13–14 ವರ್ಷದೊಳಗಿನ Miss India Junior ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೀದರ ಜಿಲ್ಲೆಗೆ ಗೌರವ ತಂದ ಪೂರ್ವಿ ಸಂಜೀವಕುಮಾರ್ ಬೀರಾದಾರ

ಕರ್ನಾಟಕದ ಕಿರೀಟವೆಂದು ಖ್ಯಾತಿಯಾದ ಬೀದರ ಜಿಲ್ಲೆಯಲ್ಲಿ, ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ಬಗದಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಜೀವಕುಮಾರ ಬೀರಾದಾರ ರವರ ಮೂರು ಪುತ್ರಿಯರಲ್ಲಿ ಕಿರಿಯ ಪುತ್ರಿಯಾದ ಪೂರ್ವಿ ಬೀರಾದಾರ ರವರು, ರಾಜಸ್ಥಾನದ ಜೈಪುರದಲ್ಲಿ ನಡೆದ 13–14 ವರ್ಷದೊಳಗಿನ Miss India Junior ಸ್ಪರ್ಧೆಯಲ್ಲಿ ಭಾಗವಹಿಸಿ, ಒಟ್ಟು 172 ಸ್ಪರ್ಧಿಗಳಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಗ್ರ್ಯಾಂಡ್ ಫಿನಾಲೆ ಸ್ಪರ್ಧೆಯಲ್ಲೂ ದ್ವಿತೀಯ ಸ್ಥಾನವನ್ನು ಪಡೆದು, ರಾಷ್ಟ್ರಮಟ್ಟದಲ್ಲಿ ಬೀದರ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಕುಮಾರಿ ಪೂರ್ವಿ ಬೀರಾದಾರ ರವರು ತಮ್ಮ ಪರಿಶ್ರಮ ಹಾಗೂ ಪೋಷಕರ ಸಹಕಾರದಿಂದ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದು, ಅವರ ಈ ಸಾಧನೆ ಬೀದರ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು SP ಪ್ರದೀಪ್ ಗುಂಟಿ ಶುಭ ಹಾರೈಸಿದ್ದಾರೆ,

Miss India Junior ವಿಭಾಗದಲ್ಲಿ ಕಿರೀಟ ಗೆದ್ದಿರುವುದು ಬೀದರ ಜಿಲ್ಲಾ ಪೊಲೀಸ್ ಇಲಾಖೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಕುಮಾರಿ ಪೂರ್ವಿ ಬೀರಾದಾರ ರವರಿಗೆ ಸಮಸ್ತ ಬೀದರ ಜಿಲ್ಲಾ ಪೊಲೀಸ್ ಪರವಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಐಪಿಎಸ್ ಪ್ರದೀಪ್ ಗುಂಟಿ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!