ಡಾಲರ್ ಎದುರು ಸಾರ್ವಕಾಲಿಕ ಪತನ ಕಂಡ ರೂಪಾಯಿ ಡಾಲರ್ ಎದುರು 84ರೂ ಗೆ ಕುಸಿದ ರೂ

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಸಾರ್ವಕಾಲಿಕ ಪತನ ಕಂಡಿದ್ದು, ಇದೇ ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 84 ರೂಪಾಯಿಗೆ ಕುಸಿದಿದೆ.

ಇದು, ಗುರುವಾರ ಮುಕ್ತಾಯಕ್ಕೆ ಇದ್ದ ಬೆಲೆಯಾದ 83.94 ರೂಪಾಯಿಗಳಿಗೆ ಹೋಲಿಸಿದರೆ 12 ಪೈಸೆಯಷ್ಟು ಕಡಿಮೆ. ಶುಕ್ರವಾರ 83.98 ರೂಪಾಯಿಯೊಂದಿಗೆ ದಿನದ ವಹಿವಾಟು ಅರಂಭವಾದರೆ, ಮಧ್ಯಂತರ ಅವಧಿಯಲ್ಲಿ ದಾಖಲೆ ಕನಿಷ್ಠ ಮಟ್ಟವನ್ನು ತಲುಪಿ 84.07 ರೂಪಾಯಿ ಆಗಿದೆ.

 

ಭಾರತೀಯ ರಿಸರ್ವ್ ಬ್ಯಾಂಕ್ ಈ ಮಿತಿಯನ್ನು ಎರಡು ತಿಂಗಳಿನಿಂದ ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ತೀಕ್ಷ್ಣ ಪ್ರಮಾಣದ ಚಂಚಲತೆಯನ್ನು ತಡೆಯುವ ಉದ್ದೇಶದಿಂದ ಶುಕ್ರವಾರ ಆರ್‌ಬಿಐ ಮಧ್ಯಪ್ರವೇಶ ಮಾಡಿದೆ.

 

ಕಾರ್ಯತಂತ್ರದ ಭಾಗವಾಗಿ 84 ರೂಪಾಯಿ ಮಿತಿಯನ್ನು ದಾಟಲು ಆರ್‌ಬಿಐ ಅವಕಾಶ ನೀಡಿದೆ ಎನ್ನುವುದು ಕೆಲ ಡೀಲರ್‌ಗಳ ಭಾವನೆ. ಇರಾನ್-ಇಸ್ರೇಲ್ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಲ್ಲಿ ಹೆಚ್ಚಿನ ಚಂಚಲತೆ ಸೃಷ್ಟಿಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈ ಅವಕಾಶ ಮಾಡಿಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 

ಅಮೆರಿಕದ ಫೆಡರಲ್ ರಿಸರ್ವ್, ನವೆಂಬರ್‌ನಲ್ಲಿ 50 ಮೂಲ ಅಂಶಗಳಷ್ಟು ದರವನ್ನು ಕಡಿತಗೊಳಿಸುವ ಮಬ್ಬು ನಿರೀಕ್ಷೆಯ ಹಿನ್ನೆಲೆಯಲ್ಲಿ ಡಾಲರ್‌ಗಳ ಬಲವರ್ಧನೆಯು, ರೂಪಾಯಿ ದುರ್ಬಲತೆಗೆ ಮತ್ತಷ್ಟು ಕೊಡುಗೆ ನೀಡಿದೆ.

 

ರೂಪಾಯಿಯ ಮೌಲ್ಯವನ್ನು 84ರ ಮಟ್ಟ ಮೀರಲು ಅವಕಾಶ ನೀಡುವ ಮೂಲಕ ಮುಂದಿನ ವಾರದ ಸಂಭಾವ್ಯ ಚಂಚಲತೆ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಲು ಇದು ಅರ್‌ಬಿಐಗೆ ಅವಕಾಶ ಕಲ್ಪಿಸಲಿದೆ.

 

ಕಳೆದ ಎರಡು ತಿಂಗಳುಗಳಲ್ಲಿ ಇತರ ಏಷ್ಯನ್ ಕರೆನ್ಸಿಗಳು ಶೇಕಡ 5ರಷ್ಟು ಬಲವರ್ಧನೆ ಪಡೆದಿದ್ದರೆ, ಭಾರತದ ರೂಪಾಯಿ ಸ್ಥಿರತೆ ಕಾಪಾಡಿಕೊಂಡಿತ್ತು. ಇದು ಕರೆನ್ಸಿ ವ್ಯತ್ಯಯವನ್ನು ನಿರ್ವಹಿಸುವಲ್ಲಿ ಆರ್‌ಬಿಐ ಸಕ್ರಿಯ ಪಾತ್ರವನ್ನು ಬಿಂಬಿಸುತ್ತದೆ.

 

ಈಕ್ವಿಟಿ ಮಾರುಕಟ್ಟೆಗಳಲ್ಲಿನ ಏರಿಕೆಯಿಂದ ಉತ್ತೇಜಿತಗೊಂಡ ರೂಪಾಯಿ ಕೇವಲ ಎರಡು ವಾರಗಳ ಹಿಂದೆ 83.5 ಕ್ಕೆ ಬಲಗೊಂಡಿತ್ತು. ಏರುತ್ತಿರುವ ಕಚ್ಚಾ ಬೆಲೆಗಳು ಮತ್ತು ಭಾರತೀಯ ಷೇರುಗಳಿಂದ ವಿದೇಶಿ ಹೊರಹರಿವು ಕೆಳಮುಖ್

error: Content is protected !!