2014ರಲ್ಲಿ 248 ಕಿ.ಮೀ ಇದ್ದ ಮೆಟ್ರೋ ಜಾಲ ಈಗ 1,200 ಕಿ.ಮೀ ಗೆ ವಿಸ್ತರಣೆ – ಪ್ರಧಾನಿ ಮೋದಿ

ನವದೆಹಲಿ: ಭಾರತದ ಮೆಟ್ರೋ ಜಾಲ 2014ರಲ್ಲಿ 248 ಕಿ.ಮೀ ನಷ್ಟಿದ್ದು ಪ್ರಸ್ತುತ ಸುಮಾರು 1,200 ಕಿ.ಮೀ ಗೆ ವ್ಯಾಪಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಮೆಟ್ರೋ ಜಾಲ ಗಮನಾರ್ಹವಾಗಿ ವಿಸ್ತರಣೆ ಕಂಡಿರುವುದನ್ನು ವಿವರಿಸಿದ್ದಾರೆ. 2014ರಲ್ಲಿ ದೇಶದ 5 ನಗರಗಳಲ್ಲಿ ಕೇವಲ 248 ಕಿ.ಮೀ ಉದ್ದದ ಮೆಟ್ರೋ ಮಾರ್ಗಗಳಿದ್ದವು, ಆದರೆ ಇಂದು 26 ನಗರಗಳಲ್ಲಿ ಸುಮಾರು 1,200 ಕಿ.ಮೀ ಉದ್ದದ ಮೆಟ್ರೋ ಮಾರ್ಗಗಳಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರತಿದಿನ ಒಂದು ಕೋಟಿಗೂ ಹೆಚ್ಚು ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ ಎಂದು ಗಮನಸೆಳೆದಿರುವ ಪ್ರಧಾನಮಂತ್ರಿಯವರು, ಈ ವಿಸ್ತರಣೆಯಿಂದಾಗಿ ಸಂಚಾರ ದಟ್ಟಣೆಯಲ್ಲಿ ವ್ಯಯಿಸಬೇಕಾದ ಸಮಯ ತಗ್ಗಿದೆ ಎಂದು ಹೇಳಿದ್ದಾರೆ.

ಇದರಿಂದ ಕುಟುಂಬದೊಂದಿಗೆ ಕಾಲಕಳೆಯಲು ಹೆಚ್ಚು ಸಮಯ ದೊರೆತು, ಉತ್ಪಾದಕತೆ ಹೆಚ್ಚಾಗಲಿದೆ ಮತ್ತು ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಮೋದಿ ಅವರು ತಿಳಿಸಿದ್ದಾರೆ.

2014ಕ್ಕೂ ಮೊದಲು ಇದ್ದ ವೇಗದಲ್ಲೇ ಮೆಟ್ರೋ ಜಾಲ ವಿಸ್ತರಣೆಯಾಗಿದ್ದರೆ, ಪುಣೆಯಂತಹ ನಗರಗಳಲ್ಲಿ ಮೆಟ್ರೋ ಬರಲು ದಶಕಗಳೇ ಬೇಕಾಗುತ್ತಿತ್ತು ಎಂದು ಪ್ರಧಾನಿ ಹೇಳಿದ್ದಾರೆ. ನಗರ ಭಾರತಕ್ಕಾಗಿ ಸರ್ಕಾರವು ಈ ಪರಿವರ್ತನೆಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

error: Content is protected !!