ಶಿಕ್ಷಣ ಜೊತೆಗೆ ಸೇವೆ ಮತ್ತು ಸಮಾಜಕ್ಕಾಗಿ ನಾವು ಎಂಬ ಧ್ಯೆಯೋದ್ದೇಶದೊಂದಿಗೆ ರಾಷ್ಟ್ರ ಕಟ್ಟುವ ಕೆಲಸದಲ್ಲಿ ಎನ್ಎಸ್ಎಸ್ ಪ್ರಮುಖ ಪಾತ್ರ ವಹಿಸಿದೆ. ನೈರ್ಮಲ್ಯ,ಶಿಕ್ಷಣ ಆರೋಗ್ಯ, ಕೃಷಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮೃದ್ಧಿ ಹೊಂದಲು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ವಿದ್ಯಾರ್ಥಿ-ಯುವಜನಾಂಗ ಶ್ರಮಿಸಬೇಕೆಂದು ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಡಮನಿ ಅಭಿಪ್ರಾಯಪಟ್ಟರು. ಕಾಳಗಿ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಗೋಟೂರು ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಪ್ರಜ್ಞೆ ಮತ್ತು ಪರಿಶ್ರಮದಿಂದ ಓದಬೇಕು. ಬಹುಮುಖ ವ್ಯಕ್ತಿತ್ವ ಬೆಳಸಿಕೊಂಡು ವಿದ್ಯಾರ್ಥಿಗಳು ಜ್ಞಾನದ ಚಿಲುಮೆಯಾಗಬೇಕು ಎಂದರು. ಎನ್ ಎಸ್ ಎಸ್ ಶಿಬಿರ ಉದ್ದೇಶಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಕುಮಾರ್ ಕಮಕನೂರ, ಪ್ರಭು ಬಾವಿ, ಸಿದ್ದಪ್ಪ ಶೆಟ್ಟಿ ಮುಂತಾದವರು ಮಾತನಾಡಿದರು. ಪ್ರಾಚಾರ್ಯರಾದ ಶಾಂತಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಶಂಕರ ಬಿ. ಕೊಡದೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅವಿನಾಶ ಮೂಲಿಮನಿ, ಪರಮೇಶ್ವರ್ ರೆಡ್ಡಿ, ಮಲ್ಲಿಕಾರ್ಜುನ ಸಿಂಗೆ,ಬಾಬು ಬುಡನೋರ,ಉಪನ್ಯಾಸಕರು ಲಷ್ಮಿಕಾಂತ್ ಗಂಗಾ,ಸಚಿನ್ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಪುಷ್ಪ ವೃಷ್ಟಿಮಾಡಿ ಸ್ವಾಗತಿಸಿದರು.ಅರ್ಚನಾ ಕೋರವಾರ ನಿರೂಪಿಸಿದರು.ಪರವಿನಾ ವಂದಿಸಿದರು.
ವರದಿ : ರಮೇಶ್ ಎಸ್ ಕುಡಹಳ್ಳಿ ಜೆಕೆ ಕನ್ನಡ ನ್ಯೂಸ್ ಕಾಳಗಿ
