ಅನುಭವ ಮಂಟಪ ಆವರಣದಲ್ಲಿ ನಡೆಯುತ್ತಿರುವ 45ನೇ ಶರಣ ಕಮ್ಮಟ – ಅನುಭವ ಮಂಟಪ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಸದರಾದ ಸಾಗರ ಈಶ್ವರ ಖಂಡ್ರೆ ಅವರು ಭಾಗವಹಿಸಿ ಮಾತನಾಡಿದರು.
ಶರಣ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಉಲ್ಲೇಖಿಸಿದ ಅವರು, ಬಸವಣ್ಣ ಮತ್ತು ಇತರ ಶರಣರ ಸಂದೇಶಗಳು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸದ್ಭಾವನೆ ಎಂಬ ದಾರ್ಶನಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಉತ್ಸವವು ಶರಣ ಸಿದ್ಧಾಂತಗಳ ಪ್ರಚಾರಕ್ಕಾಗಿ ಮತ್ತು ಸಾರ್ವಜನಿಕರಲ್ಲಿ ಶರಣರ ದಾರ್ಶನಿಕ ಬೋಧನೆಗಳ ಅರ್ಥವನ್ನು ಮೂಡಿಸಲು ಅತ್ಯಂತ ಮಹತ್ವದ ವೇದಿಕೆಯಾಗಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.
ವರದಿ :ರಾಜೇಂದ್ರ ಪ್ರಸಾದ್