ದ್ವೇಷ ರಾಜಕಾರಣ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗುವಿನ ಸಾವು – ಶಿವಸೇನಾ ಮುಖಂಡ ಸತೀಶ ಪಾಟೀಲ

ವಿಜಯಪುರ ನಗರದ ವಾರ್ಡ ನಂಬರ 24 ಜೆ.ಎಮ್.ರೋಡ ಹಿಂದೆ ಬರುವ ಕುಂಬಾರ ಓಣಿಯ ಗಟ್ಟರನಲ್ಲಿ ಎರಡ ವರ್ಷ ಮಗು ಬಿದ್ದು ಸಾವನಪ್ಪಿದೆ ನಗರದಲ್ಲಿ ದ್ವೇಷ ರಾಜಕಾರಣದಿಂದ ಕೆಲ ಮುಸ್ಲಿಂ ಜನಸಂಖ್ಯೆ ಜಾಸ್ತಿ ಇರುವ ವಾರ್ಡ್ ಗಳಲ್ಲಿ ನಿಜವಾಗಿಯೂ ಯಾವುದೆರೀತಿಯ ಮೂಲಭೂತ ಸೌಕರ್ಯಗಳನ್ನ ಪಾಲಿಕೆ ಅಧಿಕಾರಿಗಳು ಶಾಸಕರ ಹೇಳಿಕೆ ಹಾಗೂ ನಿರ್ದೇಶನದಿಂದ ಮಾಡುತ್ತಿಲ್ಲವೆ ಎಂಬ ಸಂಶಯ ನಗರದ ಜನತೆಗೆ ಕಾಡುತ್ತಿದೆ ಏನೆ ಇರಲಿ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಗ್ದ ಹಸುಗುಸಿನ ಸಾವು ಸಂಬವಿಸಿದ್ದು ಮಾತ್ರ ಘೋರ ಅನ್ಯಾಯ ಈ ಸಾವಿಗೆ ಯಾರು ಹೋಣೆ ? ಕಳೆದ ತಿಂಗಳು 23/09/2024 ರಂದು ನಗರದಲ್ಲಿ ಬಾರಿ ಮಳೆ ಆದಾಗ ಪಾಲಿಕೆ ಆಯುಕ್ತರು , ಮೇಯರ ಹಾಗೂ ಜಿಲ್ಲಾಅಧಿಕಾರಿಗಳು ವೀಕ್ಷಣೆ ಮಾಡಿ ನಿರ್ದೇಶನ ನೀಡಿದ್ದು ಕೇವಲ ನಾಮಕೆ ವಾಸತೆ ಅಥವಾ ಕಾಟಾಚಾರಕ್ಕೆ ಎಂಬುದು ಎದ್ದು ಕಾಣುತ್ತಿದೆ , ಕೂಡಲೆ ಸಚಿವರು ಶಾಸಕರು ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರು ಸೇರಿ ಈ ಸಾವಿಗೆ ನ್ಯಾಯ ಸಿಗುವಂತೆ ಮಾಡಿ ಆ ಕುಟುಂಬಕ್ಕೆ ಸಾಂತ್ವಾನ ಹೇಳಿ ಜೋತೆಗೆ ಕೂಡಲೆ ರಾಜಕಲುವೆ ಒತ್ತುವರಿ ತೆರವುಗೋಳಿಸಿ ಹಾಗೂ ನಗರದಲ್ಲಿ ಆತಂಕ ಮೂಡಿಸುವ ಗಟಾರಗಳ ದುರಸ್ತಿ ಮಾಡಿ ನೀರಿನ ಸರಾಗ ಓಟಕ್ಕೆ ಅನುಕೂಲ ಮಾಡಿಕೊಡಲೆ ಬೇಕು ಎಂದು ಪ್ರಕಟಣೆಯಲ್ಲಿ ಶಿವಸೇನಾ ಮುಖಂಡ ಸತೀಶ ಪಾಟೀಲ ಆಗ್ರಹಿಸಿದ್ದಾರೆ,

ವರದಿ : ಅಜೀಜ್ ಪಠಾಣ್.