ಖೇರ್ಡಾ-ಚಿಕ್ಲಿ(ಯು) ರಸ್ತೆ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ ಚಾಲನೆ

ಖೇರ್ಡಾನಿಂದ ಚಿಕ್ಲಿ(ಯು) ಮಹಾರಾಷ್ಟç ಬಾರ್ಡರ್‌ವರೆಗೆ ನಿರ್ಮಿಸಲಾಗುತ್ತಿರುವ 8.5 ಕೋಟಿಯ ರಸ್ತೆ ಕಾಮಗಾರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸೋಮವಾರ ದಾಬಕಾ(ಸಿ) ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದರು.

 

ಇದೇ ವೇಳೆ ಗುತ್ತಿಗೆದಾರರಾದ ಜಗದೀಶ ಖೂಬಾ ಅವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ, ಕೆಲಸ ಗುಣಮಟ್ಟದಿಂದ ಆಗಬೇಕು ಮತ್ತು ನಿಗದಿತ ಅವಧಿಯೊಳಗೆ ಮುಗಿಸಬೇಕು. ಅಂದಾಜು ಪಟ್ಟಿಯಲ್ಲಿ ಇರುವಂತೆ ಕೆಲಸ ಅಚ್ಚುಕಟ್ಟಾಗಿ ಆಗಬೇಕು. ಮುಂದಿನ ದಿನಗಳಲ್ಲಿ ರಸ್ತೆ ಬಗ್ಗೆ ಜನರಿಂದ ದೂರುಗಳು ಬಾರದ ಹಾಗೆ ಕೆಲಸ ಮಾಡಬೇಕೆಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

ನಾನು ಶಾಸಕನಾದ ನಂತರ ಈ ರಸ್ತೆ ಎಂದಿಗೂ ಕೆಟ್ಟಿರಲಿಲ್ಲ. ಗುತ್ತಿಗೆದಾರರ ಕಾರಣದಿಂದಾಗಿ ಈ ರಸ್ತೆ ಸಾಕಷ್ಟು ಕೆಟ್ಟು ಹೋಗಿ ಜನತೆ ಒಂದುವರೆ ವರ್ಷ ಸಂಕಷ್ಟ ಎದುರಿಸಿರುವುದಕ್ಕೆ ನೋವಾಗಿದೆ. ಚುನಾವಣಾ ಪೂರ್ವದಲ್ಲಿಯೇ ಆರಂಭಿಸಿದ ಕೆಲಸ ಇರುವ ರಸ್ತೆಯನ್ನೆಲ್ಲ ಅಗೆದು ಎಕಾಎಕಿ ನಿಲ್ಲಿಸಿದ್ದರಿಂದ ಓಡಾಡಲು ಆಗದೆ ಜನತೆ ಸಾಕಷ್ಟು ನೋವು ಅನುಭವಿಸಿದ್ದಾರೆ. ಹೆರಿಗೆಗಾಗಿ ಹೋಗಬೇಕಾದರೆ ಸಂಕಷ್ಟವಾಗುತ್ತಿದೆ ಎಂದು ಮಹಿಳೆಯರು ನೋವು ಹಂಚಿಕೊAಡಿದ್ದನ್ನು ನೆನೆಸಿಕೊಂಡರೆ ಮೈ ನಡುಗುತ್ತದೆ ಜನತೆ ಅನುಭವಿಸಿದ ಸಂಕಷ್ಟಗಳನ್ನು ಹಂಚಿಕೊAಡರು.

ರಸ್ತೆ ಅಪೂರ್ಣಗೊಳಿಸಿದ್ದರಿಂದ ಜನತೆ ಪ್ರತಿದಿನ ಹತ್ತಾರು ಕರೆಗಳನ್ನು ಮಾಡುವಂತಾಗಿದೆ. ಮುಂದೆ ಹೀಗಾಗಬಾರದು. ರಸ್ತೆ ಪೂರ್ಣಗೊಳಿಸುವರೆಗೆ ನಿಲ್ಲಿಸಬಾರದು. ಹಿಂದಿನAತೆ ಮಾಡಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲವೆಂದು ಎಚ್ಚರಿಸಿದರು. ಗ್ರಾಮಸ್ಥರು ಕೂಡ ತಮ್ಮ ಊರಿನ ರಸ್ತೆ ಕೆಲಸ ಸರಿಯಾಗಿ ಆಗುವಂತೆ ಮುತುವರ್ಜಿ ವಹಿಸಬೇಕು. ಎಲ್ಲಿಯಾದರೂ ಕೆಲಸ ಕಳಪೆಯಾಗುತ್ತಿರುವುದು ಕಂಡುಬAದಲ್ಲಿ ತಮ್ಮನ್ನು ಅಥವಾ ಸಂಬAಧಪಟ್ಟವರಿಗೆ ಮಾಹಿತಿ ನೀಡಿ ಸರಿಪಡಿಸಿಕೊಳ್ಳಬೇಕು. ನಾನು ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವೆ ಎಂದು ಭರವಸೆ ನೀಡಿದರು.

 

*ಸೇತುವೆ(ಸಿಡಿ) ಕಾಮಗಾರಿಗೆ ಚಾಲನೆ:* ಇದೇ ವೇಳೆ ಶಾಸಕರು 65 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ (ಸಿಡಿ) ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಪ್ರತೀಕ್ ಚವ್ಹಾಣ, ಸತೀಷ ಪಾಟೀಲ, ಯೋಗೇಶ ಪಾಟೀಲ, ರಾಜು ಶೆಳ್ಕೆ, ಸಂಜು ಮುರ್ಕೆ, ಜಾಕೀರ್ ಶೇಕ್, ಕುಶಾಲ ನಾಯಕ್, ಧನಾಜಿ ಬಿರಾದಾರ, ವಸಂತ ಶಿಂಧೆ, ಹನುಮಂತ ನಾಯಕ್, ಸುಜಿತ ರಾಠೋಡ, ಶುಭಂ ಪಾಟೀಲ್, ಗ್ಯಾನೋಬಾ ಪಾಟೀಲ, ಅಂಕುಶ ವಾಡೇಕರ್, ಭಾನುದಾಸ ಜಾಧವ್ ಸೇರಿದಂತೆ ಗ್ರಾಮ ಪಂಚಾಯಿತಿಗಳ ಅಧ್ತಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

 

 

ವರದಿ : ರಾಚಯ್ಯ ಸ್ವಾಮಿ 

error: Content is protected !!