ಹುಕ್ಕೇರಿ: ಮದಿಹಳ್ಳಿ ಗ್ರಾಮದ ಭಕ್ತರಿಗೆ ಬೇಡಿದ ವರವ
ನೀಡುವ ದೇವಿ, ದುಷ್ಟ, ದುರುಳರಿಗೆ ದುಃಸ್ವಪ್ನ, ಸಜ್ಜನರ ರಕ್ಷಕಿ ಎಂದೇ ರಾಜ್ಯಾದ್ಯಂತ ಪ್ರಸಿದ್ದಿ ಪಡೆದಿರುವ ಎಲ್ಲೆಡೆ ನವರಾತ್ರಿಯ ದುರ್ಗಾದೇವಿಯ ಪೂಜೆ ಎಲ್ಲ ಗ್ರಾಮಗಳಲ್ಲಿ ಎಲ್ಲ ಪಟ್ಟಣಗಳಲ್ಲಿ ನೆರವೇರಿಸುತ್ತಾರೆ . ಅದೇ ರೀತಿ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಸತತ 13 ವರ್ಷಗಳ ಕಾಲ ದುರ್ಗಾದೇವಿ ಪೂಜೆ ಪುನಸ್ಕಾರ ಎಲ್ಲವೂ ಸಾಂಪ್ರದಾಯಕ ಬದ್ಧವಾಗಿ ಊರಿನ ಎಲ್ಲ ಮುತ್ತೈದೆಯರು ಸೇರಿಕೊಂಡು ಗ್ರಾಮಕ್ಕೆ ಒಳ್ಳೆಯದಾಗಲಿ ಊರಿನ ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರತಿ ವರ್ಷದಂತೆ ಇದು ವರ್ಷ ಕೂಡ 9 ದಿನಗಳ ಕಾಲ ಆರಾಧನೆ ಮಾಡಿ . ಕೊನೆಯ ದಿನ ಊರಿನ ಮುತ್ತೈದೆ ಹೆಣ್ಣು ಮಕ್ಕಳಿಗೆ ಉಡಿತುಂಬುವ ಕಾರ್ಯಕ್ರಮ ಸರಳವಾಗಿ ನೆರವೇರಿಸಿ ಗುಡಿ ತುಂಬ ಕಾರ್ಯಕ್ರಮ ಮುಗಿದ ಮೇಲೆ ಎಲ್ಲ ಹೆಣ್ಣು ಮಕ್ಕಳಿಗೆ ಊರಿನ ಗ್ರಾಮಸ್ಥರಿಗೆ ಅನ್ನಪ್ರಸಾದ ವ್ಯವಸ್ಥೆ ತಳದೇವರ ದೇವಸ್ಥಾನ ಕುರಬೇಟಿ ಓಣಿಯ ಭಕ್ತರು ಹಾಗೂ ಗ್ರಾಮಸ್ಥರು ಸೇರಿಕೊಂಡು ಎಲ್ಲ ಕಾರ್ಯವು ಚೆನ್ನಾಗಿ ನೆರವೇರಿಸುತ್ತಿದ್ದಾರೆ ಊರಿನ ಗ್ರಾಮಸ್ಥರಿಗೆ ಎಲ್ಲರಿಗೂ ದುರ್ಗಾದೇವಿ ಸಕಲ ಆಯುಷ್ಯ ಆರೋಗ್ಯ ಸಿರಿ ಸಂಪತ್ತು ಕೊಟ್ಟು ಕಾಪಾಡಲಿ ಸರ್ವೇ ಜನಾ ಸುಖಿನೋ ಭವಂತು
ಅಪ್ಪಯ್ಯ ಸಿದ್ದಪ್ಪ ಕುರಬೇಟಿ. ಕಾಡಪ್ಪ ಭೀಮಪ್ಪ ಕುರುಬೇಟಿ. ಸಿದ್ದಪ್ಪ ಅರ್ಜುನ್ ಭಂಡಾರಿ. ಬಸವಂತ ಬುಗಡಿಕಟ್ಟಿ . ಮಲ್ಲಪ್ಪ ಕುರುಬೇಟ. ನಾಗಪ್ಪ ಕಾಡಪ್ಪ ಬನ್ನನ್ನವರ. ವಿಜಯ ಕಲ್ಲಪ್ಪ ಮಡಿವಾಳ. ಬಸವರಾಜ್ ಗೋಪಾಲ್ ಬಾಗಿ. ಮಲ್ಲಿಕಾರ್ಜುನ್ ಬೀರಪ್ಪ ಗೋಟರಿ . ನಾರಾಯಣ ರಾಮನಕಟ್ಟಿ. ಶಿವಾಜಿ ನಾಗಪ್ಪ ಮುತ್ತಗಿ. ಅಂಬರೀಶ್ ಲಗಮಪ್ಪ ಬನ್ನಕ್ಕಗೋಳ. ಭೀಮಶಿನ್ ಬಾಳಪ್ಪ ಬಾಗಿ. ಬಸವರಾಜ್ ಮಲ್ಲಪ್ಪ ಮಗದುಮ್ಮ. ಮಹಾದೇವ ರಾಮಪ್ಪ ಕುರುಬೇಟ. ಸಿದ್ದಲಿಂಗ ಬಾಬುರಾವ್ ನಾವ್ವಿ. ಸತೀಶ್ ಹಾಲಪ್ಪ ನೆಳ್ಳಿ .ರಾಮಚಂದ್ರ ಅರ್ಜುನ್ ಭಂಡಾರಿ. ಭೀಮಪ್ಪ ರಾಮಪ್ಪ ಬನ್ನನ್ನವರ. ಮಲ್ಲಿಕಾರ್ಜುನ ನಿಂಗಪ್ಪ ಹೊಸೂರಿ. ಹಾಗೂ ಮದಿಹಳ್ಳಿ ಗ್ರಾಮದ ಸಮಸ್ತ ಯುವಕ ಮಿತ್ರರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಮ್ ಎಚ್