ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿ ಚರಂಡಿ ಮುಚ್ಚಿ ಹೋಗಿದ್ದು ಮಕ್ಕಳು ಶಾಲೆಗೆ ಬರುವಾಗ ಮತ್ತು ಹೋಗುವಾಗ ಗಬ್ಬು ವಾಸನೆಯಲ್ಲಿ ಓಡಾಡುವಂತ ಪರಿಸ್ಥಿತಿ ಎದುರಾಗಿದೆ ಆದ್ದರಿಂದ ಹೆಗ್ಗೇನಹಳ್ಳಿಯ ಸಾರ್ವಜನಿಕರು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ರೀತಿ ಸಮಸ್ಯೆ ಪರಿಹಾರ ಸಿಗದ ಕಾರಣ ಸಾರ್ವಜನಿಕರೇ ಖುದ್ದು ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿರುವ ಘಟನೆ ನಡೆದಿದೆ ಕೂಡಲೇ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಊರಿನಲ್ಲಿರುವ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಬೇಕು
ಇಲ್ಲಿಯೇ ಸರ್ಕಾರಿ ಶಾಲೆ ಇರುವುದರಿಂದ ಇತರೆ ಉಳ ಉಪ್ಪಟಗಳಿಂದ ತುಂಬಿ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳು ಎಚ್ಚಾಗುತ್ತಿವೆ ಈ ಹಿನ್ನೆಲೆ ಮಳೆ ಬಂದಾಗ ನೀರು ಸರಾಗವಾಗಿ ಹೋಗಲು ಚರಂಡಿಗಳ ಸರಿಯಾದ ವ್ಯವಸ್ಥೆ ಇಲ್ಲದೆ ನೀರು ಮನೆಗಳ ಮುಂದೆ ನಿಲ್ಲುತ್ತಿವೆ ಈ ಚರಂಡಿ ನೀರಿನಲ್ಲಿ ಉಳುಪ್ಪಟಗಳು ಮತ್ತು ಸೊಳ್ಳೆಗಳ ಕಾಟದಿಂದ ಸಾರ್ವಜನಿಕರು ಮನೆಗಳಲ್ಲಿ ರೋಗದ ಭೀತಿ ಎದುರಿಸುವ ರೀತಿ ಆಗಿದೆ ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಚರಂಡಿ, ಹಾಗು ಸಾರ್ವಜನಿಕರ ಸ್ಥಳಗಳಲ್ಲಿ ಸ್ವಚ್ಛತೆ ಗೆ ಮೂದಲು ಆದ್ಯತೆ ಕೊಡಬೆಕಾಗಿದೆ ಎಂದು ಅಲ್ಲಿನ ಗ್ರಾಮಸ್ಥರ ಮಾತಾಗಿದೆ ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿಯ ಮುಂದೆ ಧರಣಿ ಮಾಡುವುದಾಗಿ ಹೆಗ್ಗೆನಹಳ್ಳಿಯ ಗ್ರಾಮದ ಯುವಕರು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ರೋಗ ಭೀತಿಯನ್ನು ಎದುರಿಸುತ್ತಿರುವ ಊರಿನ ಗ್ರಾಮಸ್ಥರು ಸ್ಥಳದಲ್ಲಿದ್ದರು.
ವರದಿ : ನವೀನ್ ಕುಮಾರ್
