಾಟಗಳ ರೂಪುರೇಷೆ ಹಾಗೂ ಮಾಹಿತಿ ಹಕ್ಕು ಕಾಯ್ದೆಯ (RTI) ಪರಿಣಾಮಕಾರಿ ಅನುಷ್ಠಾನದ ಕುರಿತು ವಿಶೇಷ ಚರ್ಚೆ ನಡೆಸಲಾಯಿತು.

ನೂತನ ಪದಾಧಿಕಾರಿಗಳ ನೇಮಕ
ಸಭೆಯ ಪ್ರಮುಖ ಘಟ್ಟದಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವಿವಿಧ ಜಿಲ್ಲೆಗಳ ಉಸ್ತುವಾರಿ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳ ವಿವರ:

ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳು: ಉದಯ್ ಕುಮಾರ್ (ಉಸ್ತುವಾರಿ ಅಧ್ಯಕ್ಷರು)

ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು: ಪರಶುರಾಮ್ (ಉಸ್ತುವಾರಿ ಅಧ್ಯಕ್ಷರು)

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು: ವಿರೇಶ್ ಮಠ್ (ಉಸ್ತುವಾರಿ ಅಧ್ಯಕ್ಷರು) ನೇಮಕ ಮಾಡಲಾಯಿತು.

ರಾಜ್ಯಾಧ್ಯಕ್ಷ ಚೆನ್ನಯ್ಯ ವಸ್ತ್ರದ್, ಉಪಾಧ್ಯಕ್ಷ ಇಸ್ಮಾಯಿಲ್ ಶೇಕ್, ಕಾರ್ಯದರ್ಶಿ ಟಿ.ಹೆಚ್.ಎಂ ರಾಜಕುಮಾರ, ಮನೋಜ್ ಕುಮಾರ್, ರಾಮಕೃಷ್ಣ, ಸೈಯದ್ ಮೋಸಿನ ಅಲಿ, ರಾಜೇಂದ್ರ ಪ್ರಸಾದ್, ಸೇರಿದಂತೆ ರಾಜ್ಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!