ಕರ್ನಾಟಕ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಔರಾದ (ಬಾ) ತಾ. ಔರಾದ (ಬಾ) ಜಿಲ್ಲಾ ಬೀದರ. (ಕ.ರಾ).
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮನವಿ ಮಾಡಿದರು ಮಾದಿಗ ಸಮುದಾಯಕ್ಕೆ ನ್ಯಾಯವಾಗಿ ದೊರಕಬೇಕಾಗಿದ್ದ ಮೀಸಲಾತಿ ಪ್ರಮಾಣ ದೊರೆಯದೆ ಇದ್ದುದರಿಂದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಮೂವತ್ತು ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ ಫಲ ಮಾನ್ಯ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಇವತ್ತಿನ ರಾಜ್ಯ ಸರ್ಕಾರಕ್ಕೆ ಇದೆ ಎಂದು ಐತಿಹಾಸಿಕ ತೀರ್ಪನ್ನು ನೀಡಿದೆ. ಆದ್ದರಿಂದ ದಿನಾಂಕ: 28-10-2024 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕು.
ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳು ವಿಧಾನ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡು, ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿ ಎರಡು ತಿಂಗಳ ಒಳಗಾಗಿ ಒಳ ಮೀಸಲಾತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ ಮುಂದುವರೆದು ಖಾಲಿಯಿರುವ ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿದಿದ್ದಾರೆ.
ತೆಲಂಗಾಣ ಮಾದರಿಯಂತೆ ಕರ್ನಾಟಕದಲ್ಲಿಯೂ ತುಂಬುವ ಎಲ್ಲಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕು, ಕರ್ನಾಟಕ ಲೋಕಸೇವಾ ಆಯೋಗ ಕರೆದಿರುವ 384 ಗೆಜೆಟೆಡ್ ಪ್ರಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯ ಅಧಿಸೂಚನೆ ಹೊರೆಡಿಸಿರುವ ನೋಟಿಫಿಕೇಷನನ್ನು ಕೂಡಲೇ ತಡೆ ಹಿಡಿಯಬೇಕು.ಒಳ ಮೀಸಲಾತಿ ಜಾರಿಗೆ ಆಗುವವರೆಗೂ ರಾಜ್ಯ ಸರ್ಕಾರದ ಯಾವುದೇ ಇಲಾಖೆಗಳ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಗಳು ನಡೆಯಬಾರದು ಹಾಗೂ ಸರ್ಕಾರದ ಯೋಜನೆಗಳಲ್ಲಿ ಆರ್ಥಿಕ ಮೀಸಲಾತಿ (SCSP/TSP), ಕೆ.ಐ.ಎ.ಡಿ.ಬಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯೂ ಸ್ಥಗಿತಗೊಳಿಸಬೇಕು.
ಸರ್ವರಿಗೂ ಸಮ ಪಾಲು, ಸಮ ಬಾಳು, ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಟ ಮಾಡಿಕೊಂಡು ಬಂದಿರುವ ತಮ್ಮ ನೇತೃತ್ವದಲ್ಲಿ ಈ ಶೋಷಿತ, ಅಸ್ಪಶ್ಯ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿ ಜಾರಿಗೆ ತಕ್ಷಣ ಆದೇಶ ಹೊರಡಿಸಬೇಕೆಂದು ವಿನಯಪೂರ್ವಕವಾಗಿ ವಿನಂತಿಸುತ್ತೇವೆ ಎಂದು ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಮೆಮೊಡೇಮ್ ಅನ್ನು ಮಾನ್ಯ ಉಪ ತಹಸಿಲ್ದಾರ್ ಸಂತಪುರ್ ಅವರ ಮೂಲಕ ನೀಡಿದರು ಇದೇ ಸಂದರ್ಭದಲ್ಲಿ ಔರಾದ್ ಪಟ್ಟಣ ಪಂಚಾಯತ್ ಸದಸ್ಯರಾದ ಬಂಟಿ ದರಬಾರೆ ರವರ ನೇತೃತ್ವದಲ್ಲಿ ಈ ಹೋರಾಟ ನಡೆಸಲಾಯಿತು
ಈ ಸಂಧರ್ಭದಲ್ಲಿ ಹಿರಿಯ ಮುಖಂಡರು ಆದ ಶುಭಾಷ್ ನಾಗುರೆ, ಬಸ್ವರಾಜ್ ಮಾಳ್ಗೆ,
ಧನರಾಜ್ ಲಾಧಾ, ಸಮಾಧಾನ ಸಂತಪುರ್,
ಕಮಲಹಾಸನ ಭಾವಿದೊಡ್ಡಿ,
ಎಷಪ್ಪಾ ಶೇಂಬೆಳ್ಳಿ, ಲಾಖನ್ ಲಾಧೇಕರ್, ಒಳಮೀಸಲಾತಿ ಹೋರಾಟ
ಸಮಿತಿ ಅಧ್ಯಕ್ಷರು ಸುಂದರಾಜ್ ಮುಧಾಳೆ, ದಾವಿದ್ ಏಕಲಾರೆ,ಸಿದ್ಧಾರ್ಥ್ ಯೋಗಿ,ಅಮೃತ್ ಚಟನಾಳ್,ಅಭ್ರಾಂ ಲಾಧಾ, ಗೌತಮ್ ಲಾಧಾ, ಧನರಾಜ್ ಸೋನೆ,ರಾಮ ವಾಡೇಕರ್ ಹಾಗೂ ನೂರಾರು ಕಾರ್ಯಕರ್ತರು ಉಸ್ಥಿತರಿದ್ದರು