ಔರಾದನಲ್ಲಿ 141 ವಿಶೇಷಚೇತನರಿಗೆ ಸೌಲಭ್ಯ ವಿತರಣೆ

 

ದಿವ್ಯಾಂಗರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಬಿಡುವುದಿಲ್ಲ: ಶಾಸಕ ಪ್ರಭು ಚವ್ಹಾಣ

ದಿವ್ಯಾಂಗರ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿದ ಎಲ್ಲ ಯೋಜನೆಗಳು ಸಮರ್ಪಕವಾಗಿ ಜಾರಿಗೊಳಿಸಬೇಕು. ಯಾವುದಾದರೂ ಕಛೇರಿಗಳಲ್ಲಿ ದಿವ್ಯಾಂಗರಿಗೆ ಹಣಕ್ಕಾಗಿ ಬೇಡಿಕೆಯಿಡುವುದು, ವಿನಾಕಾರಣ ಸತಾಯಿಸುವುದು ಮಾಡಿದರೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲವೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.

ಔರಾದ(ಬಿ) ಪಟ್ಟಣದ ಶಾಸಕರ ಕಛೇರಿ ಆವರಣದಲ್ಲಿ ಸೆ.23ರಂದು ಜರುಗಿದ ಕೇಂದ್ರ ಸರ್ಕಾರದ ದಿವ್ಯಾಂಗರ ಎಡಿಐಪಿ ಯೋಜನೆಯಡಿ ವಿಶೇಷಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಸಾಮಾಜಿಕ ಆಧಾರಿತ ಶಿಬಿರದಲ್ಲಿ ಅವರು ಮಾತನಾಡಿದರು.

ವಿಕಲಚೇತನರಿಗೆ ಅನುಕೂಲವಾಗುವ ದಿಶೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಚಾಲ್ತಿಯಲ್ಲಿವೆ. ಔರಾದ(ಬಿ) ಮತಕ್ಷೇತ್ರದಲ್ಲಿನ ವಿಕಲಚೇತನರ ಅನುಕೂಲಕ್ಕಾಗಿ ಸುಮಾರು 1 ಕೋಟಿ ಮೌಲ್ಯದ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ವಿಕಲಚೇನರು ಕೂಡ ಎಲ್ಲರಂತೆ ಸ್ವಾಭಿಮಾನ ಮತ್ತು ಗೌರವದಿಂದ ಬದುಕಬೇಕೆಂಬ ಉದ್ದೇಶದಿಂದ ಅವರನ್ನು ದಿವ್ಯಾಂಗರೆAದು ಕರೆಯಲಾಗುತ್ತಿದೆ. ಅವರ ವ್ಯಾಸಂಗಕ್ಕೆ ಅನುಕೂಲವಾಗಲು ವಿದ್ಯಾರ್ಥಿವೇತನ, ಪಿಂಚಣಿ ಯೋಜನೆ, ಉನ್ನತ ವಿದ್ಯಾಭ್ಯಾಸಕ್ಕೆ ನೆರವು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಟಾಕಿಂಗ್ ಲ್ಯಾಪ್‌ಟಾಪ್, ಸಾಧನ ಸಲಕರಣೆ ವಿತರಣೆ, ರಿಯಾಯಿತಿ ದರದಲ್ಲಿ ಬಸ್ ಪಾಸ್, ಉಚಿತ ರೈಲ್ವೇ ಪಾಸ್, ಬ್ರೆöÊಲ್ ಕಿಟ್ ವಿತರಣೆ, ಶಿಶುಪಾಲನಾ ಭತ್ಯೆ ಹೀಗೆ ಹತ್ತು ಹಲವು ಯೋಜನೆಗಳು ಜಾರಿಯಲ್ಲಿವೆ. ಇವುಗಳ ಲಾಭ ಪಡೆಯಬೇಕು ಎಂದರು.

ನನಗೆ ದಿವ್ಯಾಂಗರ ಬಗ್ಗೆ ಸಾಕಷ್ಟು ಗೌರವವಿದೆ. ಅವರಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಸೌಭಾಗ್ಯ ದೊರೆತಿರುವುದು ಸಂತೋಷ ನೀಡಿದೆ. ಇನ್ನು ಮುಂದೆ ಏನೆ ಸಮಸ್ಯೆಯಿರಲಿ ನೇರವಾಗಿ ಭೇಟಿಯಾಗಬಹುದು. ಸರ್ಕಾರದ ಸೌಲಭ್ಯ ಬೇಕಿದ್ದರೆ ನನ್ನ ಬಳಿಗೆ ಬಂದು ಗುರುತಿನ ಚೀಟಿ ತೋರಿಸಿದರೆ ಸಾಕು ಸೌಲಭ್ಯ ಕಲ್ಪಿಸಲು ಸಿದ್ಧನಿದ್ದೇನೆ. ಔರಾದ(ಬಿ) ಕ್ಷೇತ್ರದ ದಿವ್ಯಾಂಗರು ಹೆದರಬೇಕಿಲ್ಲ. ನಾನು ನಿಮ್ಮ ಜೊತೆಗಿದ್ದೇನೆ ಎಂದು ದಿವ್ಯಾಂಗರಿಗೆ ಅಭಯ ನೀಡಿದರು.

ದಿವ್ಯಾಂಗರ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ಕಛೇರಿಯನ್ನು ಒದಗಿಸಲಾಗಿದೆ. ಕೆಲಸ ಕಾರ್ಯಗಳು ಇನ್ನಷ್ಟು ಅಚ್ಚುಕಟ್ಟಾಗಿ ನಡೆಯಲು ಟೇಬಲ್, ಕಂಪ್ಯೂಟರ್ ಸೇರಿದಂತೆ ಇನ್ನಿತರೆ ಅಗತ್ಯ ಸಲಕರಣೆಗಳನ್ನು ಒದಗಿಸಬೇಕು ಎಂಬ ಮನವಿಗೆ ಸ್ಪಂದಿಸಿದ ಶಾಸಕರು, ಕಛೇರಿ ನೀಡಿದ್ದೇನೆ. ಅವಶ್ಯಕ ಸಲಕರಣೆಗಳನ್ನು ನೀಡುತ್ತೇನೆ. ದಿವ್ಯಾಂಗರ ಅನುಕೂಲಕ್ಕಾಗಿ ಪ್ರಮಾಣಿಕವಾಗಿ ಸೇವೆ ಸಲ್ಲಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಫಲಾನುಭವಿ ವಿಶೇಷಚೇತನರಿಗೆ ಟ್ರೆöÊ ಸೈಕಲ್, ವೀಲ್ ಚೇರ್, ಕ್ರಚಸ್, ಬ್ಯಾಟರಿ ಚಾಲಿತ ಸೈಕಲ್, ಅಂಧರ ಕೋಲು, ಕೃತಕ ಕಾಲು, ಕೃತ ಕೈ, ಅಂಧರ ಮೊಬೈಲ್ ಫೋನ್ ಸೇರಿದಂತೆ 141 ಫಲಾನುಭವಿಗಳಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ಔರಾದ(ಬಿ) ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿAಗ್ ಠಾಕೂರ್, ಶಿವಜುಮಾರ ಘಾಟೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ಎಂಆರ್ ಡಬ್ಲ್ಯೂ ಬಸವರಾಜ ದೇಶಮುಖ ಸೇರಿದಂತೆ ಇತರರು ಉಪಸ್ಥಿತರಿದ್ದರು. ಚನ್ನಬಸಪ್ಪ ಪಾಟೀಲ ನಿರೂಪಿಸಿ ವಂದಿಸಿದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!