ನಾನು ಎಂಎಲ್ಸಿ ಆಗಲು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಬರೆದಂತಹ ಸಂವಿಧಾನವೇ ಕಾರಣ : ಎಂಎಲ್ಸಿ ಡಾ.ಎಮ್.ಜಿ.ಮುಳೆ

ಕರ್ನಾಟಕ ಸರ್ಕಾರದಲ್ಲಿ ನೂತನವಾಗಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿರುವ ಪ್ರಯುಕ್ತ  ಡಾ.ಎಮ್.ಜಿ.ಮುಳೆ  ರವರಿಗೆ ಪ್ರತಾಪೂರ ಗ್ರಾಮದ ಭೀಮನಗರದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

 

ಈ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂಎಲ್ಸಿ ಮಾರುತಿರಾವ ಮುಳೆ ರವರು ಕುಲ, ಜಾತಿ, ಮತ, ಧರ್ಮ ಎಂಬ ಭೇದ ಮರೆತು ನಾವೆಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ದೇಶದಲ್ಲಿ ಪ್ರತಿಭಾನ್ವಿತರಿಗೆ ಮುಕ್ತ ಅವಕಾಶ ಸಿಕ್ಕಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ದೇಶಕ್ಕಾಗಿ ಜೀವ ಕೊಟ್ಟ ಹೋರಾಟಗಾರರು, ಛತ್ರಪತಿ ಶಿವಾಜಿ ಮಹಾರಾಜ ಹಾಗೂ ದೇಶದ ಪ್ರಗತಿಗೆ ದುಡಿದ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರನ್ನು ಕೇವಲ ಒಂದೇ ಜಾತಿ, ಧರ್ಮಕ್ಕೆ ಸೀಮಿತ ಮಾಡಿ ಅವರ ಹೆಸರು ಕೆಡೆಸುವಂತಹ ಕೆಲಸ ಮಾಡಬಾರದು. ನಾನು ಇಂದು ವಿಧಾನಪರಿಷತ್ತಿನ ಸದಸ್ಯನಾಗಲು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಬರೆದಂತಹ ಸಂವಿಧಾನ ಕಾರಣವಾಗಿದೆ. ಒಂದು ವೇಳೆ ಇವತ್ತು ಸಂವಿಧಾನ ಇರದೇ ಹೋದರೆ ನಾನು ಇಂದು ವಿಧಾನಪರಿಷತ್ತಿನ ಸದಸ್ಯನಾಗಲು ಸಾಧ್ಯ ಇರಲಿಲ್ಲ ಎಂದು ಹೇಳಿದರು.

 

ಈ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ರವೀಂದ್ರ ಗುರೂಜಿ ಬೌದ್ಧಾಚಾರ್ಯ ರವರು ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಪನ್ಯಾಸಕ ನರಸಿಂಗ ರೆಡ್ಡಿ ಗದಲೇಗಾಂವ, ಡಾ.ದಿಲೀಪ ಶಿಂಧೆ, ರಾಜು ಚೌಧರಿ, ಚಾಮುಂಡಿ ಬೆಂಡೆ, ಮಾತನಾಡಿದರು. ಅತಿಥಿಗಳಾಗಿ ಅರ್ಜುನ ಕನಕ, ವಾರಿಸ್ ಅಲಿ, ತಹಸೀನ್ ಅಲಿ ಜಮಾದಾರ, ಗ್ರಾಮ ಅಧ್ಯಕ್ಷೆ ಶ್ರೀಮತಿ ಶೋಭಾ ರಾಜೇಶ ಮೇತ್ರೆ, ಯುವರಾಜ ಬೆಂಡೆ, ಖಾಸಿಂ ಬೇಗ್, ಕಿಶೋರ್ ಬಿರಾದಾರ, ದಯಾನಂದ ಬೆಲೂರೆ, ಸುರಜ್ ದಾವನಗಾಂವೆ, ವಿಎ ಸುಧೀರ್ ವಾಡೆಕರ್, ಗೌತಮ ಜಾಂತೆ, ವಿಜಯಕುಮಾರ ಡಾಂಗೆ, ರೈತ ಸಂಘದ ಶ್ರೀಮಂತ ಮಹಾಜನ, ಗ್ರಾಮ ಪಂಚಾಯತ ಸದಸ್ಯರುಗಳಾದ ಖಂಡೆರಾವ ಕುಲಕರ್ಣಿ, ಬಾಲಾಜಿ ಕಾಂಬಳೆ, ವಿದ್ಯಾಸಾಗರ ಉಡ್ಚನ, ಇಸ್ಮಾಯಿಲ್ ಬಡಾಯಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗೇಶ ಕಾಂಬಳೆ, ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿಯ ಪ್ರಮುಖರಾದ ಶೇಷೆರಾವ ಗಾಯಕವಾಡ, ಭಾವುರಾವ ಕಾಂಬಳೆ, ರಂಗರಾವ ಸೂರ್ಯವಂಶಿ, ಪ್ರಲ್ಹಾದ ಕಾಂಬಳೆ, ಸಿದ್ರಾಮ ಗಾಯಕವಾಡ, ವಿಲಾಸ ಗಾಯಕವಾಡ, ಪ್ರಕಾಶ ಖರ್ಗೆ, ರವಿ ಕಾಂಬಳೆ, ಭಾಗ್ಯವಾನ ಗಾಯಕವಾಡ, ಸಂದೇಶ ಕಾಂಬಳೆ, ಗೌತಮ ಖರ್ಗೆ, ವಿಜಯಕುಮಾರ ಸೂರ್ಯವಂಶಿ ಸೇರಿದಂತೆ ವೈಶಾಲಿ ಹಾಗೂ ರಮಾಬಾಯಿ ಮಹಿಳಾ ಮಂಡಳದ ಸರ್ವ ಸದಸ್ಯರು ಭಾಗವಹಿಸಿದ್ದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಮಾನವ ಬಂಧುತ್ವ ವೇದಿಕೆಯ ತಾಲೂಕಾ ಅಧ್ಯಕ್ಷ ಪಿಂಟು ಕಾಂಬಳೆ ಸ್ವಾಗತಿಸಿದರು, ಸಮತಾ ಸೈನಿಕ ದಳದ ದತ್ತಾತ್ರೇಯ ಸೂರ್ಯವಂಶಿ ವಂದಿಸಿದರು.