ಸುಳ್ಳು ಸುದ್ದಿ ಪ್ರಕಟಿಸಿ ಪತ್ರಕರ್ತರ ಗೌರವಕ್ಕೆ ಧಕ್ಕೆ: ಕಾನೂನು ಕ್ರಮಕ್ಕೆ ಹುಕ್ಕೇರಿ ಪತ್ರಕರ್ತರ ಬಳಗ ಆಗ್ರಹ

ಹುಕ್ಕೇರಿ: ಹುಕ್ಕೇರಿ ತಾಲೂಕಿನ ಪತ್ರಕರ್ತರ ಬಳಗದ ವತಿಯಿಂದ ಸಾಮಾಜಿಕ ಜಾಲತಾಣ ಹಾಗೂ ವೆಬ್‌ಸೈಟ್‌ಗಳಲ್ಲಿ ಪತ್ರಕರ್ತರ ಕುರಿತು ಸುಳ್ಳು ಮತ್ತು ಆಧಾರರಹಿತ ಸುದ್ದಿ ಪ್ರಕಟಿಸಿರುವುದನ್ನು ತೀವ್ರವಾಗಿ ಖಂಡಿಸಲಾಗಿದೆ.
ದಿನಾಂಕ 05-09-2026 ರಂದು ‘Belagavi Voice’ ವೆಬ್‌ಸೈಟ್‌ನಲ್ಲಿ “ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರು ಕುಡಿದು ಗಲಾಟೆ ಮಾಡಿದ್ದಾರೆ” ಎಂಬ ಶೀರ್ಷಿಕೆಯಡಿ ಸುಳ್ಳು ಸುದ್ದಿಯನ್ನು ಪ್ರಕಟಿಸಿ ಪತ್ರಕರ್ತರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಪತ್ರಕರ್ತರ ಬಳಗ ಆರೋಪಿಸಿದೆ.
ಅಲ್ಲದೇ, ಹುಕ್ಕೇರಿಯ Inspection Bungalowನಲ್ಲಿ ಪತ್ರಕರ್ತರು ಕುಡಿದು ಗಲಾಟೆ ಮಾಡಿದ್ದಾರೆ ಎಂಬುದಾಗಿ ಮತ್ತೊಂದು ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದ್ದು, ಇದರಿಂದ ಪತ್ರಕರ್ತರ ವೃತ್ತಿಗೆ ಕಳಂಕ ತರುವ ಪ್ರಯತ್ನ ನಡೆದಿದೆ ಎಂದು ಬಳಗ ಆಕ್ರೋಶ ವ್ಯಕ್ತಪಡಿಸಿದೆ.
ಯಾವುದೇ ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲಿಸದೆ, ಸಂಬಂಧಪಟ್ಟವರ ಅಭಿಪ್ರಾಯ ಪಡೆಯದೆ ಸುದ್ದಿಯನ್ನು ಪ್ರಕಟಿಸುವುದು ಪತ್ರಿಕಾ ವೃತ್ತಿಯ ನೈತಿಕತೆಗೆ ವಿರುದ್ಧವಾಗಿದೆ. ಇಂತಹ ಆಧಾರರಹಿತ ಸುದ್ದಿಗಳಿಂದ ಸಮಾಜದಲ್ಲಿ ಪತ್ರಕರ್ತರ ಬಗ್ಗೆ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆಯಿದ್ದು, ಇದು ಪತ್ರಕರ್ತರ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುತ್ತದೆ.
ಆದ್ದರಿಂದ Belagavi Voice ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಸುಳ್ಳು ಸುದ್ದಿಯನ್ನು ಕೂಡಲೇ ಹಿಂಪಡೆಯಬೇಕು. ಅಲ್ಲದೇ, ಈ ಕುರಿತು ಸ್ಪಷ್ಟನೆ ಹಾಗೂ ಕ್ಷಮೆಯಾಚನೆ ಪ್ರಕಟಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹುಕ್ಕೇರಿ ತಾಲೂಕಿನ ಪತ್ರಕರ್ತರ ಬಳಗ ಆಗ್ರಹಿಸಿದೆ.
ಪತ್ರಕರ್ತರ ವೃತ್ತಿಗೆ ಕಳಂಕ ತರುವಂತಹ ಸುಳ್ಳು ಸುದ್ದಿಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ, ಕಾನೂನುಬದ್ಧವಾಗಿ ಹೋರಾಟ ನಡೆಸಲಾಗುವುದು ಎಂದು ಪತ್ರಕರ್ತರ ಬಳಗ ಎಚ್ಚರಿಸಿದೆ.

error: Content is protected !!